ರಾಮನಗರ: ಹೊಸ ವರ್ಷ ಸಂಭ್ರಮಾಚರಣೆಗೆ (New Year 2025) ಕ್ಷಣಗಣನೆ ಆರಂಭವಾಗಿದ್ದು, ರಾಮನಗರದ (Ramanagara) ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.
ಕನಕಪುರ ತಾಲೂಕಿನ ಸಂಗಮ, ಮೇಕೆದಾಟು (Mekedatu) ಹಾಗೂ ಚುಂಚಿ ಫಾಲ್ಸ್‌ಗೆ (Chunchi Falls) ಸಾರ್ವಜನಿಕ ನಿಷೇಧ ವಿಧಿಸಲಾಗಿದೆ. ಡಿ.31ರಿಂದ ಜ.1ರ ಮಧ್ಯರಾತ್ರಿವರೆಗೂ ನಿರ್ಬಂಧ ಹೇರಿ ಕನಕಪುರ ತಾಲೂಕು ಆಡಳಿತ ಆದೇಶ ಹೊರಡಿಸಿದೆ. ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸ್ಥಳೀಯ ಆಡಳಿತ ಮುನ್ನೆಚ್ಚರಿಕೆ ಕ್ರಮ ವಹಿಸಿದೆ. ಅಲ್ಲದೇ ಕಾವೇರಿ ನದಿ ಪಾತ್ರ ಹಾಗೂ ಅರ್ಕಾವತಿ ನದಿ ಪಾತ್ರದಲ್ಲೂ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದೆ. ಇದನ್ನೂ ಓದಿ: Haveri| ನ್ಯೂ ಇಯರ್ ಪಾರ್ಟಿಗೆ ಗೋವಾಗೆ ತೆರಳುತ್ತಿದ್ದಾಗ ಅಪಘಾತ – 10 ಮಂದಿಗೆ ಗಾಯ
Advertisement
Advertisement
ರಾತ್ರಿ ವೇಳೆ ಕುಡಿದು ವಾಹನ ಚಲಾವಣೆ ಮಾಡುವಂಥವರ ವಿರುದ್ಧವೂ ಪೊಲೀಸರು ನಿಗಾ ವಹಿಸಿದ್ದು, ಪ್ರಮುಖ ರಸ್ತೆಗಳಲ್ಲಿ ವಾಹನ ತಪಾಸಣೆ ನಡೆಸಲಿದ್ದಾರೆ. ಇದನ್ನೂ ಓದಿ: ಚಾಕುವಿನಿಂದ ಕುತ್ತಿಗೆ ಕೊಯ್ದು ವ್ಯಕ್ತಿಯ ಬರ್ಬರ ಹತ್ಯೆ
Advertisement