ನವದೆಹಲಿ: 2012-13 ಮತ್ತು 2015-16 ಅವಧಿಯಲ್ಲಿ ಕಾರ್ಪೋರೇಟ್ ಕಂಪೆನಿಗಳು 956.77 ಕೋಟಿ ರೂ. ಹಣವನ್ನು ರಾಜಕೀಯ ಪಕ್ಷಗಳಿಗೆ ದೇಣಿಗೆಯಾಗಿ ನೀಡಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.
ಅಸೋಸಿಯೇಷನ್ ಫಾರ್ ಡೆಮೊಕ್ರಾಟಿಕ್ ರಿಫಾರ್ಮ್ಸ್ (ಎಡಿಆರ್) ರಾಜಕೀಯ ಪಕ್ಷಗಳ ದೇಣಿಗೆ ಬಗ್ಗೆ ಅಧ್ಯಯನ ನಡೆಸಿ ಈ ವರದಿ ನೀಡಿದೆ. ಬಿಜೆಪಿಗೆ ಅತಿ ಹೆಚ್ಚು ದೇಣಿಗೆ ಹರಿದು ಬಂದಿದ್ದು, ಈ ಅವಧಿಯಲ್ಲಿ 2,987 ಕಾರ್ಪೋರೇಟ್ ದಾನಿಗಳಿಂದ ಒಟ್ಟು 705.81 ಕೋಟಿ ರೂ. ದೇಣಿಗೆ ಬಂದಿದೆ ಎಂದು ಎಡಿಆಎರ್ ತಿಳಿಸಿದೆ.
Advertisement
ಕಾಂಗ್ರೆಸ್ ಪಕ್ಷಕ್ಕೆ 167 ದಾನಿಗಳಿಂದ 198.16 ಕೋಟಿ ರೂ. ಹಣ ಬಂದಿದ್ದರೆ, ಎನ್‍ಸಿಪಿಗೆ 40 ದಾನಿಗಳಿಂದ 50.73 ಕೋಟಿ ರೂ. ಬಂದಿದೆ. ಸಿಪಿಎಂಗೆ 45 ದಾನಿಗಳಿಂದ 1.89 ಕೋಟಿ ರೂ., 17 ದಾನಿಗಳಿಂದ ಸಿಪಿಐಗೆ 18 ಲಕ್ಷ ರೂ. ಹಣ ದೇಣಿಗೆ ರೂಪದಲ್ಲಿ ಬಂದಿದೆ.
Advertisement
ವಿಶೇಷವಾಗಿ ಐದು ರಾಜಕೀಯ ಪಕ್ಷಗಳಿಗೆ ಲೋಕಸಭಾ ಚುನಾವಣೆ ನಡೆದ ವರ್ಷದಲ್ಲಿ(2014-15) ಅತಿ ಹೆಚ್ಚು ಹಣ ದೇಣಿಗೆ ರೂಪದಲ್ಲಿ ಬಂದಿದೆ. 82.14 ಕೋಟಿ ರೂ.(2012-13), 224.61 ಕೋಟಿ ರೂ.(2013-14), 573.18 ಕೋಟಿ ರೂ.(2014-15), 76.94 ಕೋಟಿ ರೂ.(2015-16) ಹಣ ದೇಣಿಗೆ ಬಂದಿದೆ.
Advertisement
ಯಾವ ವರ್ಷ ಯಾರಿಗೆ ಎಷ್ಟು?
ಬಿಜೆಪಿಗೆ 72.99 ಕೋಟಿ ರೂ.(2012-13), 156.983 ಕೋಟಿ ರೂ.(2013-14), 408.344 ಕೋಟಿ ರೂ.(2014-15), 67.49 ಕೋಟಿ ರೂ.(2015-16) ಒಟ್ಟು 705.81 ಕೋಟಿ ರೂ. ದೇಣಿಗೆ ಬಂದಿದೆ.
Advertisement
ಕಾಂಗ್ರೆಸ್‍ಗೆ 7.545 ಕೋಟಿ ರೂ.(2012-13), 53.516 ಕೋಟಿ ರೂ.(2013-14), 128.11 ಕೋಟಿ ರೂ.(2014-15), 0.26 ಕೋಟಿ ರೂ.(2015-16) ಒಟ್ಟು 50.73 ಕೋಟಿ ರೂ. ದೇಣಿಗೆ ಬಂದಿದೆ.
ಅತಿ ಹೆಚ್ಚು ದೇಣಿಗೆ ನೀಡಿದ ಟ್ರಸ್ಟ್ ಗಳು
ಸತ್ಯ ಎಲೆಕ್ಟೋರಲ್ ಟ್ರಸ್ಟ್ 193.62 ಕೋಟಿ ರೂ., ಜನರಲ್ ಎಲೆಕ್ಟೋರಲ್ ಟ್ರಸ್ಟ್ 70.7 ಕೋಟಿ ರೂ., ಲೋಧಾ ಕನ್‍ಸ್ಟ್ರಕ್ಷನ್ 16 ಕೋಟಿ ರೂ. ದೇಣಿಗೆಯನ್ನು ಬಿಜೆಪಿಗೆ ನೀಡಿದೆ.
ಸತ್ಯ ಎಲೆಕ್ಟೋರಲ್ ಟ್ರಸ್ಟ್ 57.25 ಕೋಟಿ ರೂ.,ಜನರಲ್ ಎಲೆಕ್ಟೋರಲ್ ಟ್ರಸ್ಟ್ 54.1 ಕೋಟಿ ರೂ., ಪ್ರೊಗ್ರೆಸ್ಸಿವ್ ಎಲೆಕ್ಟೋರಲ್ 9.9 ಕೋಟಿ ರೂ. ಹಣವನ್ನು ದೇಣಿಗೆಯಾಗಿ ನೀಡಿದೆ.
ಎನ್‍ಸಿಪಿಗೆ ಸತ್ಯ ಎಲೆಕ್ಟೋರಲ್ ಟ್ರಸ್ಟ್ 10 ಕೋಟಿ ರೂ., ವಿಡಿಯೋಕಾನ್ ಇಂಡಸ್ಟ್ರೀಸ್ ಲಿಮಿಟೆಡ್ 5.25 ಕೋಟಿ ರೂ., ಲೋಧಾ ಡೆವೆಲ್ಲರ್ಸ್ ಪ್ರೈವೆಟ್ ಲಿಮಿಟೆಟ್ 5 ಕೋಟಿ ರೂ. ಹಣವನ್ನು ದೇಣಿಗೆಯಾಗಿ ನೀಡಿದೆ.