ಕಲಬುರಗಿ: ನಾಪತ್ತೆಯಾಗಿದ್ದ ದಂಪತಿ ಶವವಾಗಿ ಪತ್ತೆಯಾದ ಘಟನೆ ಕಲಬುರಗಿಯ ಚಿಂಚೋಳಿ ತಾಲೂಕಿನಲ್ಲಿ ನಡೆದಿದೆ.
ಅಜಯ್ (30) ಹಾಗೂ ಜ್ಯೋತಿ (25) ಶವವಾಗಿ ಪತ್ತೆಯಾದ ದಂಪತಿ. ಅಜೇಯ್ ಹಾಗೂ ಜ್ಯೋತಿ ಜಿಲ್ಲೆಯ ಚಿಂಚೋಳಿ ತಾಲೂಕಿನ ನಿಡಗುಂದಾ ಗ್ರಾಮದ ನಿವಾಸಿಗಳಾಗಿದ್ದು, ನವೆಂಬರ್ ಎರಡರಂದು ಗ್ರಾಮದಿಂದ ದಿಡೀರ್ ನಾಪತ್ತೆಯಾಗಿದ್ದರು.
ದುಷ್ಕರ್ಮಿಗಳು ದಂಪತಿಯನ್ನು ಹುಲ್ಲಿನ ಬಣವೆಯಲ್ಲಿ ಹಾಕಿ ಸುಟ್ಟು ಕೊಲೆ ಮಾಡಿದ್ದಾರೆ. ಅಜಯ್ ಹಾಗೂ ಜ್ಯೋತಿ ಪ್ರೀತಿಸಿ ಮದುವೆಯಾಗಿದ್ದರು. ಒಂದೂವರೆ ವರ್ಷದಿಂದ ಅಜಯ್ ಮತ್ತು ಜ್ಯೋತಿ ಸಂಸಾರ ಮಾಡುತ್ತಿದ್ದರು. ಆದರೆ ಅಷ್ಟರಲ್ಲಿಯೇ ಜ್ಯೋತಿ ಸಹೋದರ ರವಿ ವಧುದಕ್ಷಿಣೆಗಾಗಿ ಕಿರುಕುಳ ಕೊಡಲು ಶುರು ಮಾಡಿದ್ದನು. ಅಷ್ಟೇ ಆಲ್ಲದೇ ಈ ಜೋಡಿಯನ್ನ ಕಿಡ್ನಾಪ್ ಮಾಡಿ ಅಜ್ಞಾತ ಸ್ಥಳದಲ್ಲಿಟ್ಟಿದ್ದಾನೆ ಎಂದು ಅಜಯ್ ತಾಯಿ ಆರೋಪ ಮಾಡಿದ್ದರು.
ವಧುದಕ್ಷಿಣೆ ಅನ್ನೋ ಪದ್ಧತಿ ಇರುವುದು ಪಾರ್ದಿ ಜನಾಂಗದಲ್ಲಿ. ಹೀಗಾಗಿ ಪಾರ್ದಿ ಸಮುದಾಯಕ್ಕೆ ಸೇರಿದ ಅಜಯ್ ತನ್ನ ತಂಗಿ ಜ್ಯೋತಿಯನ್ನು ಪ್ರೀತಿಸಿ ಮದುವೆಯಾಗಿದ್ದಾನೆ. ಆದ್ದರಿಂದ ಪದ್ಧತಿ ಪ್ರಕಾರ ವಧುದಕ್ಷಿಣೆ ಕೊಟ್ಟಿಲ್ಲ. ಹೀಗಾಗಿ ಟಾರ್ಚರ್ ಕೊಟ್ಟಿದ್ದಾನೆ ಅನ್ನೋ ಮಾತು ಕೇಳಿ ಬರುತ್ತಿತ್ತು. ವಧು ದಕ್ಷಿಣೆ ನೀಡದೆ ಇದ್ದಿದ್ದಕ್ಕೆ ಸೊಸೆಯಾಗಿರುವ ಜ್ಯೋತಿ ಸಹೋದರರು ಅಪಹರಿಸಿದ್ದಾರೆ ಎಂದು ಅಜಯ್ ತಾಯಿ ದೂರಿನಲ್ಲಿ ಉಲ್ಲೇಖಿಸಿದ್ದರು.
ಅಜಯ್ ಈ ಹಿಂದೆ ಮಹಾರಾಷ್ಟ್ರದಲ್ಲಿ ಮದುವೆಯಾಗಿದ್ದು, ಮಕ್ಕಳಿವೆ. ಇತ್ತ ಜ್ಯೋತಿಯನ್ನು ಪ್ರೀತಿಸಿ ಎರಡನೇ ಮದುವೆ ಆಗಿದ್ದನು. ಅಜಯ್ ಮತ್ತು ಜ್ಯೋತಿ ನಾಪತ್ತೆಯಾಗಿರುವ ಕುರಿತು ಸುಲೇಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಪೊಲೀಸರನ್ನು ಕೇಳಿದರೆ ತನಿಖೆ ಮುಗಿದ ನಂತರ ಎಲ್ಲ ಗೊತ್ತಾಗಲಿದೆ ಎಂದು ಕಲಬುರಗಿಯ ಹೆಚ್ಚುವರಿ ಎಸ್‍ಪಿ ಜಯಪ್ರಕಾಶ್ ಹೇಳಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv