ಶ್ರೀಹರಿಕೋಟಾ: ಭಾರತದಲ್ಲಿ ಮೊಟ್ಟ ಮೊದಲ ಬಾರಿ ಖಾಸಗಿ ಸಂಸ್ಥೆಯೊಂದು ಅಭಿವೃದ್ಧಿಪಡಿಸಿದ ರಾಕೆಟ್ (Rocket) ಅನ್ನು ಉಡಾವಣೆ ಮಾಡಲು ಕ್ಷಣಗಣನೆ ಪ್ರಾರಂಭವಾಗಿದೆ. ತೆಲಂಗಾಣ ಮೂಲದ ಟೆಕ್ ಸ್ಟಾರ್ಟ್ಅಪ್ ಸ್ಕೈರೂಟ್ ಏರೋಸ್ಪೇಸ್ (Skyroot aerospace) ತಯಾರಿಸಿರುವ ವಿಕ್ರಮ್-ಎಸ್ (Vikram-S) ರಾಕೆಟ್ ಶುಕ್ರವಾರ ಬೆಳಗ್ಗೆ 11:30ಕ್ಕೆ ಉಡಾವಣೆಗೊಳ್ಳಲಿದೆ.
ಇಸ್ರೋ ಸಂಸ್ಥಾಪಕ ವಿಕ್ರಮ್ ಸಾರಾಭಾಯ್ ಸ್ಮರಣಾರ್ಥ ಸ್ಕೈರೂಟ್ ಸಂಸ್ಥೆ ಉಡಾವಣಾ ವಾಹಕಕ್ಕೆ ವಿಕ್ರಮ್ ಎಂದು ಹೆಸರಿಟ್ಟಿದೆ. ವಿಕ್ರಮ್ ಸೀರಿಸ್‌ನಲ್ಲಿ ಒಟ್ಟು 3 ರಾಕೆಟ್‌ಗಳಿವೆ. ವಿಕ್ರಮ್-ಎಸ್ ರಾಕೆಟ್ 3 ಚಿಕ್ಕ ಉಪಗ್ರಹಗಳನ್ನು ಅಂತರಿಕ್ಷಕ್ಕೆ ಕೊಂಡೊಯ್ಯಲಿದೆ. ಈ ಪ್ರಯೋಗದ ಮೂಲಕ ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಖಾಸಗಿ ಕಂಪನಿಗಳು ಅಧಿಕೃತವಾಗಿ ಎಂಟ್ರಿ ಕೊಟ್ಟಂತಾಗುತ್ತದೆ. ಇದನ್ನೂ ಓದಿ: ಇನ್ಮುಂದೆ ಖಾಸಗಿ ಜಾಗದಲ್ಲಿ ಶ್ರೀಗಂಧ ಬೆಳೆದು ರೈತರೇ ಮಾರಾಟ ಮಾಡಬಹುದು
Advertisement
Advertisement
ಸ್ಪೇಸ್‌ಕಿಡ್ಜ್ ಇಂಡಿಯಾ, ಬಜೂಮ್ಕ್ ಅರ್ಮೇನಿಯಾ ಹಾಗೂ ಎನ್-ಸ್ಪೇಸ್ ಟೆಕ್ ಇಂಡಿಯಾ ಅಭಿವೃದ್ಧಿಪಡಿಸಿದ 3 ಪೇಲೋಡ್‌ಗಳನ್ನು ವಿಕ್ರಮ್-ಎಸ್ ಹೊತ್ತೊಯ್ಯಲಿದೆ. ಈ ರಾಕೆಟ್ ಅನ್ನು 2 ವರ್ಷಗಳ ಅವಧಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ರಾಕೆಟ್ 6 ಮೀ. ಉದ್ದ, 0.375 ಮೀ. ವ್ಯಾಸ ಹಾಗೂ 545 ಕೆಜಿ ತೂಕವನ್ನು ಹೊಂದಿದೆ.
Advertisement
ವಿಕ್ರಮ್-ಎಸ್ ರಾಕೆಟ್ ಶುಕ್ರವಾರ ಬೆಳಗ್ಗೆ 11:30ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಳ್ಳಲಿದೆ. ಇದನ್ನೂ ಓದಿ: ದುಬೈ ಅಥವಾ ನ್ಯೂಯಾರ್ಕ್‌ನಲ್ಲಿ ಕುಟುಂಬದ ಕಚೇರಿ ತೆರೆಯಲು ಮುಂದಾದ ಅದಾನಿ