ಚಂಡೀಗಢ: ಪಂಚರಾಜ್ಯಗಳ ಮತ ಎಣಿಕೆ ಆರಂಭವಾಗಿದೆ. ಇತ್ತ ಪಂಜಾಬ್‍ನಲ್ಲಿ ಗೆಲುವಿನ ವಿಶ್ವಾಸದಲ್ಲಿರುವ ಆಮ್ ಆದ್ಮಿ ಪಕ್ಷ ಗೆಲುವಿನ ಸಂಭ್ರಮಾಚರಣೆಗೆ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ.
Advertisement
ಪಂಜಾಬ್‍ನಲ್ಲಿ 117 ಕ್ಷೇತ್ರಕ್ಕೆ ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬೀಳುವ ಮುನ್ನವೇ ಎಎಪಿ ಪಕ್ಷದ ರಾಷ್ಟ್ರೀಯ ಕಚೇರಿಯ ಹೊರಗೆ ಮತದಾರರಿಗೆ ಧನ್ಯವಾದ ಎಂಬ ಬ್ಯಾನರ್ ಅಳವಡಿಸಿಕೊಂಡಿರುವುದು ಕಂಡುಬಂದಿದೆ. ಪಂಜಾಬ್‍ನಲ್ಲಿ ಎಎಪಿಯಿಂದ ಸಿಎಂ ಅಭ್ಯರ್ಥಿಯಾಗಿರುವ ಭಗವಂತ್ ಮಾನ್ ಅವರ ಚಿತ್ರವಿರುವ ಧನ್ಯವಾದಗಳ ಬ್ಯಾನರ್ ಹಾಕಲಾಗಿದ್ದು, ಆದರೆ, ಅದನ್ನು ಬಿಳಿ ಬಟ್ಟೆಯಿಂದ ಮುಚ್ಚಲಾಗಿದೆ. ಇದನ್ನೂ ಓದಿ: ಪಂಜಾಬ್‍ನಲ್ಲಿ ಆಪ್‍ಗೆ ಸಿಗುತ್ತಾ ಅಧಿಕಾರ..?- ಉತ್ತರಾಖಂಡ್, ಮಣಿಪುರ ಕತೆಯೇನು..?
Advertisement
Punjab | Jalebis being prepared, flower decoration being done at the residence of Aam Aadmi Party CM candidate Bhagwant Mann, at Sangrur pic.twitter.com/xTlEzV1a9u
— ANI (@ANI) March 10, 2022
Advertisement
ಎಕ್ಸಿಟ್ ಪೋಲ್‍ನಲ್ಲಿ ಈ ಬಾರಿ ಎಎಪಿ ಪಂಜಾಬ್‍ನಲ್ಲಿ ಗೆಲುವಿನ ನಗೆ ಬೀರಲಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಎಎಪಿ ಗೆಲುವಿನ ವಿಶ್ವಾಶದೊಂದಿಗೆ ಕಚೇರಿಯ ಒಳಗೆ ಹೂ, ಬಲೂನ್‍ಗಳಿಂದ ಸಿಂಗರಿಸಲಾಗಿದೆ. ಅಲ್ಲದೆ ಸಂಗ್ರೂರಿನಲ್ಲಿರುವ ಭಗವಂತ್ ಮಾನ್ ಅವರ ನಿವಾಸವನ್ನು ಹೂವುಗಳಿಂದ ಅಲಂಕರಿಸಲಾಗಿದ್ದು, ಬೆಳಗ್ಗೆಯಿಂದಲೇ ಅಲ್ಲಿ ಜಿಲೇಬಿ ತಯಾರಿ ಕೂಡ ನಡೆಯುತ್ತಿದೆ. ಆರಂಭದ ಮತ ಎಣಿಕೆಯಲ್ಲಿ ಎಎಪಿ ಮುನ್ನಡೆಯನ್ನು ಕಾಯ್ದುಕೊಂಡಿದೆ.
Advertisement