ಜೈಪುರ: ಪೇದೆಯೊಬ್ಬರು ದೇಶದ ಅತೀ ದೊಡ್ಡ ಬ್ಯಾಂಕ್ ದರೋಡೆಯನ್ನು ತಡೆದ ಘಟನೆ ರಾಜಸ್ಥಾನದ ಜೈಪುರ್‍ನಲ್ಲಿ ನಡೆದಿದೆ.
ಸೀತಾರಾಮ್ (27) ದರೋಡೆ ಆಗುವುದನ್ನು ತಡೆದ ಪೇದೆ. ಸೀತಾರಾಮ್ ಅವರು ಸರಿಯಾದ ಸಮಯದಲ್ಲಿ ದರೋಡೆಕೋರರ ಮೇಲೆ ಗುಂಡು ಹಾರಿಸಿಲ್ಲ ಎಂದರೆ 925 ಕೋಟಿ ರೂ. ದರೋಡೆ ಆಗುತಿತ್ತು ಎಂದು ಬ್ಯಾಂಕ್ ಸಿಬ್ಬಂದಿ ಹೇಳಿದ್ದಾರೆ.
Advertisement
ಮಧ್ಯರಾತ್ರಿ ಸುಮಾರು 2.30ಕ್ಕೆ 13 ಜನ ದರೋಡೆಕೋರರು ಮಾಸ್ಕ್ ಧರಿಸಿ ಆಕ್ಸಿಸ್ ಬ್ಯಾಂಕಿನ ಸಿ-ಸ್ಕೀಮ್ ಏರಿಯಾ ತಲುಪಿದ್ದರು. ಆಗ ಅಲ್ಲಿದ್ದ ಖಾಸಗಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ, ಶಟ್ಟರ್ ಬೀಗ ಮುರಿಯಲು ಪ್ರಯತ್ನಿಸಿದ್ದಾರೆ. ತಕ್ಷಣ ಸೈರನ್ ಹೊಡೆದಾಗ ಬ್ಯಾಂಕಿನೊಳಗೆ ಇದ್ದ ಪೇದೆ ದರೋಡೆಕೋರರ ಮೇಲೆ ಗುಂಡು ಹಾರಿಸಿದ್ದರು.
Advertisement
Advertisement
ದರೋಡೆಕೋರರು ಶಟರ್ ಮುರಿಯುವುದ್ದನ್ನು ಸೀತರಾಮ್ ಬ್ಯಾಂಕಿನೊಳಗೆ ಇದ್ದು ಗಮನಿಸಿದ್ದರು. ತಕ್ಷಣ ಒಂದು ಸೆಕೆಂಡ್ ಕೂಡ ವ್ಯರ್ಥ ಮಾಡದೇ ಅವರ ಮೇಲೆ ಗುಂಡು ಹಾರಿಸಿದ್ದಾರೆ. ನಂತರ ಪೇದೆ ತನ್ನ ಸಿಬ್ಬಂದಿಗೆ ಮಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದ ತಕ್ಷಣ ಸ್ವಲ್ಪ ಸಮಯದಲ್ಲೇ ಹಲವು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಸದ್ಯ ಅವರು ಸಿಸಿಟಿವಿ ವಿಡಿಯೋ ಪರಿಶೀಲಿಸುತ್ತಿದ್ದಾರೆ ಎಂದು ಎಸಿಪಿ ಪ್ರಫುಲ್ ಕುಮರ್ ತಿಳಿಸಿದ್ದಾರೆ.
Advertisement
ಅದು ಒಂದು ಮುಖ್ಯ ಬ್ಯಾಂಕ್ ಎಂದರೆ ಚೆಸ್ಟ್ ಬ್ಯಾಂಕ್ ಆಗಿದ್ದು, ಮೊದಲು ಹಣ ಅಲ್ಲಿ ಇಡಲಾಗುತ್ತದೆ. ನಂತರ ಬೇರೆ ಬೇರೆ ಬ್ರ್ಯಾಂಚ್‍ಗಳಿಗೆ ಹಣವನ್ನು ರವಾನಿಸಲಾಗುತ್ತದೆ. ದರೋಡೆಕೋರರು ಮೊದಲೇ ಈ ವಿಚಾರವನ್ನು ತಿಳಿದುಕೊಂಡು ದರೋಡೆ ಮಾಡಲು ಯತ್ನಿಸಿದ್ದರು. ಅಷ್ಟೇ ಅಲ್ಲದೇ ಆರ್‍ಬಿಐ ನಿಯಮಗಳನ್ನು ಆ ಬ್ಯಾಂಕ್ ಪಾಲಿಸುತ್ತಿರಲಿಲ್ಲ. ಆ ಬ್ಯಾಂಕಿನಲ್ಲಿ ಟೈಂ ಲಾಕ್ ಕೂಡ ಇರಲಿಲ್ಲ ಹಾಗೂ ಶಟರ್ ಕೂಡ ಸರಿಯಾಗಿ ಮುಚ್ಚಿರಲಿಲ್ಲ ಎಂದು ಪ್ರಫುಲ್ ಕುಮಾರ್ ಹೇಳಿದ್ದಾರೆ.