ಚಂಡೀಗಢ: ಆಹಾರ ಸಿಗದೆ ಕಂಗೆಟ್ಟು ಮಹಿಳೆಯೊಬ್ಬರು ಪತಿ ಹಾಗೂ ಮಗುವಿನೊಂದಿಗೆ ಆತ್ಮಹತ್ಯೆ ಬೆದರಿಕೆ ಹಾಕಿದ್ದರಿಂದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಆಹಾರ ನೀಡಿದ ಪ್ರಸಂಗ ಚಂಡೀಗಢದಲ್ಲಿ ನಡೆಸಿದೆ.
ಕೊರೊನಾ ವೈರಸ್‍ನಿಂದಾಗಿ ದೇಶಾದ್ಯಂತ ಮಾರ್ಚ್ 14ರವರೆಗೆ ಲಾಕ್‍ಡೌನ್ ಘೋಷಿಸಲಾಗಿದೆ. ಇದರಿಂದಾಗಿ ದಿನಗೂಲಿ ಕಾರ್ಮಿಕ ಪರಿಸ್ಥಿರಿ ಚಿಂತಾಜನಕವಾಗಿದೆ. ಕೆಲಸವಿಲ್ಲದೆ ಕಂಗೆಟ್ಟು ಹೋಗಿದ್ದಾರೆ.
ಚಂಡೀಗಢದ ನಿವಾಸಿ ದಿನಗೂಲಿ ಕಾರ್ಮಿಕ ಮಹಿಳೆಯೊಬ್ಬರು ಆಹಾರ ಮತ್ತು ಔಷಧಿ ಖರೀದಿಸಲು ಯಾವುದೇ ಮಾರ್ಗವಿಲ್ಲದೆ ಶನಿವಾರ ಕಂಗೆಟ್ಟಿದ್ದರು. ಇದರಿಂದಾಗಿ ಪೊಲೀಸರಿಗೆ ಫೋನ್ ಮಾಡಿ, ನಮಗೆ ತಿನ್ನಲು ಆಹಾರವಿಲ್ಲ. ಅನಾರೋಗ್ಯದಿಂದ ಬಳಲುತ್ತಿರುವ ಮಗುವಿಗೆ ಔಷಧಿ ಖರೀದಿಸಲು ಸಾಧ್ಯವಾಗುತ್ತಿಲ್ಲ. ನೀವು ಸಹಾಯಕ್ಕೆ ಬರದಿದ್ದರೇ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಕಣ್ಣೀರಿಟ್ಟಿದ್ದರು.
ಮಹಿಳೆ ಕರೆಯ ಬಳಿಕ ಚಂಡೀಗಢದ ಡೆಪ್ಯೂಟಿ ಪೊಲೀಸ್ ವರಿಷ್ಠಾಧಿಕಾರಿ ದಿಲ್ಶರ್ ಸಿಂಗ್, ಮಹಿಳೆ ವಾಸವಿರುವ ಪ್ರದೇಶದ ವ್ಯಾಪ್ತಿಯ ಪೊಲೀಸ್ ಠಾಣೆ ಅಧಿಕಾರಿಯೊಂದಿಗೆ ಮಾತನಾಡಿದ್ದರು. ಜೊತೆಗೆ ಮಹಿಳೆಯ ನಿವಾಸಕ್ಕೆ ಧಾವಿಸಿ ಅವರಿಗೆ ಆಹಾರ ಮತ್ತು ಸ್ವಲ್ಪ ಹಣವನ್ನು ನೀಡಿದ್ದಾರೆ ಎಂದು ವರದಿಯಾಗಿದೆ.