ದಾವಣಗೆರೆ: ಭ್ರಷ್ಟಾಚಾರ (Corruption) ಆರೋಪ ಮಾಡಿದವರ ಸವಾಲನ್ನು ಒಪ್ಪಿ ಆಣೆ ಪ್ರಮಾಣಕ್ಕಾಗಿ ಹೊನ್ನಾಳಿ (Honnali) ಶಾಸಕ ಡಿ.ಜಿ ಶಾಂತನಗೌಡ (Shanthana Gowda) ಅವರು ಕುಂದೂರು ಆಂಜನೇಯ ದೇವಾಲಯಕ್ಕೆ ಆಗಮಿಸಿದ್ದರು. ದೇವಾಲಯದಲ್ಲಿ ಸುಮಾರು 2 ಗಂಟೆ ಅವರು ಕಾದಿದ್ದರು.
ಗುತ್ತಿಗೆದಾರರಿಂದ ಹಣ ಪಡೆದಿದ್ದಾರೆ ಎಂದು ಅವರ ವಿರುದ್ಧ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಅವರ ಆಪ್ತ ಕೊಳೇನಹಳ್ಳಿ ಸತೀಶ್ ಆರೋಪಿಸಿದ್ದರು. ಇದೇ ವಿಚಾರವಾಗಿ ಸವಾಲು ಹಾಕಿ ಕುಂದೂರು ಆಂಜನೇಯ ದೇವಸ್ಥಾನಕ್ಕೆ ಆಣೆ ಪ್ರಮಾಣಕ್ಕೆ ಆಹ್ವಾನಿಸಿದ್ದರು. ಈ ಸವಾಲನ್ನು ಒಪ್ಪಿದ್ದ ಶಾಸಕರು ದೇವಾಲಯಕ್ಕೆ ಬಂದು ಕಾದಿದ್ದಾರೆ. ಆದರೆ ಸವಾಲೆಸೆದ ಮುಖಂಡರು ದೇವಾಲಯಲಯಕ್ಕೆ ಬರಲಿಲ್ಲ. ಇದನ್ನೂ ಓದಿ: ಗಣೇಶ ವಿಗ್ರಹಕ್ಕೆ ಅಪಮಾನ – ಕಿಡಿಗೇಡಿ ಮಹಿಳೆಗಾಗಿ ಚಿಕ್ಕಮಗಳೂರಲ್ಲಿ ಹುಡುಕಾಟ
ಭದ್ರಾ ಬಲದಂಡೆ ಕಾಲುವೆಯಿಂದ ಹೊಸದುರ್ಗ ಹಾಗೂ ಕಡೂರಿಗೆ ಕುಡಿಯುವ ನೀರು ಪೂರೈಕೆ ಯೋಜನೆಯ ಗುತ್ತಿಗೆದಾರರಿಂದ ಶಾಸಕರು ಹಣ ಪಡೆದಿದ್ದಾರೆ ಎಂದು ಸತೀಶ್ ಆರೋಪಿಸಿದ್ದರು. ಈ ಬಗ್ಗೆ ತಾನು ಹಣ ಪಡೆದಿಲ್ಲ ಎಂದು ಮಾಧ್ಯಮಗಳಿಗೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಶಾಸಕರು ಹೇಳಿಕೊಂಡಿದ್ದರು. ಇದನ್ನೂ ಓದಿ: Hassan | ಕಲ್ಲಿನ ಗಣೇಶ ಮೂರ್ತಿಗೆ ಚಪ್ಪಲಿ ಹಾರ ಹಾಕಿದ ಕಿಡಿಗೇಡಿಗಳು