DistrictsKarnatakaLatestMain PostMandya

ಸಾಲಗಾರರ ಕಾಟ ತಾಳಲಾರದೆ ಕೊಲೆಯಾಗಿದೆ ಎಂದು ಬಿಂಬಿಸಿ ಗೋವಾಗೆ ಟೂರ್ ಹೋದ ಆಸಾಮಿ

ಮಂಡ್ಯ: ಮನಶಾಂತಿಗೆ ಅಥವಾ ಏಂಜಾಯ್ ಮಾಡುವ ದೃಷ್ಟಿಯಿಂದ ಜನ ಟೂರ್ (Tour)  ಪ್ಲಾನ್ ಮಾಡಿ ಟೂರ್‌ಗೆ ಹೋಗ್ತಾರೆ. ಆದ್ರೆ ಇಲ್ಲೊಬ್ಬ ಸಾಲಗಾರರ ಕಾಟ ತಾಳಲಾರದೆ ತನ್ನನ್ನು ಯಾರೋ ಕೊಲೆ ಮಾಡಿದ್ದಾರೆಂದು ಊರಲ್ಲಿ ಬಿಂಬಿಸಿ ಗೋವಾ (Goa) ಟೂರ್‌ಗೆ ಹೋಗಿದ್ದಾನೆ.

ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಚೊಟ್ಟನಹಳ್ಳಿ ಗ್ರಾಮದ ನಿವಾಸಿ ಮನು, ಫೈನಾನ್ಸ್ (Financier) ವ್ಯವಹಾರ ನಡೆಸಿಕೊಂಡು ಚೆನ್ನಾಗಿ ಜೀವನ ಮಾಡ್ತಾ ಇದ್ದ. ಅದ್ಯಾಕೋ ಏನೋ ಕೆಲವರ ಬಳಿ ಒಂದಷ್ಟು ಸಾಲವನ್ನು ಸಹ ಮಾಡಿದ್ದ. ಸಾಲಕೊಟ್ಟವರು ಸಾಲ ಮರುಪಾವತಿ ಮಾಡುವಂತೆ ಪದೇ ಪದೇ ಕೇಳ್ತಾನೆ ಇದ್ರು. ಇತನು ಸಹ ತಾನು ಫೈನಾನ್ಸ್ ನೀಡಿರುವ ಜನರ ಬಳಿ ಹಣ ಕೊಡುವಂತೆಯೂ ಸಹ ಕೇಳ್ತಾ ಇದ್ದ, ಆದ್ರೆ ಅವರು ಹಣವವನ್ನು ಮರುಪಾವತಿ ಮಾಡುತ್ತಿರಲಿಲ್ಲ. ಇತ್ತ ಸಾಲ ಕೊಟ್ಟವರು ಸಾಲ ಕೊಡುವಂತೆ ಕಾಟ ಕೊಡ್ತಾ ಇದ್ರು. ಈ ಎರಡು ಕಾಟದಿಂದ ತಪ್ಪಿಸಿಕೊಳ್ಳಲು ಈ ಮನು ಮಾಡಿದ್ದ ಮಾಸ್ಟರ್ ಪ್ಲಾನ್ ಕೇಳಿದ್ರೆ ಎಂಥವರು ಸಹ ದಿಗಿಲು ಬೀಳುವುದು ಗ್ಯಾರಂಟಿ. ಇದನ್ನೂ ಓದಿ: ಗೋವಾದಲ್ಲಿ ಕಾಂಗ್ರೆಸ್‌ಗೆ ಬಿಗ್ ಶಾಕ್ – ಇಂದು 8 ʼಕೈʼ ಶಾಸಕರು ಬಿಜೆಪಿ ಸೇರ್ಪಡೆ

ಸಾಲಗಾರರಿಂದ ತಪ್ಪಿಸಿಕೊಳ್ಳಲು ಮನು ಕಳೆದ ತಿಂಗಳು ಆಗಸ್ಟ್ 12 ರಂದು ಚೊಟ್ಟನಹಳ್ಳಿ ಗ್ರಾಮದಲ್ಲಿ ನಡೆದ ಗುಡ್ಡಹಬ್ಬದಂದು ಒಂದು ಪ್ಲಾನ್ ಮಾಡ್ತಾನೆ. ಅಂದು ಗುಡ್ಡದ ಪೂಜೆ ಮುಗಿಸಿ ಹಬ್ಬದಲ್ಲಿ ರಾತ್ರಿ 12 ಗಂಟೆಯ ವರೆಗೆ ಇದ್ದು, ನಂತರ ಮನೆಗೆ ಹೋಗಿ ಅಲ್ಲಿ ತನ್ನ ಮೊಬೈಲ್‍ನನ್ನು ಚಚ್ಚಿ ಹಾಕುತ್ತಾನೆ. ನಂತರ ತಾನು ಹಾಕಿದ್ದ ವಿಗ್‍ನ್ನು ಕಿತ್ತು ಹಾಕಿ ಅಲ್ಲಲ್ಲಿ ಕೋಳಿ ರಕ್ತವನ್ನು ಸಿಂಪಡಿಸುತ್ತಾನೆ. ಇದಾದ ನಂತರ ಅದೇ ಊರಲ್ಲಿ ಇರುವ ಕಾಲುವೆಯ ಬಳಿ ತನ್ನ ಚಪ್ಪಲಿಗಳನ್ನು ಅನುಮಾನ ಬರುವ ರೀತಿಯಲ್ಲಿ ಬಿಟ್ಟು ಶಿಫ್ಟ್ ಕಾರನ್ನು ಬಾಡಿಗೆ ಪಡೆದು ಬೆಂಗಳೂರಿಗೆ ಹೋಗಿ ಅಲ್ಲಿಂದ ಗೋವಾಗೆ ತೆರಳುತ್ತಾನೆ. ಇದನ್ನೂ ಓದಿ: ಗಂಡು ಮರಿಗೆ ಜನ್ಮ ನೀಡಿದ ಗಜಪಡೆಯ ಸದಸ್ಯೆ ಲಕ್ಷ್ಮಿ

ಅತ್ತ ಮನು ಸಾಲಗಾರರಿಂದ ತಪ್ಪಿಸಿಕೊಂಡು ಗೋವಾದಲ್ಲಿ ಟೂರ್ ಮಾಡಿಕೊಂಡು ಏಂಜಾಯ್ ಮಾಡ್ತಾ ಇರುತ್ತಾನೆ. ಇತ್ತ ಮನು ಪೋಷಕರು ಊರಿನಲ್ಲಿ ನಡೆದಿದ್ದ ಸೀನ್ ನೋಡಿ ಮನುನನ್ನು ಕೊಲೆ ಮಾಡಿ ಕಾಲುವೆಗೆ ಎಸೆದಿದ್ದಾರೆ ಎಂದು ತಿಳಿದು ಕಣ್ಣೀರು ಹಾಕುತ್ತಾರೆ. ಇದೇ ವೇಳೆ ಒಂದು ಆಡಿಯೋ ಸಹ ವೈರಲ್ ಆಗಿರುತ್ತೆ, ಆ ಆಡಿಯೋದಲ್ಲಿ ಮನು ಸುಪ್ರಿಯಾ ಎಂಬಾಕೆಗೆ 8 ಲಕ್ಷ ಹಣವನ್ನು ಸಾಲವಾಗಿ ನೀಡಿದ್ದು, ಇದಕ್ಕೆ ಪೂರಕವಾದ ಡಾಕ್ಯುಮೆಂಟ್‍ನ್ನು ಸುಪ್ರಿಯಾಳಿಂದ ಮನು ಪಡೆದಿರುತ್ತಾನೆ. ಯಾರೋ ಒಬ್ಬ ಅವಳ ಡಾಕ್ಯುಮೆಂಟ್ ಕೊಡು ದುಡ್ಡು ಆ ಮೇಲೆ ಕೋಡ್ತಾಳೆ. ನೀನು ಕೊಡಲ್ಲ ಅಂದ್ರೆ ಸಲಗ ಸಿನಿಮಾ ಸ್ಟೈಲ್‍ನಲ್ಲಿ ಕೊಲೆ ಆಗ್ತೀಯಾ ಎಂದು ಬೆದರಿಕೆ ಸಹ ಹಾಕಿರುತ್ತಾನೆ. ಈ ಆಡಿಯೋ ಕೇಳಿದ ಮನು ಪೋಷಕರಿಗೆ ತನ್ನ ಮಗನಿಗೆ ಏನೋ ಮಾಡಿದ್ದಾರೆ ಎನ್ನುವುದು ಅನುಮಾನ ಬರುತ್ತೆ. ನಂತರ ಈ ಸಂಬಂಧ ಅರಕೆರೆ ಪೊಲೀಸ್ ಠಾಣೆಗೆ ದೂರನ್ನು ಸಹ ನೀಡ್ತಾರೆ.

ಪ್ರಕರಣವನ್ನು ದಾಖಲು ಮಾಡಿಕೊಂಡ ಪೊಲೀಸರಿಗೆ ಆರಂಭದಲ್ಲಿ ಅನೇಕ ಗೊಂದಲಗಳು ಕಾಡುತ್ತವೆ. ಈ ಸಂಬಂದ ಹಲವು ಮಂದಿಯನ್ನು ಕರೆತಂದು ವಿಚಾರಣೆ ಮಾಡಿದ್ರು ಏನು ಆಗಿದೆ ಎಂದು ಪೊಲೀಸರಿಗೆ ತಿಳಿಯುವುದಿಲ್ಲ. ಇದಾದ ಸ್ವಲ್ಪ ದಿನಗಳ ನಂತರ ಮನು ಬೆಂಗಳೂರಿನ ಪಿಜಿ ಒಂದರಲ್ಲಿ ಇದ್ದಾನೆ ಎಂದು ಪೊಲೀಸರಿಗೆ ತಿಳಿಯುತ್ತದೆ. ಬಳಿಕ ಮನುನನ್ನು ಕರೆತಂದು ವಿಚಾರಣೆ ಮಾಡಿದಾಗ ಮಿಸ್ಸಿಂಗ್ ಮಿಸ್ಟರಿ ಜೊತೆ ತಾನು ಮಾಡಿದ್ದ ಡ್ರಾಮಾದ ಕಥೆ ಬೆಳಕಿಗೆ ಬಂದಿದೆ. ಇತ್ತ ಸಾಲಗಾರರ ಕಾಟ ತಾಳಲಾರದೆ ಕಿಡ್ನಾಪ್ ಅಥವಾ ಮರ್ಡರ್‌ನ ಡ್ರಾಮಾ ಮಾಡಿದ ವಿಚಿತ್ರ ಕೇಸ್‍ನ್ನು ಭೇದಿಸುವಲ್ಲಿ ಮಂಡ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.

Live Tv

Leave a Reply

Your email address will not be published.

Back to top button