ತಮಿಳು ನಟ ವಿಶಾಲ್ (Actor Vishal) `ಲಾಠಿ’ ಚಿತ್ರದ ನಂತರ `ಮಾರ್ಕ್ ಆ್ಯಂಟನಿ’ (Mark Antony) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ವೇಳೆ ಅವಘಡ ಸಂಭವಿಸಿದ್ದು, ಇಡೀ ಚಿತ್ರತಂಡವೇ ಬೆಚ್ಚಿಬಿದ್ದಿದೆ. ಅಪಘಾತದಿಂದ ನಟ ವಿಶಾಲ್ ಅವರು ಪಾರಾಗಿದ್ದಾರೆ.
ಕಾಲಿವುಡ್ ನಟ ವಿಶಾಲ್ ನಟಿಸುತ್ತಿರುವ `ಮಾರ್ಕ್ ಆ್ಯಂಟನಿ’ ಚಿತ್ರದ ಶೂಟಿಂಗ್ ವೇಳೆ ಅವಘಡ ಸಂಭವಿಸಿದ್ದು, ದೊಡ್ಡ ಅಪಘಾತದಿಂದ ವಿಶಾಲ್ ಅವರು ಪಾರಾಗಿರುವಂತಹ ಘಟನೆ ನಡೆದಿದೆ. ಇದೇ ಚಿತ್ರದ ಸೆಟ್‌ನಲ್ಲಿ ಕೆಲ ದಿನಗಳ ಹಿಂದೆ ಚಿತ್ರೀಕರಣದ ವೇಳೆ ಗಾಯಗೊಂಡಿದ್ದರು. ಆ ಘಟನೆ ಮಾಸುವ ಮುನ್ನವೇ ಅದೇ ಜಾಗದಲ್ಲಿ ಮತ್ತೊಂದು ಘಟನೆ ಸಂಭವಿಸಿದೆ.
Advertisement
#MarkAntony Marking towards finishing! ????????????????#FromTheWorldOfMarkAntony pic.twitter.com/UcWWaCD4HH
— Vishal (@VishalKOfficial) January 26, 2023
Advertisement
ಇತ್ತೀಚೆಗೆ ಚೆನ್ನೈನ ಸ್ಟುಡಿಯೋದರಲ್ಲಿ (Chennai Studio) `ಮಾರ್ಕ್ ಆ್ಯಂಟನಿ’ (Mark Antony) ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಸಿನಿಮಾಗಾಗಿ ಲಾರಿಗೆ ಸಂಬಂಧಿಸಿದ ದೃಶ್ಯವನ್ನು ಚಿತ್ರತಂಡ ಸೆರೆಹಿಡಿಯಲಾಗುತ್ತಿತ್ತು. ಈ ವೇಳೆ ಲಾರಿ ಡ್ರೈವರ್ ನಿಯಂತ್ರಣ ತಪ್ಪಿದ್ದು, ಎಲ್ಲಿ ಲಾರಿ ನಿಲ್ಲಬೇಕೋ ಅಲ್ಲಿ ನಿಲ್ಲದೆ ಮುಂದಕ್ಕೆ ನುಗ್ಗಿದೆ. ಅಲ್ಲೇ ಕೆಳಗಡೆ ಮಲಗಿದ್ದ ವಿಶಾಲ್ ಅವರ ಪಕ್ಕದಲ್ಲೇ ಲಾರಿ ಹಾದು ಹೋಗಿದ್ದು, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ನಟ ಪಾರಾಗಿದ್ದಾರೆ. ಸದ್ಯ ವಿಶಾಲ್ ಅಪಘಾತದಿಂದ ಪಾರಾಗಿರುವ ವಿಚಾರ ತಿಳಿದ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಈ ಘಟನೆ ಬಗ್ಗೆ ವಿಶಾಲ್ ಅವರು ಮಾಹಿತಿ ನೀಡಿದ್ದಾರೆ.
Advertisement
Really really thx to god ????noolizhaiil Uire thappinom …. Accidentally, instead of taking the straight root , lorry went little diagonal and accident happened, if it would have come straight we both wouldn’t have been tweeting now Yah great thx to GOD we all got escaped ???????????????? https://t.co/RKgvCJZL3z
— S J Suryah (@iam_SJSuryah) February 22, 2023
Advertisement
ಚಿತ್ರೀಕರಣದ ವೇಳೆ ನಡೆದ ಅಪಘಾತದ ಕುರಿತಾಗಿ ವಿಶಾಲ್ ಅವರು ಸೊಶೀಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊAಡಿದ್ದಾರೆ. ಕೆಲವೇ ಕ್ಷಣ ಸ್ವಲ್ಪವೇ ದೂರದಲ್ಲಿ ನನ್ನ ಸಾವು ಕಾಣಿಸಿತು. ದೇವರಿಗೆ ಧನ್ಯವಾದ ತಿಳಿಸುತ್ತೇನೆ. ಅವಘಡದಲ್ಲಿ ಯಾರಿಗೂ ಯಾವುದೇ ರೀತಿಯ ತೊಂದರೆ ಆಗಿಲ್ಲ. ಸ್ವಲ್ಪ ಸಮಯದ ಬಳಿಕ ಮತ್ತೆ ಶೂಟಿಂಗ್ ಮುಂದುವರೆಸಲಾಯಿತು ಎಂದು ವಿಶಾಲ್ ಅವರು ತಮ್ಮ ಟ್ವೀಟರ್‌ನಲ್ಲಿ ಬರೆದುಕೊಂಡಿದ್ದಾರೆ.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k