ರಾಷ್ಟ್ರ ಭಾಷೆಯ ವಿಚಾರವಾಗಿ ಒಂದಿಲ್ಲೊಂದು ಹೇಳಿಕೆ ನಿತ್ಯವೂ ಬರುತ್ತಿದೆ. ಕಿಚ್ಚ ಸುದೀಪ್ ‘ಹಿಂದಿ ಭಾಷೆಯನ್ನು ರಾಷ್ಟ್ರ ಭಾಷೆ ಎಂದು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ’ ಎಂದು ಹೇಳುತ್ತಿದ್ದಂತೆಯೇ ಅತ್ತ ಬಾಲಿವುಡ್ ನಟ ಅಜಯ್ ದೇವಗನ್ ‘ಹಿಂದಿ ರಾಷ್ಟ್ರ ಭಾಷೆ ಅಂತ ಒಪ್ಪದೇ ಇದ್ದರೆ ಹಿಂದಿಯಲ್ಲಿ ನಿಮ್ಮ ಸಿನಿಮಾಗಳನ್ನು ಡಬ್ ಮಾಡಿ ಏಕೆ ರಿಲೀಸ್ ಮಾಡುತ್ತೀರಿ? ಎಂದು ಕೇಳಿದರು. ಇಲ್ಲಿಗೆ ರಾಷ್ಟ್ರ ಭಾಷೆ ಮತ್ತು ಇತರ ಭಾಷೆಗಳ ಮಧ್ಯೆ ದೊಡ್ಡ ಚರ್ಚೆಯೇ ಶುರುವಾಗಿದೆ. ಇದನ್ನೂ ಓದಿ : ಬೆಳ್ಳಿತೆರೆಯಲ್ಲಿ ಕಾಯಕಯೋಗಿ ಬಸವಣ್ಣ: ಯಾರೆಲ್ಲ ಪಾತ್ರ ಮಾಡಿದ್ದಾರೆ ಗೊತ್ತಾ?
Advertisement
ರಾಷ್ಟ್ರ ಭಾಷೆ ಹಿಂದಿ ಎಂದು ಅಜಯ್ ದೇವಗನ್ ಹೇಳಿದರೆ, ಅದನ್ನು ಒಪ್ಪುವುದಕ್ಕೆ ಸಾಧ್ಯವೇ ಇಲ್ಲ. ನಮ್ಮ ಭಾಷೆಯೇ ನಮಗೆ ರಾಷ್ಟ್ರ ಭಾಷೆ ಎನ್ನುವಂತೆ ಕನ್ನಡ ಪರ ಬ್ಯಾಟಿಂಗ್ ಬೀಸಿದರು ಸುದೀಪ್. ಇತ್ತ ಕಂಗನಾ ರಣಾವತ್ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಸಂಸ್ಕೃತವನ್ನು ರಾಷ್ಟ್ರ ಭಾಷೆ ಮಾಡಿ ಎಂದು ಕರೆಕೊಟ್ಟರು. ಇದೀಗ ಖ್ಯಾತ ಗಾಯಕ ಸೋನು ನಿಗಂ ಕೂಡ ಈ ಕುರಿತು ಮಾತನಾಡಿದ್ದಾರೆ. ಇದನ್ನೂ ಓದಿ : ಚಲಿಸುವ ಬೋಟ್ ನಲ್ಲಿ ಚೆಲುವೆ ರಾಧಿಕಾ ಕುಮಾರಸ್ವಾಮಿ
Advertisement
Advertisement
ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಸೋನಂ, ‘ಭಾಷಾ ವಿಚಾರದಲ್ಲಿ ದೇಶವನ್ನು ಒಡೆಯುವಂತೆ ಕೆಲಸ ಮಾಡುತ್ತಿದ್ದಾರೆ. ಹಿಂದಿಗಿಂತಲೂ ಹೆಚ್ಚು ಪುರಾತನ ಭಾಷೆ ತಮಿಳು. ಹಾಗಾದರೆ, ತಮಿಳು ರಾಷ್ಟ್ರ ಭಾಷೆ ಎನ್ನುವುದಕ್ಕೆ ಆಗತ್ತಾ? ನಾವು ಎಲ್ಲಿಯೇ ಹೋದರೂ ಇಂಗ್ಲಿಷ್ ಬಳಕೆ ಆಗುತ್ತಿದೆ. ಕೋರ್ಟ್ ನಲ್ಲೂ ಇಂಗ್ಲಿಷ್ ಅನ್ನೇ ಬಳುಸುತ್ತಾರೆ. ಹಾಗಾಗಿ ಹಾಗಾಗಿ ಇಲ್ಲಿ ರಾಷ್ಟ್ರ ಭಾಷೆ ಎನ್ನುವುದೇ ಉದ್ಭವಿಸಲ್ಲ ಎಂದಿದ್ದಾರೆ. ಇದನ್ನೂ ಓದಿ: ಗ್ರ್ಯಾಮಿ ಅವಾರ್ಡ್ ಮ್ಯೂಸಿಕ್ ಕೇಳಿದಾಗ ಬಹಳ ಖುಷಿ ಆಯ್ತು: ಸಿಎಂ ಬೊಮ್ಮಾಯಿ
Advertisement
ದೇಶದಲ್ಲಿ ಬಹಳಷ್ಟು ಸಮಸ್ಯೆಗಳು ಇವೆ. ಆ ಸಮಸ್ಯೆಗಳ ಬಗ್ಗೆ ಮಾತನಾಡದೇ ಭಾಷಾ ವಿಚಾರವನ್ನು ಮುನ್ನೆಲೆಗೆ ತಂದು ಸುಖಾಸುಮ್ಮನೆ ದಿಕ್ಕು ತಪ್ಪಿಸುವಂತಹ ಕೆಲಸ ನಡೆಯುತ್ತಿದೆ. ಅದರ ಬದಲು ಸಮಸ್ಯೆಗಳನ್ನು ಇಟ್ಟುಕೊಂಡು ಚರ್ಚೆ ಮಾಡಿ ಎಂದು ಅವರು ಸಲಹೆಯನ್ನೂ ನೀಡಿದ್ದಾರೆ.