ಬೆಂಗಳೂರು: 2013ರಲ್ಲಿ ವ್ಯಕ್ತಿಯೊಬ್ಬ ತನ್ನ ಟ್ವಿಟ್ಟರಿನಲ್ಲಿ “ಕೊರೊನಾ ವೈರಸ್ ಬರುತ್ತಿದೆ” ಎಂದು ಟ್ವೀಟ್ ಮಾಡಿದ್ದನು. ಇದೀಗ ಈ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇದನ್ನು ನೋಡಿದ ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ.
ಮಾರ್ಕೊ ಅಕಾರ್ಟೆಸ್ ಎಂಬ ಟ್ವಿಟ್ಟರ್ ಬಳಕೆದಾರ ಏಳು ವರ್ಷಗಳ ಹಿಂದೆಯೇ ಕೊರೊನಾ ವೈರಸ್ ಬಗ್ಗೆ ಮುನ್ಸೂಚನೆ ನೀಡಿದ್ದನು. 2013, ಜೂನ್ 3ರಂದು ಮಾರ್ಕೊ ತನ್ನ ಟ್ವಿಟ್ಟರಿನಲ್ಲಿ, “ಕೊರೊನಾ ವೈರಸ್ ಬರುತ್ತಿದೆ” ಎಂದು ಟ್ವೀಟ್ ಮಾಡಿದ್ದನು. ಇದೀಗ ಈ ಟ್ವೀಟ್ ವೈರಲ್ ಆಗುತ್ತಿದ್ದು, ಏಳು ವರ್ಷಗಳ ಹಿಂದೆಯೇ ವ್ಯಕ್ತಿ ಭವಿಷ್ಯವಾಣಿ ಬಗ್ಗೆ ಟ್ವೀಟ್ ಮಾಡಿದ್ದನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಸದ್ಯ ಮಾರ್ಕೊ ಮಾಡಿದ್ದ ಟ್ವೀಟ್ ಅನ್ನು ಇದುವರೆಗೂ 1 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.
Corona virus….its coming
— Marco (@Marco_Acortes) June 3, 2013
ಈ ಟ್ವೀಟ್‍ಗೆ ಹಲವು ಮಂದಿ ರೀ-ಟ್ವೀಟ್ ಮಾಡಿದ್ದಾರೆ. ಕೆಲವರು, “ದಿನಾಂಕವನ್ನು ಬದಲಿಸುವ ಸಲುವಾಗಿ ನೀನು ಟ್ವಿಟ್ಟರ್ ಹ್ಯಾಕ್ ಮಾಡಿದ್ದೀಯಾ ಅಲ್ಲವೇ?” ಎಂದು ರೀ-ಟ್ವೀಟ್ ಮಾಡುವ ಮೂಲಕ ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು, “ನನ್ನ ಪ್ರಕಾರ ಈ ವೈರಸ್ 7 ವರ್ಷಗಳನ್ನು ತೆಗೆದುಕೊಳ್ಳುತ್ತದೆ ಎಂದು ನಮಗೆ ತಿಳಿದಿದ್ದರೆ ಯಾರು ನಿಮ್ಮ ಮಾತನ್ನು ಕೇಳುತ್ತಿದ್ದರು” ಎಂದು ರೀ-ಟ್ವೀಟ್ ಮಾಡಿದ್ದಾರೆ.
1981ರಲ್ಲಿ ಡೀನ್ ಕೂಂಟ್ಜ್ ಅವರು ಬರೆದ ‘ದಿ ಐಸ್ ಆಫ್ ಡಾರ್ಕ್ನೆಸ್’ ಕಾದಂಬರಿಯಲ್ಲಿ ವುಹಾನ್-400 ಎಂದು ವೈರಸ್ ಬಗ್ಗೆ ಉಲ್ಲೇಖಿಸಿದೆ. ಕೆಲವು ದಿನಗಳ ಹಿಂದೆ ಈ ಪುಸ್ತಕ ಹಾಗೂ ಪುಸ್ತಕದಲ್ಲಿ ಬರೆದಿದ್ದ ವುಹಾನ್-400 ಬಗ್ಗೆ ಸಾಲುಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು.