ಮಂಗಳೂರು: ಹೊರ ರಾಜ್ಯಗಳಿಂದ ಮಂಗಳೂರಿನ ಬಂದರಿಗೆ ಅನೇಕ ಮೀನು ಲಾರಿಗಳು ಬರುತ್ತಿದ್ದವು. ಈ ವೇಳೆ ಯಾವುದೇ ಸಾಮಾಜಿಕ ಅಂತರ ಇಲ್ಲದೆ ಬಂದರಿನಲ್ಲಿ ಸಾವಿರಾರು ಮಂದಿ ಸೇರುತ್ತಿದ್ದರು. ಈ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ಇದೀಗ ಎಚ್ಚೆತ್ತ ಸಚಿವರು ಮಂಗಳೂರಿಗೆ ಹೊರ ರಾಜ್ಯಗಳಿಂದ ಬರುವ ಮೀನು ಲಾರಿಗಳಿಗೆ ನಿರ್ಬಂಧ ಹೇರಿದ್ದಾರೆ.
ಮೀನುಗಾರಿಕಾ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೊರ ರಾಜ್ಯಗಳಿಂದ ಬರುವ ಮೀನು ಲಾರಿಗಳಿಗೆ ನಿರ್ಬಂಧ ಹೇರಿ ಆದೇಶ ಹೊರಡಿಸಿದ್ದಾರೆ. ಮಂಗಳೂರು ಬಂದರಿಗೆ ಹೊರ ರಾಜ್ಯದ ಮೀನಿನ ಲಾರಿಗಳು ಬರುತ್ತಿದ್ದವು. ಮೀನು ಅನ್ ಲೋಡಿಂಗ್ ವೇಳೆ ಸಾವಿರಾರು ಜನರು ಮುಗಿಬೀಳುತ್ತಿದ್ದರು. ಈ ವೇಳೆ ಮೀನಿನ ವ್ಯಾಪಾರಿಗಳು ಯಾವುದೇ ಸಾಮಾಜಿಕ ಅಂತರ ಇಲ್ಲದೆ ಮುಗಿಬೀಳುತ್ತಿದ್ದರು. ಈ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ಇದೀಗ ಪಬ್ಲಿಕ್ ಟಿವಿ ಸುದ್ದಿಯಿಂದ ಎಚ್ಚೆತ್ತ ದಕ್ಷಿಣ ಕನ್ನಡ ಜಿಲ್ಲಾಡಳಿತ ಹೊರ ರಾಜ್ಯದ ಮೀನಿನ ಲಾರಿಗಳಿಗೆ ಬ್ರೇಕ್ ಹಾಕಿದೆ.
Advertisement
Advertisement
ಕಳೆದ ನಾಲ್ಕು ದಿನಗಳಿಂದ ಜಿಲ್ಲಾಡಳಿತ ಮೀನು ಸರಬರಾಜಿಗೆ ಅನುಮತಿ ನೀಡಿದ್ದು, ಮಂಗಳೂರಿನ ಮೀನು ವ್ಯಾಪಾರಿಗಳು ಮೀನು ಖರೀದಿಗೆ ಮುಗಿಬಿದ್ದಿದ್ದರು. ಯಾವುದೇ ಸಾಮಾಜಿಕ ಅಂತರ ಇಲ್ಲದೆ 2 ಸಾವಿರಕ್ಕೂ ಹೆಚ್ಚು ಮಂದಿ ಬಂದರಿನಲ್ಲಿ ಸೇರುತ್ತಿದ್ದರು. ಅನ್ ಲೋಡಿಂಗ್ ಮತ್ತು ಏಲಂ ಮೂಲಕ ವಿತರಣೆ ಮಾಡುತ್ತಿದ್ದಾರೆ. ಮಾಸ್ಕ್, ಗ್ಲೌಸ್ ಯಾವುದೇ ರಕ್ಷಾ ಕವಚ ಇಲ್ಲದೆ ಕಾರ್ಮಿಕರು ತೊಡಗಿಸಿಕೊಂಡಿದ್ದರು.
Advertisement
ದಿನಕ್ಕೆ ನೂರಕ್ಕೂ ಹೆಚ್ಚು ಹೊರ ರಾಜ್ಯದ ಲಾರಿಗಳು ಬರುತ್ತಿದ್ದು, ಇಲ್ಲಿಂದ ಖರೀದಿಸಿದ ಮೀನುಗಳನ್ನು ಮರುದಿನ ಕರಾವಳಿಯಾದ್ಯಂತ ಸರಬರಾಜು ಮಾಡಲಾಗುತ್ತೆ. ಈ ಮೂಲಕ ಉಚಿತವಾಗಿ ಕೊರೊನಾ ಕೂಡ ಗ್ರಾಮ ಗ್ರಾಮಗಳಿಗೆ ಸರಬರಾಜು ಆಗುವ ಅಪಾಯ ಎದುರಾಗಿತ್ತು. ಹಿಂದೆಲ್ಲಾ ಮಂಗಳೂರಿನ ಮೀನುಗಾರಿಕಾ ಬಂದರಿನಿಂದ ಹೊರ ರಾಜ್ಯಕ್ಕೆ ಮೀನು ಸಾಗಾಟ ಆಗುತ್ತಿತ್ತು. ಈಗ ಕರ್ನಾಟಕದಲ್ಲಿ ಆಳಸಮುದ್ರ ಮೀನುಗಾರಿಕೆ ಇಲ್ಲದ ಕಾರಣ ಆಂಧ್ರ ಪ್ರದೇಶ, ತಮಿಳನಾಡು ಕಡೆಯಿಂದ ಮೀನು ಪೂರೈಕೆಯಾಗುತ್ತಿದೆ.
Advertisement
ಮುಸ್ಲಿಮರಿಗೆ ರಂಜಾನ್ ಆಗಿರುವ ಕಾರಣ ರಾತ್ರಿ ವೇಳೆ ಮೀನು ವಹಿವಾಟು ನಡೆಸಲು ಜಿಲ್ಲಾಡಳಿತ ವಿಶೇಷ ಅನುಮತಿ ನೀಡಿತ್ತು. ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಯಾವುದೇ ವ್ಯವಸ್ಥೆ ಮಾಡದಿರುವುದು ಕೊರೊನಾ ಸೋಂಕು ಹರಡುವ ಸಾಧ್ಯತೆ ಇತ್ತು. ಅಲ್ಲದೇ ಜಿಲ್ಲಾಡಳಿತವೇ ಇಡೀ ಜಿಲ್ಲೆಯ ಜನರಿಗೆ ಕೊರೊನಾ ಸೋಂಕನ್ನು ಹರಡುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದೀಗ ಜಿಲ್ಲಾಡಳಿತ ಹೊರ ರಾಜ್ಯಗಳಿಂದ ಬರುವ ಮೀರು ಲಾರಿಗಳಿಗೆ ಬ್ರೇಕ್ ಹಾಕಿದೆ.