ಕಾಂತಾರ-1 ತೆರೆಗೆ ಕೌಂಟ್‌ಡೌನ್: ನಾರ್ಥ್ ಇಂಡಿಯಾ ರೈಟ್ಸ್ `ಎಎ ಫಿಲಂಸ್’ ತೆಕ್ಕೆಗೆ

Public TV
1 Min Read
Kantara

ಚಿತ್ರದ ಮೇಕಿಂಗ್ ಹಾಗೂ ಗ್ಲಿಂಪ್ಸ್‌ಗಳಿಂದ ಸಿನಿಮಾದ ಮೇಲಿನ ಕುತೂಹಲವನ್ನ ದುಪ್ಪಟ್ಟು ಮಾಡಿರುವ ಕಾಂತಾರ ಸಿನಿಮಾ ತೆರೆಗೆ ಬರೋಕೆ ದಿನಗಣನೆ ಶುರುವಾಗಿದೆ. ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಮೂಡಿಬರ್ತಿರೋ ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶನ ಮಾಡಿರುವ `ಕಾಂತಾರ ಚಾಪ್ಟರ್-1′ (Kantara Chapter-1) ಅಕ್ಟೋಬರ್ 2, 2025 ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ. 2022ರ ಬ್ಲಾಕ್‌ಬಸ್ಟರ್ `ಕಾಂತಾರ’ ಸಿನಿಮಾದ ಈ ಬಹು ನಿರೀಕ್ಷಿತ ಪ್ರಿಕ್ವೆಲ್ ಈಗಾಗಲೇ ದೇಶಾದ್ಯಂತ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದೆ.

ಕಾಂತಾರ ಚಾಪ್ಟರ್-1ರ ಉತ್ತರ ಭಾರತದಾದ್ಯಂತ ವಿತರಣೆಯನ್ನು ʻಎಎ ಫಿಲಂಸ್’ (AA Films) ವಹಿಸಿಕೊಂಡಿದ್ದು, ಹಿಂದಿ ಮಾತನಾಡುವ ಪ್ರದೇಶಗಳಲ್ಲೂ ಈ ಚಿತ್ರ ಬೆಳ್ಳಿ ಪರದೆಯ ಮೇಲೆ ಪ್ರದರ್ಶನಗೊಳ್ಳಲಿದೆ. ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಮುಖ್ಯ ಪಾತ್ರದಲ್ಲಿದ್ದು, ಕ್ರಿ.ಶ 4ನೇ ಶತಮಾನದ ಸಂಸ್ಕೃತಿ ಮತ್ತು ವೈಭವವನ್ನು ತೆರೆಯ ಮೇಲೆ ತರುವ ಪ್ರಯತ್ನ ಚಿತ್ರತಂಡದ್ದಾಗಿದೆ. ಅಂದಹಾಗೆ ಈ ಸಿನಿಮಾದಲ್ಲಿ ಅತಿದೊಡ್ಡ ತಾರಾಗಣವಿದೆ.ಇದನ್ನೂ ಓದಿ: ಕಾಂತಾರ-1 ಕಹಳೆ.. 100 ಕೋಟಿಗೆ ಆಂಧ್ರದ ವಿತರಣೆ ಹಕ್ಕು ಸೇಲ್

 

View this post on Instagram

 

A post shared by Hombale Films (@hombalefilms)

ಕಾಂತಾರ ಚಾಪ್ಟರ್-1 ಚಿತ್ರ ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಬೆಂಗಾಲಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಪ್ರಾದೇಶಿಕ ಕಥೆಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಹೊಂಬಾಳೆ ಫಿಲಂಸ್‌ನ ದೃಷ್ಟಿಕೋನವನ್ನು ಇದು ಮತ್ತಷ್ಟು ಬಲಪಡಿಸಲಿದೆ. ತನ್ನ ಅದ್ಭುತ ಕಥೆ, ದೃಶ್ಯ ವೈಭವ ಮತ್ತು ಮನಮುಟ್ಟುವ ಸಂಗೀತದೊಂದಿಗೆ, `ಕಾಂತಾರ ಚಾಪ್ಟರ್-1′ 2025ರ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದ್ದು, ಸಿನಿಮಾವನ್ನ ಕಣ್ತುಂಬಿಕೊಳ್ಳಲು ಪ್ರೇಕ್ಷಕವರ್ಗ ಕಾದು ಕುಳಿತಿದೆ.

Share This Article