ಬೆಂಗಳೂರು: ದಿನೇ ದಿನೇ ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸರ್ಕಾರ ಎಷ್ಟೇ ಕಠಿಣ ನಿಮಯಗಳನ್ನು ಜಾರಿ ಮಾಡಿದ್ರೂ ಜನರು ಮಾತ್ರ ಸುಖಾಸುಮ್ಮನೆ ಓಡಾಡಲು ಶುರು ಮಾಡಿದ್ದಾರೆ. ಇದೀಗ ಫುಡ್ ಡೆಲಿವರಿ ಬಾಯ್ಸ್‌ಗೆ ಟಫ್ ರೂಲ್ಸ್ ಜಾರಿಯಾಗಲಿದೆ. ಹೀಗಾಗಿ ಆನ್‍ಲೈನ್ ಫುಡ್ ಆರ್ಡರ್ ಮಾಡುವ ಮುನ್ನ ಈ ಸ್ಟೋರಿ ಓದಿ.
ಸರ್ಕಾರದಿಂದ ಫುಡ್ ಡೆಲಿವರಿ ಬಾಯ್ಸ್‌ಗೆ ಕಠಿಣ ನಿಮಯ ಜಾರಿಗೆ ಬಂದಿದೆ. ಸರ್ಕಾರ ಜಾರಿ ಮಾಡಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಸರ್ಕಾರ ಸೂಚನೆ ನೀಡಿದೆ. ಫುಡ್ ಡೆಲಿವರಿ ಬಾಯ್ಸ್‌ಗೆ ಏಳು ನಿಯಮಗಳನ್ನು ಪಾಲಿಸಬೇಕೆಂದು ಸೂಚಿಸಿದೆ. ಒಂದು ವೇಳೆ ಫುಡ್ ಡೆಲಿವರಿ ಬಾಯ್ಸ್ ಈ ನಿಯಮಗಳನ್ನು ಪಾಲಿಸದಿದ್ದರೆ ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ.
Advertisement
Advertisement
ಏಳು ಕಠಿಣ ನಿಮಯ:
1. ಫೇಸ್ ಮಾಸ್ಕ್ ಮತ್ತು ಫೇಸ್ ಸೀಲ್ಡ್ ಕಡ್ಡಾಯವಾಗಿ ಬಳಸಬೇಕು.
2. ಫುಡ್ ಡೆಲಿವರಿಗೆ ಮುನ್ನ ಮತ್ತು ನಂತರ ಕೈಗಳನ್ನ ಸ್ಯಾನಿಟೈಸ್ ಮಾಡಬೇಕು.
3. ಫುಡ್ ಡೆಲಿವರಿ ಕೊಡುವಾಗ 3 ರಿಂದ 6 ಅಡಿ ಅಂತರ ಪಾಲಿಸಬೇಕು.
4. ಕಾಲಿಂಗ್ ಬೆಲ್, ಬಾಗಿಲು, ಗೇಟ್ ಮುಟ್ಟಬಾರದು. ಮುಟ್ಟಿದರೆ ತಕ್ಷಣ ಕೈಗಳಿಗೆ ಸ್ಯಾನಿಟೈಸ್ ಮಾಡಬೇಕು.
5. ಯುಪಿಐ ಅಥವಾ ಆನ್‍ಲೈನ್ ಮೂಲಕ ಹಣ ಪಡೆಯುವುದು ಸೂಕ್ತ.
6. ಹಣ ಪಡೆದರೆ ತಕ್ಷಣ ಕೈಗಳಿಗೆ ಸ್ಯಾನಿಟೈಸ್ ಮಾಡಬೇಕು.
7. ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಮುಟ್ಟಿದರು ಕೈಗಳಿಗೆ ಸ್ಯಾನಿಟೈಸ್ ಮಾಡಬೇಕು.