ಬೆಂಗಳೂರು: ʻದಿ ಕೇರಳ ಸ್ಟೋರಿʼ (The Kerala Story) ಅದೊಂದು ಪ್ರಾಪಗಾಂಡ ಸಿನಿಮಾ ಎಂದು ಟೀಕಿಸಿದ್ದ ನಟ ಕಮಲ್ ಹಾಸನ್ (Kamal Haasan) ಹೇಳಿಕೆಗೆ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ (Chetan Kumar) ಪ್ರತಿಕ್ರಿಯಿಸಿದ್ದಾರೆ.
Advertisement
ಈ ಕುರಿತು ತಮ್ಮ ಫೇಸ್‌ಬುಕ್ ವಾಲ್‌ನಲ್ಲಿ ಬರೆದುಕೊಂಡಿರುವ ನಟ, ‘ದಿ ಕೇರಳ ಸ್ಟೋರಿ’ಗೆ ಪ್ರತಿಕ್ರಿಯಿಸಿರುವ ನಟ ಕಮಲ್ ಹಾಸನ್, ‘ನಾನು ಪ್ರಾಪಗಾಂಡ ಚಿತ್ರಗಳ ವಿರುದ್ಧ ಇದ್ದೇನೆ’ ಎಂದಿದ್ದಾರೆ. ನಾವು ರಾಜಕೀಯವಾಗಿ/ಸೈದ್ಧಾಂತಿಕವಾಗಿ ವಿರೋಧಿಸುವುದನ್ನು ಪ್ರಾಪಗಾಂಡ ಎಂದು ಕರೆಯುತ್ತೇವೆ. ‘ಕರ್ಣನ್’ ಮತ್ತು ‘ಜೈ ಭೀಮ್’ ಅನ್ನು ಜಾತಿ ವಿರೋಧಿ ಅಥವಾ ಪೊಲೀಸ್ ವಿರೋಧಿ ಪ್ರಾಪಗಾಂಡ ಎಂದು ಪರಿಗಣಿಸಬಹುದಲ್ಲವೇ? ಬಲವಾದ ಪ್ರಜಾಪ್ರಭುತ್ವಕ್ಕಾಗಿ, ವಿಭಿನ್ನ ಸಿದ್ಧಾಂತಗಳು ಕೂಡ ಅಸ್ತಿತ್ವದಲ್ಲಿ ಇರಬೇಕು/ ಇರುತ್ತವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದಿ ಕೇರಳ ಸ್ಟೋರಿ ವಿರೋಧಿಸಿ ಮಾತನಾಡಿದ ಕಮಲ್ ಹಾಸನ್
Advertisement
Advertisement
ಅಬುಧಾಬಿಯಲ್ಲಿ ನಡೆದ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಿದ್ದ ನಟ ಕಮಲ್ ಹಾಸನ್, ‘ನಾನು ದಿ ಕೇರಳ ಸ್ಟೋರಿ ಸಿನಿಮಾವನ್ನು ವಿರೋಧಿಸುತ್ತಲೇ ಬಂದಿದ್ದೇನೆ. ಅದಕ್ಕಾಗಿ ನನ್ನನ್ನೂ ವಿರೋಧಿಸಿದ್ದಾರೆ. ಸಿನಿಮಾದಲ್ಲಿ ಸತ್ಯ ಘಟನೆ ಆಧರಿಸಿದ ಸಿನಿಮಾ ಎಂದು ಹೇಳಿದರೆ ಸಾಲದು. ಅದರಲ್ಲಿ ಸತ್ಯ ಇರಬೇಕು’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಅಭಿ-ಅವಿ ಮ್ಯಾರೇಜ್ : ಬೆಂಗಳೂರಿನಲ್ಲಿ ಮದುವೆ, ಮಂಡ್ಯದಲ್ಲಿ ಬೀಗರ ಊಟ
Advertisement
‘ದಿ ಕೇರಳ ಸ್ಟೋರಿ’ ಸಿನಿಮಾದ ಕಥೆಯೇ ಬೋಗಸ್ ಎಂದು ಹಲವರು ಈಗಾಗಲೇ ವಾದ ಮಾಡಿದ್ದಾರೆ. ಅವರು ಹೇಳಿದ ಪ್ರಮಾಣದಲ್ಲಿ ಮಹಿಳೆಯರು ಇಸ್ಲಾಂ ಮೂಲಭೂತವಾದಕ್ಕೆ ಸಿಲುಕಿಲ್ಲ ಎಂದು ಚರ್ಚೆ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸಿನಿಮಾ ಟೀಮ್ ಮಾಧ್ಯಮಗೋಷ್ಠಿ ನಡೆಸಿ, ಅಲ್ಲಿಗೆ ಸಂತ್ರಸ್ತರನ್ನು ಕರೆತಂದಿದ್ದರು. ಒಬ್ಬೊಬ್ಬರ ಕಥೆಯನ್ನು ಸಿನಿಮಾ ಟೀಮ್ ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿತು.
ದಿ ಕೇರಳ ಸ್ಟೋರಿಯ ಟ್ರೈಲರ್ ರಿಲೀಸ್ ಆದ ಸಂದರ್ಭದಲ್ಲಿ ಒಟ್ಟು 32 ಸಾವಿರ ಯುವತಿಯರ ಮತಾಂತರ ಮಾಡಲಾಗಿದೆ ಎಂದು ಹೇಳಿತ್ತು. ಅಂಕಿ ಸಂಖ್ಯೆಯ ಕುರಿತು ವ್ಯಾಪಕ ಟೀಕೆ ಬಂದ ಬೆನ್ನಲ್ಲೇ ಸಂಖ್ಯೆಯ ವಿಚಾರವನ್ನು ಸಿನಿಮಾದಿಂದಲೇ ಕೈ ಬಿಡಲಾಯಿತು. ಆದರೆ, ಸಾಕಷ್ಟು ಸಂಖ್ಯೆಯಲ್ಲಿ ಮತಾಂತರ ನಡೆದಿದೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಎರಡು ದಿನಗಳ ಹಿಂದೆ ನಡೆದ ಮಾಧ್ಯಮ ಗೋಷ್ಠಿಗೆ 26 ಯುವತಿಯರನ್ನು ಕರೆತಂದಿದ್ದರು ನಿರ್ದೇಶಕ ಸುದೀಪ್ತೋ ಸೇನ್.