ಬೆಂಗಳೂರು: ದೇಶಾದ್ಯಂತ ಲಾಕ್‍ಡೌನ್ ಎಫೆಕ್ಟ್ ಗೆ ಅದೆಷ್ಟೋ ಜನರ ಬದುಕು ಬೀದಿಗೆ ಬಿದ್ದಿದೆ. ಕೆಲಸ ಅಂತ ವಲಸೆ ಬಂದವರು ಇದೀಗ ಕೆಲಸ, ಆಶ್ರಯ ಇಲ್ಲದೆ ಪರದಾಡುತ್ತಿದ್ದಾರೆ. ಹೀಗೆ ರಸ್ತೆಯಲ್ಲೇ ವಾಸಮಾಡ್ತಿದ್ದ ಗರ್ಭಿಣಿಗೆ ರಾಜ್ಯ ಸರ್ಕಾರ ನೆರವಾಗಿದೆ.
Advertisement
ಹೌದು. ಕೊರೊನಾ ಭೀತಿಯಿಂದ ಇಡೀ ದೇಶವೇ ಲಾಕ್ ಡೌನ್ ಆಗಿರೋ ಸಂದರ್ಭದಲ್ಲಿ ತನ್ನ ಮಗು ಜೋಪಾನ ಮಾಡಬೇಕು ಅಂತ ಕನಸುಗಳನ್ನ ಹೊತ್ತಿದ್ದು, ನಿಲ್ಲೋಕೆ ನೆಲೆಯಿಲ್ಲದೆ ಮಹಿಳೆ ನಡುರಸ್ತೆಯಲ್ಲೇ ದಿನದೂಡುತ್ತಿದ್ದರು. ಜಾರ್ಖಂಡ್ ಮೂಲದ ಈ ದಂಪತಿಗೆ ಕೆಲಸ ಕೊಡಿಸೋದಾಗಿ ಆಕೆಯ ಸೋದರ ಬೆಂಗಳೂರಿಗೆ ಕರೆಸಿಕೊಂಡಿದ್ದನಂತೆ. ಆದರೆ ಮಾರ್ಚ್ 22, 24ರಲ್ಲಿ ನಡೆದ ಕಫ್ರ್ಯೂ ನಿಂದಾಗಿ ಕೆಲಸಾನೂ ಇಲ್ಲದೆ, ಊರಿಗೂ ಹೋಗೋಕೆ ಆಗದೆ ಪರದಾಡ್ತಿದ್ದಾರೆ.
Advertisement
Advertisement
ವಾಸ ಮಾಡಲು ದಂಪತಿಯ ಪರದಾಟ ನೋಡಲಾರದೆ ಅಲ್ಲೇ ಇದ್ದ ಸ್ಥಳೀಯರೊಬ್ಬರು ಲಾಕ್‍ಡೌನ್ ಮುಗಿಯೋವರೆಗೂ ಮನೆಯಲ್ಲೇ ಇರುವಂತೆ ಜಾಗ ನೀಡಿದ್ರಂತೆ. ಆಮೇಲೆ ದಾರಿ ಹೋಕರೊಬ್ಬರು ಇವರ ಸ್ಥಿತಿಯನ್ನ ಕಾರ್ಮಿಕ ಇಲಾಖೆಯ ದಾಸೋಹ ಸಹಾಯವಾಣಿ ಮೂಲಕ ಸಂಪರ್ಕಿಸಿ ಸಮಸ್ಯೆ ಹೇಳಿದ್ದಾರೆ. ತಕ್ಷಣವೇ ವಾರ್ತಾ ಇಲಾಖೆ ಟ್ವೀಟ್ ತಂಡ ಸ್ವಯಂಸೇವಕರ ನೆರವು ಪಡೆದು ದಂಪತಿಯನ್ನ ಸಂಪರ್ಕಿಸಲು ಯತ್ನಿಸಿದೆ. ಆದರೆ ಮೇಲಿಂದ ಮೇಲೆ ಫೋನ್ ಕರೆ ಬಂದಿದ್ದಕ್ಕೆ ಹೆದರಿದ ದಂಪತಿ ಫೋನ್ ಸ್ವಿಚ್ ಆಫ್ ಮಾಡಿ ಅತ್ತಿಬೆಲೆ ವ್ಯಾಪ್ತಿಯ ಹಳೆ ಮನೆಯೊಂದರಲ್ಲಿ ಅಡಗಿ ಕುಳಿತಿದ್ದಾರೆ. ಆದರೂ ಕೊನೆಗೆ ಪೊಲೀಸರ ನೆರವಿನೊಂದಿಗೆ ದಂಪತಿಯನ್ನ ಪತ್ತೆ ಹಚ್ಚಿದ್ದಾರೆ.
Advertisement
ದಂಪತಿ ಪತ್ತೆ ಹಚ್ಚಿದ ಕೂಡಲೇ ಕಾರ್ಮಿಕ ರಾಜ್ಯ ವಿಮಾ ಇಲಾಖೆಯ ಆಸ್ಪತ್ರೆಯ ವೈದ್ಯರು ಗರ್ಭಿಣಿ ಆರೋಗ್ಯ ತಪಾಸಣೆ ಮಾಡಿದ್ದಾರೆ. ಸದ್ಯ ಲಾಕ್‍ಡೌನ್ ಮುಗಿಯೋವರೆಗೂ ರಾಜ್ಯ ಸರ್ಕಾರದ ಅತಿಥಿ ಗೃಹದಲ್ಲಿ ಭೋಜನ ಹಾಗೂ ಉಳಿದುಕೊಳ್ಳೋಕೆ ವ್ಯವಸ್ಥೆ ಮಾಡಲಾಗಿದೆ.