ಮಡಿಕೇರಿ: ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಭಾಗವಹಿಸುವ ದುಬಾರೆ ಸಾಕಾನೆ ಶಿಬಿರಕ್ಕೂ ಲಾಕ್‍ಡೌನ್ ಎಫೆಕ್ಟ್ ತಟ್ಟಿದೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ದುಬಾರೆ ಸಾಕಾನೆ ಶಿಬಿರದಲ್ಲಿ ಆನೆಗಳ ಪರಿಸ್ಥಿತಿ ಸಾಕಾನೆಗಳ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತೆ ಆಗಿದೆ. ಶಿಬಿರದಲ್ಲಿರುವ ಆನೆಗಳಿಗೆ ಹೊಟ್ಟೆ ತುಂಬಾ ಆಹಾರ ಬಳಲುತ್ತಿವೆ. ಲಾಕ್‍ಡೌನ್ ಹಿನ್ನೆಲೆ ಆಹಾರ ಪೂರೈಕೆಯಾಗಿಲ್ಲ. ಆನೆಗಳಿಗೆ ಪ್ರತಿದಿನ ಆಹಾರ ನೀಡುತ್ತಿದ್ದ ಭತ್ತದ ಹುಲ್ಲು, ಬೆಲ್ಲದ ಕೊರತೆ ಉಂಟಾಗಿದೆ. ಮಾವುತರು, ಕಾವಡಿಗರಿಗೂ ಅಗತ್ಯ ವಸ್ತುಗಳ ಕೊರತೆಯಾಗಿದೆ.
Advertisement
Advertisement
ಅಷ್ಟೇ ಅಲ್ಲದೇ ಸಾಕಾನೆಗಳನ್ನೆ ಅವಲಂಬಿಸಿಕೊಂಡು ಜೀವನ ನಡೆಸುತ್ತಿರುವ ಮಾವುತ, ಕಾವಡಿಗಳ ಕುಟುಂಬಕ್ಕೂ ಪಡಿತರ ಅಂಗಡಿಯಿಂದ ಅಕ್ಕಿ, ಗೋಧಿಗಳ ಪೂರೈಕೆ, ತರಕಾರಿ ಪೂರೈಕೆಯೂ ಇಲ್ಲವಾಗಿದೆ. ಇದರಿಂದ 90 ಕುಟುಂಬಗಳು ಪರದಾಟ ನಡೆಸುತ್ತಿವೆ. ಒಂದು ಹೊತ್ತು ಊಟ ಮಾಡಿ ಎರಡು ಹೊತ್ತು ಉಪವಾಸ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ.
Advertisement
ತೋಟಗಳಲ್ಲಿ ಹೋಗಿ ಕೆಲಸ ಮಾಡುತ್ತೇವೆ ಅಂದರೂ ಇದೀಗಾ ಲಾಕ್‍ಡೌನ್ ಹಿನ್ನೆಲೆ ಯಾರು ಕೆಲಸ ಕೋಡುತ್ತಿಲ್ಲ. ಜೀವನ ನಡೆಸುವುದೇ ಕಷ್ಟವಾಗಿದೆ ಎಂದು ಮಾವುತ, ಕಾವಡಿಗಳ ಕುಟುಂಬಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾವೆ.