ನವದೆಹಲಿ: ಕಲುಷಿತ ಗಾಳಿಯನ್ನು ಶುದ್ಧ ಗಾಳಿಯಾಗಿ ಪರಿವರ್ತಿಸುವ ದೇಶದ ಮೊಟ್ಟಮೊದಲ ಹೊಗೆ ಗೋಪುರವನ್ನು (ಸ್ಮಾಗ್ ಟವರ್) ದೆಹಲಿಯ ಕನ್ನಾಟ್‍ಪ್ಲೇಸ್‍ನಲ್ಲಿ ನಿರ್ಮಿಸಲಾಗಿದೆ.
Advertisement
ಈ ಸ್ಮಾಗ್ ಟವರ್ ಅಶುದ್ಧ ಗಾಳಿಯನ್ನು ಗೋಪುರದ ಮೇಲ್ಭಾಗದಿಂದ ಹೀರಿಕೊಂಡು ಪರಿಶುದ್ಧ ಗಾಳಿಯನ್ನು ತನ್ನ ಬುಡದಿಂದ ಹೊರಹಾಕುತ್ತದೆ. ಪ್ರತಿ ಸೆಕೆಂಡಿಗೆ 1,000 ಕ್ಯೂಬಿಕ್ ಮೀಟರ್‌ನಷ್ಟು ಗಾಳಿಯನ್ನು ಇದು ಸ್ವಚ್ಛಗೊಳಿಸುತ್ತದೆ. ಇದನ್ನೂ ಓದಿ: ಹುಟ್ಟುಹಬ್ಬದ ದಿನ 12ನೇ ಮಹಡಿಯಿಂದ ಬಿದ್ದು ಪ್ರಾಣ ಬಿಟ್ಟ ಮಗು
Advertisement
बधाई दिल्ली। प्रदूषण के ख़िलाफ़ युद्ध में दिल्ली में देश के पहले स्मॉग टावर की शुरुआत की। अमेरिकी तकनीक से बना ये स्मॉग टावर हवा में प्रदूषण की मात्रा को कम करेगा।
पायलट आधार पर शुरू हुए इस प्रोजेक्ट के नतीजे बेहतर रहे तो पूरी दिल्ली में ऐसे और स्मॉग टावर लगाए जाएंगे। pic.twitter.com/gqgh0MzyuJ
— Arvind Kejriwal (@ArvindKejriwal) August 23, 2021
Advertisement
ಮಾಲಿನ್ಯದ ವಿರುದ್ಧದ ಯುದ್ಧದಲ್ಲಿ ದೇಶದಲ್ಲೇ ಮೊದಲ ಹೊಗೆ ಗೋಪುರವನ್ನು ದೆಹಲಿಯಲ್ಲಿ ಆರಂಭಿಸಲಾಯಿತು. ಅಮೆರಿಕದ ತಂತ್ರಜ್ಞಾನದಿಂದ ಮಾಡಿದ ಈ ಹೊಗೆ ಗೋಪುರವು ಗಾಳಿಯಲ್ಲಿನ ಮಾಲಿನ್ಯದ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಟಾಟಾ ಸಂಸ್ಥೆ, ಐಐಟಿ ಬಾಂಬೆ, ಐಐಟಿ ದೆಹಲಿ ತಜ್ಞರ ಮುಂದಾಳತ್ವದಲ್ಲಿ ಇದನ್ನು ಪ್ರಾಯೋಗಿಕವಾಗಿ ನಿರ್ಮಿಸಲಾಗಿದೆ. ಇದು ಉತ್ತಮ ಫಲಿತಾಂಶ ಕೊಟ್ಟರೆ ದೆಹಲಿಯ ವಿವಿಧ ಭಾಗದಲ್ಲಿ ಇಂಥ ಮತ್ತಷ್ಟು ಗೋಪುರಗಳನ್ನು ನಿರ್ಮಿಸಲಾಗುತ್ತದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.