ನವದೆಹಲಿ: ಅನಿವಾರ್ಯ ಮತ್ತು ತುರ್ತು ಅವಶ್ಯಕತೆ ಅಲ್ಲದ ವಸ್ತುಗಳ ಮಾರಾಟ ಮಾಡದಂತೆ ಫ್ಲಿಪ್ ಕಾರ್ಟ್, ಅಮೇಜಾನ್, ಪೇಟಿಎಂ ಮಾಲ್ ಸೇರಿದಂತೆ ಎಲ್ಲ ಇ-ಕಾರ್ಮಸ್ ಸಂಸ್ಥೆಗಳಿಗೆ ಕೇಂದ್ರ ಗೃಹ ಇಲಾಖೆ ಆದೇಶ ನೀಡಿದೆ.
ಈ ಸಂಬಂಧ ಇಂದು ಆದೇಶ ಹೊರಡಿಸಿರುವ ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಅಜಯ್ ಭಲ್ಲಾ, ತುರ್ತು ವಸ್ತುಗಳನ್ನು ಹೊರತು ಇನ್ಯಾವುದೇ ವಸ್ತುಗಳ ಮಾರಾಟ ನಿಷೇಧಿಸಿದೆ ಎಂದು ಆದೇಶಿಸಿದ್ದಾರೆ. ತುರ್ತು ಅವಶ್ಯಕ ವಸ್ತುಗಳ ಮಾರಾಟ ವೇಳೆ ಲಾಕ್‍ಡೌನ್ ನಿಯಮಗಳನ್ನು ಪಾಲಿಸಬೇಕು. ವಸ್ತುಗಳ ಸಾಗಾಟಕ್ಕೆ ಬಳಸುವ ವಾಹನಗಳಿಗೆ ಪರವಾನಿಗೆ ಪಡೆಯಬೇಕು ಎಂದು ಷರತ್ತುಗಳನ್ನು ವಿಧಿಸಿದೆ.
Advertisement
Advertisement
ಲಾಕ್‍ಡೌನ್ ಸಂಬಂಧ ಏಪ್ರಿಲ್ 20 ಬಳಿಕ ಇ-ಕಾರ್ಮಸ್ ಸೇವೆಗಳನ್ನು ಆರಂಭಿಸಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿತ್ತು. ಪರಿಷ್ಕೃತ ಮಾರ್ಗಸೂಚಿಗಳಲ್ಲಿ ಇ-ಕಾರ್ಮಸ್ ಗೆ ವಿನಾಯಿತಿ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಇಲೆಕ್ಟ್ರಾನಿಕ್ ಉತ್ಪನ್ನಗಳು ಸೇರಿದಂತೆ ಎಲ್ಲ ಬಗೆಯ ವಸ್ತುಗಳ ಮಾರಾಟಕ್ಕೆ ಇ-ಕಾರ್ಮಸ್ ಸಂಸ್ಥೆಗಳು ಸಿದ್ಧತೆ ಆರಂಭಿಸಿದ್ದವು.
Advertisement
ದೆಹಲಿಯ ಪಿಜ್ಜಾ ಡೆಲಿವರಿ ಬಾಯ್‍ನಲ್ಲಿ ಸೋಂಕು ಕಂಡ ಬಂದ ಬೆನ್ನಲೆ ಇ-ಕಾಮರ್ಸ್ ಗೆ ವಿನಾಯಿತಿ ನೀಡಿದ್ದಕ್ಕೆ ಹಲವು ವಿರೋಧಗಳು ಕೇಳಿ ಬಂದಿತ್ತು. ಇದರಿಂದ ಎಚ್ಚೇತ್ತುಕೊಂಡ ಕೇಂದ್ರ ಸರ್ಕಾರ ನಿಯಮ ಬದಲಿಸುವ ಮೂಲಕ ಯೂಟರ್ನ್ ಹೊಡೆದಿದೆ.
Advertisement