ಸಿಡ್ನಿ: ಶತಾಯ ಗತಾಯ ಈ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯನ್ನು ನಡೆಸಲೇಬೇಕು ಎಂದು ಬಿಸಿಸಿಐ ಹಾಗೂ ಫ್ರಾಂಚೈಸಿಗಳು ಪಣತೊಟ್ಟಿದೆ. ಆದರೆ ಒಂದಲ್ಲ ಒಂದು ವಿಘ್ನಗಳು ಎದುರಾಗುತ್ತಲೇ ಇವೆ. ಈಗ ಆಸ್ಟ್ರೇಲಿಯಾದ 17 ಆಟಗಾರರು ಐಪಿಎಲ್‍ನಲ್ಲಿ ಭಾಗವಹಿಸದಿರುವ ಸಾಧ್ಯತೆ ಹೆಚ್ಚಾಗಿದೆ.
ಕೊರೊನಾ ವೈರಸ್ ಭೀತಿಯ ಪರಿಸ್ಥಿತಿಯಲ್ಲಿ ಪ್ರಯಾಣ ಮಾಡುವುದು ಸರಿಯಲ್ಲ ಎಂದು ಆಸ್ಟ್ರೇಲಿಯಾ ಸರ್ಕಾರ ಆಟಗಾರರಿಗೆ ಸ್ಪಷ್ಟಪಡಿಸಿದೆ. ಇದರ ಹೊರತಾಗಿಯೂ ಯಾರಾದರೂ ವಿದೇಶಕ್ಕೆ ಪ್ರಯಾಣಿಸಿದರೆ ಅದು ಸರ್ಕಾರದ ಜವಾಬ್ದಾರಿಯಲ್ಲ ಎಂದು ಪ್ರಧಾನಿ ಸ್ಕಾಟ್ ಮಾರಿಸನ್ ಆಸ್ಟ್ರೇಲಿಯಾದ ನಾಗರಿಕರಿಗೆ ಸೂಚನೆ ನೀಡಿದ್ದಾರೆ. ಮುಂದಿನ ತಿಂಗಳು ಸಹ ಈ ಸೂಚನೆ ಜಾರಿಯಲ್ಲಿರುತ್ತದೆ ಎಂದು ಸರ್ಕಾರ ಹೇಳಿದೆ. ಹೀಗಾಗಿ ಐಪಿಎಲ್‍ನಲ್ಲಿ ಭಾಗವಹಿಸುವ ಆಸ್ಟ್ರೇಲಿಯಾದ 17 ಆಟಗಾರರು ಭಾರತಕ್ಕೆ ಬರುವ ಶಂಕೆ ವ್ಯಕ್ತವಾಗಿದೆ.
Advertisement
Advertisement
ಇದಕ್ಕೂ ಮೊದಲು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಆಟಗಾರರಿಗೆ ಐಪಿಎಲ್‍ಗಾಗಿ ನಿರಾಕ್ಷೇಪಣಾ ಪತ್ರ (ಎನ್‍ಒಸಿ) ನೀಡಿತ್ತು. ಆದರೆ ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ ಸರ್ಕಾರದ ಸೂಚನೆ ಪಾಲಿಸುವ ಸಾಧ್ಯತೆಗಳಿದೆ. ಹೀಗಾಗಿ ಆಟಗಾರರು ಐಪಿಎಲ್ ಆಡಲು ಬಯಸಿ ಯಾವುದೇ ಅಹಿತಕರ ಘಟನೆ ನಡೆದರೆ ಸರ್ಕಾರ ಜವಾಬ್ದಾರಿಯಲ್ಲ. ಅಷ್ಟೇ ಅಲ್ಲದೆ ಆಟಗಾರರು ವಿಮೆಯ ಲಾಭ ಸಿಗುವುದಿಲ್ಲ.
Advertisement
ಪ್ಯಾಟ್ ಕಮ್ಮಿನ್ಸ್‌ಗೆ ಅತಿ ಹೆಚ್ಚು ಸಂಭಾವನೆ:
ಐಪಿಎಲ್‍ನ 13ನೇ ಆವೃತ್ತಿಯಲ್ಲಿ 8 ತಂಡಗಳು ಒಟ್ಟು 64 ವಿದೇಶಿ ಆಟಗಾರರನ್ನು ಹೊಂದಿವೆ. ಈ ಪೈಕಿ ಆಸ್ಟ್ರೇಲಿಯಾ ಗರಿಷ್ಠ 17 ಆಟಗಾರರೇ ಇದ್ದಾರೆ. ಐಪಿಎಲ್‍ನ 13ನೇ ಆವೃತ್ತಿಯ ಹರಾಜಿನಲ್ಲಿ ಆಸ್ಟ್ರೇಲಿಯಾದ ಆಲ್‍ರೌಂಡರ್ ಪ್ಯಾಟ್ ಕಮ್ಮಿನ್ಸ್ ಅವರನ್ನು 15.50 ಕೋಟಿ ರೂ.ಗೆ ಅತ್ಯಂತ ದುಬಾರಿಗೆ ಖರೀದಿಯಾಗಿದ್ದಾರೆ. ಈ ಟೂರ್ನಿಯ ಇತಿಹಾಸದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ವಿದೇಶಿ ಆಟಗಾರ ಎಂಬ ಹೆಗ್ಗಳಿಗೆ ಪ್ಯಾಟ್ ಕಮ್ಮಿನ್ಸ್ ಪಾತ್ರರಾಗಿದ್ದು, ಅವರು ಕೋಲ್ಕತ್ತಾ ಪರ ಆಡಲಿದ್ದಾರೆ.
Advertisement
ಯಾರಿಗೆ ಎಷ್ಟು ಸಂಭಾವನೆ?
ಪ್ಯಾಟ್ ಕಮ್ಮಿನ್ಸ್ – ಕೋಲ್ಕತಾ – 15.50 ಕೋಟಿ ರೂ.
ಸ್ಟೀವ್ ಸ್ಮಿತ್ – ರಾಜಸ್ಥಾನ – 12.50 ಕೋಟಿ ರೂ.
ಗ್ಲೆನ್ ಮ್ಯಾಕ್ಸ್‌ವೆಲ್ – ಪಂಜಾಬ್ – 10.75 ಕೋಟಿ ರೂ.
ನಾಥನ್ ಕಲ್ಪರ್ ನೈಲ್ – ಮುಂಬೈ – 8 ಕೋಟಿ ರೂ.
ಮಾರ್ಕಸ್ ಸ್ಟೋನಿಸ್ – ದೆಹಲಿ – 4.80 ಕೋಟಿ ರೂ.
ಆರನ್ ಫಿಂಚ್ – ಬೆಂಗಳೂರು – 4.40 ಕೋಟಿ ರೂ.
ಕೆನ್ ರಿಚಡ್ರ್ಸನ್ – ಬೆಂಗಳೂರು – 4 ಕೋಟಿ ರೂ.
ಅಲೆಕ್ಸ್ ಕ್ಯಾರಿ – ದೆಹಲಿ – 2.40 ಕೋಟಿ ರೂ.
ಕ್ರಿಸ್ ಲಿನ್ – ಮುಂಬೈ – 2 ಕೋಟಿ ರೂ.
ಮಿಚೆಲ್ ಮಾರ್ಷ್ – ಹೈದರಾಬಾದ್ – 2 ಕೋಟಿ ರೂ.
ಜೋಶ್ ಹೇಜಲ್‍ವುಡ್ – ಚೆನ್ನೈ – 2 ಕೋಟಿ ರೂ.
ಆಂಡ್ರ್ಯೂ ಟೈ – ರಾಜಸ್ಥಾನ – 1 ಕೋಟಿ ರೂ.
ಕ್ರಿಸ್ ಗ್ರೀನ್ – ಕೋಲ್ಕತಾ – 20 ಲಕ್ಷ ರೂ.
ಜೋಶುವಾ ಫಿಲಿಪ್ – ಬೆಂಗಳೂರು – 20 ಲಕ್ಷ ರೂ.
ಡೇವಿಡ್ ವಾರ್ನರ್ – ಹೈದರಾಬಾದ್ – 12.50 ಕೋಟಿ ರೂ.
ಬಿಲ್ಲಿ ಸ್ಟಾನ್ಲೇಕ್ – ಹೈದರಾಬಾದ್ – 50 ಲಕ್ಷ ರೂ.
ಶೇನ್ ವ್ಯಾಟ್ಸನ್ – ಚೆನ್ನೈ – 4 ಕೋಟಿ ರೂ.
ವೀಸಾ ಮೇಲೆ ನಿರ್ಬಂಧ:
ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚಾಗುತ್ತಿದ್ದಂತೆ ಕೇಂದ್ರ ಸರ್ಕಾರವು ಕಳೆದ ವಾರ ವೀಸಾಗಳ ಮೇಲೆ ನಿರ್ಬಂಧಗಳನ್ನು ವಿಧಿಸಿತ್ತು. ಈ ಮೂಲಕ ಭಾರತಕ್ಕೆ ಬರುವ ವಿದೇಶಿ ಪ್ರಜೆಗಳ ವೀಸಾವನ್ನು ಮಾರ್ಚ್ 13ರಿಂದ ಏಪ್ರಿಲ್ 15ರವರೆಗೆ ರದ್ದುಗೊಳಿಸಲಾಗಿದೆ. ರಾಜತಾಂತ್ರಿಕ, ಅಧಿಕೃತ, ಯುಎನ್ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು, ಯೋಜನೆ ಮತ್ತು ಉದ್ಯೋಗ ವೀಸಾಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ. ಐಪಿಎಲ್‍ಗೆ ಬರುವ ವಿದೇಶಿ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗೆ ಬಿಸಿನೆಸ್ ವೀಸಾ ನೀಡಲಾಗುತ್ತದೆ. ಹೀಗಾಗಿ ಅವರಿಗೆ ಏಪ್ರಿಲ್ 15ರವರೆಗೂ ಭಾರತಕ್ಕೆ ಬರಲು ಅವಕಾಶವಿಲ್ಲ.