ಹೈದರಾಬಾದ್: ಬಿಜೆಪಿ ಸರ್ಕಾರ (BJP Government) ಧಾರ್ಮಿಕ ಮತ್ತು ಜಾತಿ ಮತಾಂಧತೆ ಉತ್ತೇಜಿಸಿದರೆ, ಸಮುದಾಯಗಳನ್ನ ಒಡೆಯುವ ಕೆಲಸ ಮಾಡಿದ್ರೆ ಮುಂದೆ ಭಾರತದಲ್ಲೂ ತಾಲಿಬಾನ್ (Taliban) ನಂತಹ ಭಯಾನಕ ಪರಿಸ್ಥಿತಿ ಸೃಷ್ಟಿಯಾಗುತ್ತದೆ ಎಂದು ತೆಲಂಗಾಣ ಸಿಎಂ ಕೆ. ಚಂದ್ರಶೇಖರ ರಾವ್ (K Chandrasekhar Rao) ಎಚ್ಚರಿಕೆ ನೀಡಿದ್ದಾರೆ.
Advertisement
ನೂತನ ಜಿಲ್ಲಾಧಿಕಾರಿ ಕಚೇರಿ ಉದ್ಘಾಟನಾ ಕಾರ್ಯಕ್ರಮದ ವೇಳೆ ಮಾತನಾಡಿರುವ ಅವರು, ಬಿಜೆಪಿ (BJP) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ದ್ವೇಷದಿಂದ ದೇಶದ ಜೀವನಾಡಿಯೇ ಸುಟ್ಟು ಭಸ್ಮವಾಗುವ ಸಂದರ್ಭ ಎದುರಾಗಲಿದೆ. ಆದ್ದರಿಂದ ವಿಶೇಷವಾಗಿ ಯುವಕರು ಜಾಗೃತರಾಗಬೇಕು ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ಶನಿವಾರ ಮುಳಬಾಗಿಲು ಶಾಸಕ ಎಚ್.ನಾಗೇಶ್ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆ
Advertisement
Advertisement
2014 ರಲ್ಲಿ ರಾಜ್ಯ ರಚನೆಯ ಸಮಯದಲ್ಲಿ ತೆಲಂಗಾಣದ ರಾಜ್ಯ ಆಂತರಿಕ ಉತ್ಪನ್ನವು (GSDP) 5 ಲಕ್ಷ ಕೋಟಿ ರೂ. ಇತ್ತು. ಇಂದು 11.5 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಆದರೆ ಕೇಂದ್ರ ಸರ್ಕಾರವು ತೆಲಂಗಾಣ ರಾಜ್ಯಕ್ಕೆ ಸರಿಸಮನಾಗಿ ಕಾರ್ಯ ನಿರ್ವಹಿಸದೇ ಇರೋದ್ರಿಂದ ರಾಜ್ಯದ ಜಿಎಸ್‌ಡಿಪಿ ಇಳಿಮುಖವಾಗಿದೆ. ಕೇಂದ್ರದ ಈ ಅಸಮರ್ಥ ನೀತಿಗಳಿಂದಾಗಿ ತೆಲಂಗಾಣ ರಾಜ್ಯವೊಂದರಲ್ಲೇ 3 ಲಕ್ಷ ಕೋಟಿ ನಷ್ಟವಾಗಿದೆ ಎಂದು ಅರ್ಥಶಾಸ್ತ್ರಜ್ಞರು ಅಂಕಿ-ಅಂಶಗಳ ಸಮೇತ ಮಾಹಿತಿ ನೀಡಿದ್ದಾರೆ. ಮಾಹಿತಿ ಪ್ರಕಾರ, ಜಿಎಸ್‌ಡಿಪಿ 14.50 ಲಕ್ಷ ಕೋಟಿ ಇರಬೇಕಿತ್ತು. ಆದರೆ 11.50 ಲಕ್ಷ ಕೋಟಿಗೆ ತಲುಪಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Advertisement
ದೇಶದಲ್ಲಿ ಎಲ್ಲ ನಾಗರಿಕರನ್ನು ಸಮಾನವಾಗಿ ನೋಡಿಕೊಳ್ಳುವ ಪಕ್ಷ ಮತ್ತು ಸರ್ಕಾರ ಯಾವಾಗಲೂ ಉತ್ತಮವಾಗಿರುತ್ತೆ. ಆದರೆ ಕೋಮುದ್ವೇಷ, ಜಾತಿವಾದಿಗಳ ರೀತಿಯಲ್ಲಿ ಜನರ ನಡುವೆ ದ್ವೇಷ ಸೃಷ್ಟಿಸೋದು ದೇಶಕ್ಕೆ ನೋವುಂಟು ಮಾಡುತ್ತದೆ ಎಂದು ಆಕ್ಷೇಪಿಸಿದ್ದಾರೆ. ಇದನ್ನೂ ಓದಿ: ಸಂಕ್ರಾಂತಿಗೂ ಇರಲಿದೆ ಮೈ ಕೊರೆವ ಚಳಿ- ಆರೋಗ್ಯದ ಮುನ್ನೆಚ್ಚರಿಕೆ ನೀಡಿದ ಹವಾಮಾನ ಇಲಾಖೆ!
ಭಾರತ ದೇಶವೂ ಇಂತಹ ಗೊಂದಲಗಳನ್ನ ಎದುರಿಸಿದರೆ ನಾವು ತಾಲಿಬಾನ್ ನಂತೆಯೇ ಪರಿಸ್ಥಿತಿ ಎದುರಾಗುತ್ತದೆ. ಆಗ ಹೂಡಿಕೆಗಳನ್ನು ನಿರೀಕ್ಷಿಸಲು ಸಾಧ್ಯವಾ? ಉದ್ಯೋಗಳು ಸೃಷ್ಟಿಯಾಗುತ್ತಾ? ಇರುವ ಉದ್ಯಮಗಳು ಉಳಿಯುತ್ತಾ? ಗಲಭೆಗಳು ಉಂಟಾಗಿ, ಲಾಠಿಚಾರ್ಜ್ ಹಾಗೂ ಗುಂಡಿನ ದಾಳಿ ವಾತಾವರಣ ನಿರ್ಮಾಣ ಅದ್ರೆ ಸಮಾಜ ಹೇಗಿರುತ್ತೆ? ಎಂಬುದನ್ನು ಒಮ್ಮೆ ಯೋಚಿಸಿ. ಇಂದು ದೇಶವನ್ನು ತಪ್ಪುದಾರಿಗೆ ಎಳೆಯುವ ಎಲ್ಲ ದುಷ್ಪ್ರಯತ್ನಗಳು ನಡೆಯುತ್ತಿವೆ. ಇದರಿಂದ ಎಚ್ಚರವಾಗಿರಬೇಕು ಎಂದು ಸಲಹೆ ನೀಡಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k