ಜೈಪುರ: ಮದುವೆಯು ಹೆಣ್ಣು ಹಾಗೂ ಗಂಡಿನ ಪ್ರಮುಖ ಘಟ್ಟವಾಗಿರುತ್ತದೆ. ಇಬ್ಬರೂ ಮದುವೆ ಬಗ್ಗೆ ಅನೇಕ ರೀತಿಯ ಕನಸುಗಳನ್ನು ಕಟ್ಟಿರುತ್ತಾರೆ. ಅದರಲ್ಲೂ ಮದುವೆ (Marriage) ಸಮಯದಲ್ಲಿ ದಿಬ್ಬಣಕ್ಕೆ ಹೋಗುವಾಗ ಕೆಲವರು ಬಸ್, ಕುದುರೆ, ಲಾರಿ, ಬೈಕ್ ಹೀಗೆ ವಿವಿಧ ರೀತಿಯಲ್ಲಿ ಬರುವುದು ಇತ್ತೀಚಿನ ದಿನಗಳಲ್ಲೆಂತೂ ಸಾಮಾನ್ಯವಾಗಿದೆ. ಆದರೆ ಇಲ್ಲೊಂದು ಜೋಡಿ (Couple) ಮದುವೆಗೆಂದು ಒಂದು ವಿಮಾನವನ್ನೇ (Flight) ಬುಕ್ ಮಾಡಿದ್ದಾರೆ.
ವರ ಮತ್ತು ವಧು ಇಬ್ಬರು ಸೇರಿ ತಮ್ಮ ಮದುವೆಗೆ ಸಂಬಂಧಿಗಳು, ಸ್ನೇಹಿತರು ಹಾಜರಾಗಲು ವಿಮಾನವನ್ನೇ ಬುಕ್ ಮಾಡಿದ್ದಾರೆ. ಇವರು ಮಹಾರಾಷ್ಟ್ರದ ಪುಣೆಯವರಾಗಿದ್ದು, ಮದುವೆ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ನಡೆಯುತ್ತಿದೆ ಎಂದು ವಧುವಿನ ಸಹೋದರಿ ತನ್ನ ಇನ್‍ಸ್ಟಾಗ್ರಾಮ್‍ನಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದ್ದು, ತಾವೆಲ್ಲರೂ ಸಹೋದರಿಯ ಮದುವೆಗೆ ಹೋಗುತ್ತಿದ್ದೇವೆ ಎಂದು ತಿಳಿಸಿದ್ದಾರೆ.
View this post on Instagram
ವೀಡಿಯೋದಲ್ಲಿ ವರ ಹಾಗೂ ವಧುವಿನ ಕಡೆಯವರು ಮದುವೆಗೆ ಹೋಗಲೆಂದು ವಿಮಾನದಲ್ಲಿ ಕೂತಿದ್ದಾರೆ. ಅವರೆಲ್ಲರೂ ಸಂತೋಷದಿಂದ ಕೈ ಬೀಸುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ವೃದ್ಧೆಯನ್ನು ಕೊಂದು, ಕಬೋರ್ಡ್‌ನಲ್ಲಿ ಸುತ್ತಿಟ್ಟು ಅನ್ಯಕೋಮಿನ ಮಹಿಳೆ ಎಸ್ಕೇಪ್
ಈ ವೀಡಿಯೋಕ್ಕೆ ಅನೇಕ ನೆಟ್ಟಿಗರು ಕಾಮೆಂಟ್ ಮಾಡಿದ್ದು, ಅದರಲ್ಲಿ ಒಬ್ಬಾತ ನನಗೆ ನನ್ನ ಜೀವನದಲ್ಲಿ ಬೇಕಾಗಿರುವುದು ಈ ರೀತಿಯ ಹಣ ಎಂದು ತಿಳಿಸಿದ್ದಾನೆ. ಇನ್ನೊಬ್ಬ ವಾವ್.. ಪೂರ್ಣ ವಿಮಾನವನ್ನು ಮದುವೆಗೆ ಕಾಯ್ದಿರಿಸಲಾಗಿದೆ ಎಂದು ಆಶ್ಚರ್ಯ ಪಟ್ಟಿದ್ದಾನೆ. ಇದನ್ನೂ ಓದಿ: ಅಪರಿಚಿತ ವ್ಯಕ್ತಿ ನೀಡಿದ ಚಾಕ್ಲೆಟ್ ಸೇವಿಸಿ 17 ವಿದ್ಯಾರ್ಥಿಗಳು ಅಸ್ವಸ್ಥ- ಆರೋಪಿಗಾಗಿ ಹುಡುಕಾಟ