ಚಂಡೀಗಢ: ಸಿಸೇರಿಯನ್ ಹೆರಿಗೆಯ ಬಳಿಕ ಮಹಿಳೆಯ ಹೊಟ್ಟೆಯಲ್ಲಿ ಹತ್ತಿಯ ಸ್ವ್ಯಾಬ್ ಅನ್ನು ಬಿಟ್ಟಿದ್ದಕ್ಕಾಗಿ ವೈದ್ಯಕೀಯ ನಿರ್ಲಕ್ಷ್ತದ ಆರೋಪದ ಮೇಲೆ ಇಬ್ಬರು ವೈದ್ಯರ ವಿರುದ್ಧ ಪ್ರಕರಣ ದಾಖಲಾಗಿದೆ.
ಗುರುಗ್ರಾಮದ ಶಿವಾ ಆಸ್ಪತ್ರೆಯಲ್ಲಿ 2020ರ ನವೆಂಬರ್‌ನಲ್ಲಿ ಮಹಿಳೆಯೊಬ್ಬರಿಗೆ ಸಿಸೇರಿಯನ್ ಹೆರಿಗೆ ನಡೆಸಲಾಗಿತ್ತು. ಶಸ್ತ್ರ ಚಿಕಿತ್ಸೆಯೆಲ್ಲಾ ಮುಗಿದ ಬಳಿಕ ಮಹಿಳೆಗೆ ಹೊಟ್ಟೆ ನೋವು ಹಾಗೂ ಹೊಟ್ಟೆಯಲ್ಲಿ ಊತ ಪ್ರಾರಂಭವಾಗಿತ್ತು. ಮಹಿಳೆಯ ಪತಿ ಆಕೆಯನ್ನು ಮತ್ತೊಮ್ಮೆ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅವರಿಗೆ ಕೆಲವು ಔಷಧಗಳನ್ನು ಕೊಟ್ಟು ಕಳುಹಿಸಲಾಗಿತ್ತು. ಇದನ್ನೂ ಓದಿ: ಚೀನಾದಿಂದ ಅರುಣಾಚಲ ಪ್ರದೇಶದ ಹುಡುಗನ ಅಪಹರಣ – ಪ್ರಧಾನಿ ವಿರುದ್ಧ ರಾಗಾ ಕಿಡಿ
ಶಿವಾ ಆಸ್ಪತ್ರೆಯ ವೈದ್ಯರು ನೀಡಿದ ಔಷಧಗಳು ಫಲಕಾರಿಯಾಗುತ್ತಿಲ್ಲ ಎಂಬ ಕಾರಣಕ್ಕೆ ಮಹಿಳೆಯನ್ನು ಇನ್ನೊಂದು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಆಕೆಯ ಹೊಟ್ಟೆಯಲ್ಲಿ ಏನಾದರೂ ಇರಬಹುದು ಎಂದು ಶಂಕಿಸಿ ಇನ್ನೊಂದು ಚಿಕಿತ್ಸೆ ನೀಡಲು ಪ್ರಾರಂಭಿಸಿದರು.
ವಿಚಾರ ತಿಳಿದ ಶಿವ ಆಸ್ಪತ್ರೆ ಮಹಿಳೆಯ ಮನೆಗೆ ಅಂಬುಲೆನ್ಸ್ ಕಳುಹಿಸಿ ಆಕೆಯನ್ನು ಬಲವಂತವಾಗಿ ಕರೆತಂದು, ಆಕೆಯ ಹೊಟ್ಟೆಯಲ್ಲಿದ್ದ ಹತ್ತಿಯ ಸ್ವ್ಯಾಬ್ ಅನ್ನು ಹೊರ ತೆಗೆದಿದ್ದಾರೆ ಎಂದು ಮಹಿಳೆಯ ಪತಿ ಆರೋಪಿಸಿದ್ದಾರೆ. ಜೊತೆಗೆ ಪ್ರಜ್ಞಾಹೀನಳಾಗಿದ್ದ ಹೆಂಡತಿಯ ಕೈಯಲ್ಲಿ ಕೆಲವು ಖಾಲಿ ಪತ್ರಗಳಿಗೆ ಸಹಿ ಕೂಡ ಹಾಕಿಸಿಕೊಂಡಿದ್ದಾರೆ ಎಂದು ದೂರಿದ್ದಾರೆ. ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಎಣ್ಣೆ ದರ ಭಾರೀ ಇಳಿಕೆ – ಮನೆಯಲ್ಲೇ ಮಿನಿಬಾರ್‌ಗೆ ಅನುಮತಿ
ಇದೀಗ ಶಿವಾ ಆಸ್ಪತ್ರೆಯ ಇಬ್ಬರು ವೈದ್ಯರ ಮೇಲೆ ಕೇಸ್ ದಾಖಲಾಗಿದೆ.