ರಾಯಚೂರು: ಜಿಲ್ಲೆಯ ದೇವದುರ್ಗದ 33 ಗ್ರಾಮ ಪಂಚಾಯಿತಿಗಳಲ್ಲಿ ನಡೆದಿರುವ 100 ಕೋಟಿ ರೂ.ಗೂ ಅಧಿಕ ಹಗರಣದ ಹಿನ್ನೆಲೆ ಈಗ 4 ಜನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು (PDO) ಅಮಾನತು ಮಾಡಲಾಗಿದೆ.
ಮುಷ್ಟುರು ಪಿಡಿಒ ಪತ್ಯಪ್ಪ ರಾಥೋಡ್, ಕ್ಯಾದಗೇರಾ ಪಿಡಿಒ ಸಿಬಿ ಪಾಟೀಲ್, ಗಾಣದಾಳ ಪಿಡಿಒ ಮಲ್ಲಪ್ಪ, ಶಾವಂತಗೇರಾ ಪಿಡಿಒ ಗುರುಸ್ವಾಮಿ ಅಮಾನತಾಗಿದ್ದಾರೆ. ರಾಯಚೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಾಂಡ್ವೇ ರಾಹುಲ್ ತುಕಾರಾಂ ಅಮಾನತು ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಸಕಲೇಶಪುರದ ಗ್ರಾಮದೊಳಗೆ ಎಂಟ್ರಿ ಕೊಟ್ಟ ಗಜಪಡೆ – ಗುಂಪಿನಲ್ಲಿ ಸೇರಿಕೊಂಡ ಅರ್ಜುನನನ್ನು ಕೊಂದ ಪುಂಡಾನೆ
Advertisement
Advertisement
ಇಲಾಖೆ ವಿಚಾರಣೆ ಕಾಯ್ದಿರಿಸಿ ಅಮಾನತ್ತು ಆದೇಶ ಹೊರಡಿಸಲಾಗಿದೆ. ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅನುದಾನದಲ್ಲಿ ಭ್ರಷ್ಟಾಚಾರ ಎಸಗಿರುವುದು ಸಾಮಾಜಿಕ ಲೆಕ್ಕಪರಿಶೋಧನಾ ಸಮಿತಿ ತನಿಖೆಯಲ್ಲಿ ಬಯಲಾಗಿದೆ.
Advertisement
2020-21 ರಿಂದ 2022-23 ರವರೆಗೆ ಯೋಜನೆ ಅನುಷ್ಠಾನದಲ್ಲಿ ಭ್ರಷ್ಟಾಚಾರ ಬಯಲಾಗಿದ್ದು, ಉಳಿದ ಪಂಚಾಯತಿ ಪಿಡಿಒಗಳು ಹಾಗೂ ಅಕ್ರಮದಲ್ಲಿ ಭಾಗಿಯಾದ ಇನ್ನುಳಿದ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸುವ ಸಾಧ್ಯತೆಯಿದೆ. ಇದನ್ನೂ ಓದಿ: ಇಂದು ನನ್ನ ಕಣ್ಣು ತೆರೆಯಿತು: ಕಲ್ಲಡ್ಕ ಪ್ರಭಾಕರ ಭಟ್‌ರನ್ನು ಹಾಡಿ ಹೊಗಳಿದ ಹೆಚ್‌ಡಿಕೆ