ನವದೆಹಲಿ: ಮುಂದಿನ ಎರಡು ವರ್ಷದಲ್ಲಿ ಎಲೆಕ್ಟ್ರಿಕ್ ವಾಹನಗಳ(ಇವಿ) ಬೆಲೆ ಪೆಟ್ರೋಲ್ ವಾಹನದಷ್ಟೇ ಆಗಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ವೆಬಿನಾರ್‌ನಲ್ಲಿ ಮಾತನಾಡಿದ ಅವರು, ಈಗಾಗಲೇ ಇವಿಗಳ ಮೇಲೆ ಜಿಎಸ್‌ಟಿ ಕೇವಲ ಶೇ.5ರಷ್ಟಿದ್ದು, ಲಿಥಿಯಂ ಆಯಾನ್ ಬ್ಯಾಟರಿಗಳ ಬೆಲೆಯೂ ಕಡಿಮೆಯಾಗುತ್ತಿದೆ. ಇದಲ್ಲದೆ ಪೆಟ್ರೋಲ್ ಪಂಪ್‌ಗಳು ಇವಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲು ಅನುಮತಿಸುವ ನೀತಿಯನ್ನು ಸರ್ಕಾರ ಈಗಾಗಲೇ ರೂಪಿಸಿದೆ. ಎರಡು ವರ್ಷಗಳಲ್ಲಿ ಭಾರತದಾದ್ಯಂತ ಸಾಕಷ್ಟು ಚಾರ್ಜಿಂಗ್ ಪಾಯಿಂಟ್‌ಗಳು ಇರಲಿದೆ ಎಂದು ತಿಳಿಸಿದರು.
Addressing webinar on ‘Accelerate the phase-out of coal and speed up the switch to electric vehicles’ organized by The Sustainability Foundation, Denmark https://t.co/55V5QyNin2
— Nitin Gadkari (@nitin_gadkari) November 7, 2021
ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚಾಗುತ್ತಿದೆ. ಪೆಟ್ರೋಲ್ ಆಧಾರಿತ ವಾಹನದಲ್ಲಿ ಪ್ರತಿ ಕಿಲೋಮೀಟರ್‌ಗೆ 10 ರೂ., ಡೀಸೆಲ್ ವಾಹನದಲ್ಲಿ 7 ರೂ. ಆದರೆ ಇವಿಗಳಲ್ಲಿ 1 ರೂ. ಆಗುತ್ತದೆ. 2030ರ ವೇಳೆಗೆ ಭಾರತದಲ್ಲಿ ಖಾಸಗಿ ಕಾರು 30%, ವಾಣಿಜ್ಯ ವಾಹನಗಳಿಗೆ 70%, ಬಸ್‌ಗಳಿಗೆ 40% ಮತ್ತು ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ 80% ಇವಿ ಮಾರಾಟದ ಗುರಿಯನ್ನು ಹೊಂದಿದೆ. ಪ್ರಸ್ತುತ ದೇಶದಲ್ಲಿ ಕೇವಲ 2-3 ಎಲೆಕ್ಟ್ರಿಕ್ ಕಾರುಗಳ ಬೆಲೆ 15 ಲಕ್ಷ ರೂ.ಗಿಂತ ಕಡಿಮೆಯಿದೆ. ಸಬ್ಸಿಡಿ ನೀಡುವ ಹಿನ್ನೆಲೆಯಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಬೆಲೆ ಈಗಾಗಲೇ ಅಸ್ತಿತ್ವದಲ್ಲಿರುವ ಪೆಟ್ರೋಲ್ ವಾಹನಗಳಿಗೆ ಸರಿ ಸಮಾನವಾಗಿದೆ ಎಂದರು.
ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇನಲ್ಲಿ ಎಲೆಕ್ಟ್ರಿಕ್ ಹೈವೇ ವ್ಯವಸ್ಥೆಯನ್ನು ಸ್ಥಾಪಿಸಲು ಸಂಭಾವ್ಯ ಪೈಲಟ್ ಯೋಜನೆಯನ್ನು ಯೋಜಿಸಲಾಗುತ್ತಿದೆ. ಪ್ರದೇಶದಲ್ಲಿ ಹೇರಳವಾಗಿ ಲಭ್ಯವಿರುವ ಸೌರ ಶಕ್ತಿಯ ಶಕ್ತಿಯನ್ನು ಬಳಸಿಕೊಂಡು ವಿದ್ಯುದ್ದೀಕರಿಸಬಹುದು. ಇದಲ್ಲದೇ ಇಂಧನ ಕೇಂದ್ರಗಳಲ್ಲಿ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸಲು ಸರ್ಕಾರ ಮುಂದಾಗಿದೆ ಎಂದರು. ಇದನ್ನೂ ಓದಿ: ಅಪ್ಪುನಂತ ತಮ್ಮನನ್ನು ಪಡೆಯಲು ನಾನು ಪುಣ್ಯ ಮಾಡಿದ್ದೆ: ಶಿವಣ್ಣ ಭಾವುಕ
ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) 2023 ರ ವೇಳೆಗೆ ದೇಶದ ಪ್ರಮುಖ ಹೆದ್ದಾರಿಗಳಲ್ಲಿ ಕನಿಷ್ಠ 700 ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸುವ ಯೋಜನೆಯನ್ನು ರೂಪಿಸಿದೆ. ಇವುಗಳು 40-60 ಕಿ.ಮೀ ವ್ಯಾಪ್ತಿಯಲ್ಲಿ ಇರಲಿದೆ. ಸರ್ಕಾರವು ಶೀಘ್ರದಲ್ಲೇ ದೇಶದ ಸಂಪೂರ್ಣ ವಿದ್ಯುತ್ ಟ್ರಾಕ್ಟರ್ ಅನ್ನು ಪ್ರಾರಂಭಿಸಲಿದೆ ಎಂದು ಗಡ್ಕರಿ ಹೇಳಿದರು. ಇದನ್ನೂ ಓದಿ: ವರ್ಷಾಂತ್ಯಕ್ಕೆ ಎಲ್ಲ ವಯಸ್ಕರಿಗೂ ಡಬಲ್ ಡೋಸ್ ಅನುಮಾನ
ಪ್ರಸ್ತುತ, ಭಾರತವು ವಿಶ್ವದ ನಾಲ್ಕನೇ ಅತಿದೊಡ್ಡ ನವೀಕರಿಸಬಹುದಾದ ಶಕ್ತಿ ಸಾಮರ್ಥ್ಯವನ್ನು ಹೊಂದಿದೆ. ಕಳೆದ ಎರಡು ವರ್ಷಗಳಲ್ಲಿ ಇ-ಸ್ಕೂಟರ್‌ಗಳು, ಇ-ಕಾರ್ಟ್‌ಗಳು, ಇ-ಆಟೋಗಳು, ಇ-ಬೈಸಿಕಲ್‌ಗಳಂತಹ ಸಣ್ಣ ಬ್ಯಾಟರಿ ಚಾಲಿತ ವಾಹನಗಳಿಗೆ ದೇಶವು ಹೆಚ್ಚಿದ ಬೇಡಿಕೆಯನ್ನು ಕಂಡಿದೆ. ಕೋವಿಡ್ ಪೂರ್ವದ ಅವಧಿಗೆ ಹೋಲಿಸಿದರೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮತ್ತು ಎಲೆಕ್ಟ್ರಿಕ್ ಕಾರು ಮಾರಾಟವು ಕ್ರಮವಾಗಿ 145% ಮತ್ತು 190% ರಷ್ಟು ಏರಿಕೆ ಕಂಡಿದೆ. ಇವಿಗಳ ಈ ಎರಡು ವಿಭಾಗಗಳಲ್ಲಿ ಭಾರತವು ರಫ್ತು ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದರು.