ದಾವಣಗೆರೆ: ಮೂರು ದಿನಗಳ ಹಿಂದಷ್ಟೇ ಪ್ರೀತಿಸಿ ಮದುವೆಯಾಗಿದ್ದ ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಾವಣಗೆರೆ ತಾಲೂಕಿನ ಗುಡಾಳು ಗ್ರಾಮದಲ್ಲಿ ನಡೆದಿದೆ.
ನಟರಾಜ್(40) ಮತ್ತು ಪಲ್ಲವಿ (24) ಆತ್ನಹತ್ಯೆಗೆ ಶರಣಾದ ದಂಪತಿ. ಈ ಇಬ್ಬರೂ ಮೂರು ದಿನಗಳ ಹಿಂದಷ್ಟೇ ಪ್ರೀತಿಸಿ ಮದುವೆಯಾಗಿದ್ದರು. ನಟರಾಜ್‍ಗೆ ಮೊದಲ ಪತ್ನಿ ತೀರಿ ಹೋಗಿದ್ದು 15 ವರ್ಷದ ಮಗ ಕೂಡ ಇದ್ದನು. ಹೀಗಾಗಿ ಪಲ್ಲವಿ ಪೋಷಕರು ಎರಡನೇ ಮದುವೆಯಾಗಿದ್ದಕ್ಕೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.
- Advertisement -
- Advertisement -
ಯುವತಿಯ ಪೋಷಕರ ಕಿರುಕುಳಕ್ಕೆ ಬೇಸತ್ತು ನವದಂಪತಿ ನೇಣಿಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ. ತಂದೆ ನಟರಾಜ್ ಆತ್ಮಹತ್ಯೆ ಮಾಡಿಕೊಂಡ ದೃಶ್ಯ ನೋಡಿ ಮನನೊಂದ ಮಗ ಪ್ರದೀಪ್ ಕೂಡ ನೇಣಿಗೆ ಶರಣಾಗಿದ್ದಾನೆ. ಸ್ಥಳಕ್ಕೆ ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
- Advertisement -
ಈ ಸಂಬಂಧ ದಾವಣಗೆರೆ ಗ್ರಾಮಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.