ಚಂಡೀಗಢ: ಆಡಳಿತ ಪಕ್ಷ ಆಮ್ ಆದ್ಮಿಯ ಶಾಸಕ (AAP) ಅಮಿತ್ ರತ್ತನ್ ಕೋಟ್ಛಟ್ಟಾ (Amit Rattan Kotfatta) ಅವರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಪಂಜಾಬ್ ( Punjab) ವಿಜಿಲೆನ್ಸ್ ಬ್ಯುರೋ ಪಟಿಯಾಲದಲ್ಲಿ ಬಂಧಿಸಿದೆ.
Advertisement
Advertisement
ಸಹಾಯಕ ನಾಲ್ಕು ಲಕ್ಷ ರೂ. ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದ. ಈ ಪ್ರಕರಣದಲ್ಲಿ ಬಟಿಂಡಾ ಗ್ರಾಮೀಣ ಕ್ಷೇತ್ರದ ಪ್ರತಿನಿಧಿಯಾಗಿರುವ ಕೋಟ್ಫಟ್ಟಾ ಅವರ ಪಾತ್ರ ಇರುವುದಕ್ಕೆ ಬಲವಾದ ಸಾಕ್ಷಿಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕೊರೊನಾಕ್ಕೆ ಹೆದರಿ 3 ವರ್ಷದಿಂದ ಮನೆಯೊಳಗೆ ಅಪ್ರಾಪ್ತ ಮಗನೊಂದಿಗೆ ತಾನು ಬಂಧಿಯಾದ ತಾಯಿ
Advertisement
ಘುದ್ದಾ ಗ್ರಾಮದ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಲು ಕೋಟ್ಫಟ್ಟಾ ಮತ್ತು ಅವರ ಸಹಾಯಕ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಬಟಿಂಡಾ ನಿವಾಸಿ ಪ್ರೀತ್ಪಾಲ್ ಕುಮಾರ್ ಆರೋಪಿಸಿದ್ದಾರೆ. ಕುಮಾರ್ ನೀಡಿದ ದೂರಿನಲ್ಲಿ ರಶಿಮ್ ಗಾರ್ಗ್ ಅವರನ್ನು ಬಟಿಂಡಾದಲ್ಲಿರುವ ಕೋಟ್ಫಟ್ಟಾ ಅವರ ನಿವಾಸಕ್ಕೆ ಆಹ್ವಾನಿಸಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಕುರಿತು ವಾಯ್ಸ್ ರೆಕಾರ್ಡ್‍ನ್ನು ತಮ್ಮ ದೂರಿನೊಂದಿಗೆ ಸಲ್ಲಿಸಿದ್ದರು. ಸರ್ಕಾರದ ಅತಿಥಿ ಗೃಹದಲ್ಲಿ ಗಾರ್ಗ್ ಹಣ ಪಡೆಯುವಾಗ ಸಿಕ್ಕಿಬಿದ್ದಿದ್ದರು. ಈ ಸಂದರ್ಭದಲ್ಲಿ ಅಲ್ಲೇ ಇದ್ದ ಕೋಟ್ಫಾಟ್ಟಾ ಅವರನ್ನು ಪ್ರಶ್ನಿಸಲಾಗಿತ್ತು.
Advertisement
ಕೋಟ್ಫಾಟ್ಟಾ ಪರವಾಗಿ ಅವರ ಸಹಾಯಕ ರಶೀಮ್ ಗಾರ್ಗ್ (Rashim Garg) ಲಂಚ ಸಂಗ್ರಹಿಸಿದ್ದಾರೆ ಎಂಬುದು ಸ್ಪಷ್ಟವಾಗಿ ತಿಳಿದು ಬಂದಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ʻಮಾರ್ಕ್ ಆ್ಯಂಟನಿʼ ಶೂಟಿಂಗ್ ವೇಳೆ ಅವಘಢ: ಅಪಘಾತದಿಂದ ಪಾರಾದ ನಟ ವಿಶಾಲ್
ಬಂಧನದ ನಂತರ ಅವರನ್ನು ಬಟಿಂಡಾಗೆ ಕರೆದೊಯ್ಯಲಾಯಿತು. ಅಲ್ಲಿಂದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಭ್ರಷ್ಟಾಚಾರ ಆರೋಪದ ಮೇಲೆ ಬಂಧನವಾಗುತ್ತಿರುವ ಆಪ್ ಪಕ್ಷದ ಎರಡನೇ ಶಾಸಕ ಇವರಾಗಿದ್ದಾರೆ. ಕಳೆದ ಮೇ ತಿಂಗಳಲ್ಲಿ ಟೆಂಡರ್ ಹಂಚಿಕೆಯಲ್ಲಿ 1% ಕಮಿಷನ್ ಬೇಡಿಕೆ ಆರೋಪದ ಮೇಲೆ ಆರೋಗ್ಯ ಸಚಿವ ವಿಜಯ್ ಸಿಂಗ್ಲಾ (Vijay Singla) ಅವರನ್ನು ಬಂಧಿಸಲಾಗಿತ್ತು.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k