ಹುಬ್ಬಳ್ಳಿ: ನಗರದ ಈದ್ಗಾ ಮೈದಾನದಲ್ಲಿ (Eidgah Maidaan) ಗಣೇಶನ ಪ್ರತಿಷ್ಠಾಪನೆಗೆ ಹೈಕೋರ್ಟ್ ಅನುಮತಿ ನೀಡಿದರೂ ಪಾಲಿಕೆ ಆಯುಕ್ತರು (Corporation Commissioner) ಅನುಮತಿ ನೀಡಿರಲಿಲ್ಲ. ಇದೀಗ ಹಲವು ಷರತ್ತುಗಳನ್ನು ವಿಧಿಸಿ ಈದ್ಗಾ ಮೈದಾನದಲ್ಲಿ ಗಣೇಶನ ಪ್ರತಿಷ್ಠಾಪನೆಗೆ ಅನುಮತಿ ನೀಡಲಾಗಿದೆ.
ಸೆಪ್ಟೆಂಬರ್ 19 ರಂದು ಬೆಳಗ್ಗೆ 6 ಗಂಟೆಯಿಂದ 21 ಮಧ್ಯಾಹ್ನ 12 ಗಂಟೆಯವರೆಗೆ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ದೊರೆತಿದೆ. 30×30 ಅಳತೆಯ ಪೆಂಡಾಲ್‌ಗೆ ಅವಕಾಶ ನೀಡಲಾಗಿದೆ. ಗಣೇಶ ಉತ್ಸವದ ಹೊರತಾಗಿ ಯಾವುದೇ ಬಾವುಟ, ಭಿತ್ತಿಪತ್ರ, ವಿವಾದಿತ ಫೋಟೋ ಪ್ರದರ್ಶನವನ್ನು ನಿಷೇಧಿಸಲಾಗಿದೆ. ಇದನ್ನೂ ಓದಿ: ನಿರ್ಮಲಾ ಸೀತಾರಾಮನ್ ಹೊಗಳಿಕೆಯನ್ನೇ ತಮ್ಮ ಮೈಲೇಜ್‍ಗೆ ಬಳಸಿಕೊಂಡ್ರಾ ಚೈತ್ರಾ?
Advertisement
Advertisement
ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿ (Ganesh Chaturthi) ಹಬ್ಬ ಆಚರಣೆ ವೇಳೆ ಮನರಂಜನಾ ಕಾರ್ಯಕ್ರಮಗಳಿಗೆ ನಿಷೇಧ ಹೇರಲಾಗಿದೆ. ಅನಾವಶ್ಯಕ ಗಲಭೆ, ಗಲಾಟೆಗಳಿಗೆ ಆಯೋಜಕರೇ ಹೊಣೆಯಾಗಲಿದ್ದಾರೆ. ಅನ್ಯಧರ್ಮೀಯರ ಭಾವನೆಗಳಿಗೆ ಧಕ್ಕೆ ತರುವಂತಿಲ್ಲ. ಮಾತ್ರವಲ್ಲದೇ ಪ್ರಚೋದನಕಾರಿ ಹೇಳಿಕೆ, ಭಾಷಣ ನಿಷೇಧ ಸೇರಿದಂತೆ 18 ಷರತ್ತುಗಳನ್ನು ಮಹಾನಗರ ಪಾಲಿಕೆ ವಿಧಿಸಿದೆ. ಇದನ್ನೂ ಓದಿ: 39 ವರ್ಷದ ವ್ಯಕ್ತಿಗೆ ಪಾಸಿಟಿವ್- ಕೇರಳದಲ್ಲಿ ನಿಫಾ ಪ್ರಕರಣ 6ಕ್ಕೆ ಏರಿಕೆ
Advertisement
Web Stories