ಬೆಂಗಳೂರು: ಕ್ರಿಸ್ಮಸ್ ಹಾಗೂ ನ್ಯೂ ಇಯರ್‌ಗೆ ಕೌಂಟ್‌ಡೌನ್ ಶುರುವಾಗಿದ್ದು, ಹೊಸ ವರ್ಷಕ್ಕೆ ಬೆಂಗಳೂರು ಸಜ್ಜಾಗುತ್ತಿದೆ. ನ್ಯೂ ಇಯರ್ (New Year) ಸೆಲೆಬ್ರೇಷನ್ ಹಾಟ್ ಸ್ಪಾಟ್ ಅಂದ್ರೇ ಅದು ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್. ಅದರಲ್ಲೂ ಬ್ರಿಗೇಡ್ ರೋಡ್ ಅಂತೂ ಈಗಿನಿಂದಲೇ ಕಲರ್ ಫುಲ್ ಲೈಟಿಂಗ್‌ಗಳಿಂದ ಜಗಮಿಸುತ್ತಿದೆ.
ಹೌದು, ಹೊಸವರ್ಷ ಹಾಗೂ ಕ್ರಿಸ್ಮಸ್ ಹಬ್ಬ ಬಂತದ್ರೇ ಸಾಕು ಬ್ರಿಗೇಡ್ ರೋಡ್ ಮದುವಣಗಿತ್ತಿಯಂತೆ ಶೃಂಗಾರಗೊಳ್ಳುತ್ತೆ. ಪ್ರತಿ ವರ್ಷದಂತೆ ಈ ವರ್ಷವೂ ಬ್ರಿಗೇಡ್ ರೋಡ್‌ನಲ್ಲಿ 2026ನ್ನು ವೆಲ್ ಕಮ್ ಮಾಡಲು ವಿಶೇಷ ದೀಪಾಲಂಕಾರದ ವ್ಯವಸ್ಥೆ ಮಾಡಲಾಗಿದೆ. ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ಬ್ರಿಗೇಡ್ ರಸ್ತೆಗೆ ಬ್ರಿಗೇಡ್ ರೋಡ್ ಶಾಪ್ ಅಸೋಸಿಯೇಷನ್‌ನಿಂದ ಲೈಟಿಂಗ್ ಅಳವಡಿಸಲಾಗಿದೆ. ಎಂ.ಜಿ ರಸ್ತೆ ಎಂಟ್ರಿಯಿಂದ ಬ್ರಿಗೇಡ್ ರೋಡ್ ಕೊನೆಯವರೆಗೂ ಸುಮಾರು 400 ಮೀ. ಹೈ-ಫೈ ಲೈಟಿಂಗ್ಸ್ ಅಳವಡಿಸಲಾಗಿದೆ.ಇದನ್ನೂ ಓದಿ: ಬಾಹ್ಯಾಕಾಶದಲ್ಲಿ ಡೇಟಾ ಸೆಂಟರ್ – ಏನಿದು ಗೂಗಲ್‌ನ ಸನ್‌ಕ್ಯಾಚರ್ ಪ್ರಾಜೆಕ್ಟ್?
ಈ ಅದ್ದೂರಿ ಲೈಟಿಂಗ್‌ಗಳಿಂದ ಕಂಗೊಳಿಸುತ್ತಿರೋ ಬ್ರಿಗೇಡ್ ರೋಡ್ ನೋಡುವುದೇ ಚೆಂದ. ರಾತ್ರಿ ವೇಳೆ ಕಣ್ಣುಗಳಿಗಂತೂ ಹಬ್ಬವಾಗಿರುತ್ತೆ. ಹೀಗಾಗಿ ಈ ಮೂವಿಂಗ್ ಲೈಟ್‌ಗಳನ್ನು ನೋಡಲು ಜನದಟ್ಟಣೆ ಹೆಚ್ಚಾಗಿದ್ದು, ಸೆಲ್ಫಿಗೆ ಮುಗಿಬೀಳುತ್ತಿದ್ದಾರೆ. ಹೊಸ ವರ್ಷಕ್ಕೆ ನಾವು ಮಾತ್ರ ಬರೋದಿಕ್ಕೆ ಆಗೋದಿಲ್ಲ. ಹೀಗಾಗಿ ಫ್ಯಾಮಿಲಿ ಸಮೇತವಾಗಿ ಬಂದು ಎಂಜಾಯ್ ಮಾಡ್ತಿದೀವಿ ಅಂತ ಸಿಲಿಕಾನ್ ಸಿಟಿ ಮಂದಿ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.

ಇನ್ನೂ ಹೊಸ ವರ್ಷದ ಆಚರಣೆಯಲ್ಲಿ ಭದ್ರತೆ ಹೆಚ್ಚಿಸಲು ಖಾಕಿ ಅಲರ್ಟ್ ಆಗಿದೆ. ಖುದ್ದು ಬೆಂಗಳೂರು ನಗರ ಪೋಲಿಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹಾಟ್‌ಸ್ಪಾಟ್‌ಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಈಗಾಗಲೇ ಹೋಟೆಲ್, ಪಬ್, ರೆಸ್ಟೋರೆಂಟ್‌ಗಳು ಬುಕಿಂಗ್ ಫುಲ್ ಆಗಿವೆ. ಭದ್ರತೆ ವಿಚಾರಕ್ಕೆ ಪಬ್ ಹಾಗೂ ಹೋಟೆಲ್ ಅಸೋಸಿಯೇಷನ್ ಜೊತೆಯೂ ಪೊಲೀಸರು ಮಾತುಕತೆ ನಡೆಸಿದ್ದಾರೆ.
ಒಟ್ಟಿನಲ್ಲಿ ಬೆಂಗಳೂರು ಹೊಸ ವರ್ಷಕ್ಕೆ ಸಜ್ಜಾಗಿದೆ. ನ್ಯೂ ಇಯರ್ ವೆಲ್‌ಕಂ ಮಾಡೋಕೆ ಜನ ಕಾತರರಾಗಿದ್ದಾರೆ.ಇದನ್ನೂ ಓದಿ:ವಿಶ್ವದ ಅತಿ ಎತ್ತರದ ಶ್ರೀಕೃಷ್ಣನ ದೇವಾಲಯ ಇದು – ಇಲ್ಲಿ ಟೋಪಿಯಲ್ಲಿ ನಿರ್ಧಾರವಾಗುತ್ತೆ ನಿಮ್ಮ ಭವಿಷ್ಯ

