ಪಾಟ್ನಾ: ಕೊರೊನಾ ವೈರಸ್‍ನಿಂದಾಗಿ ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದೆ. ಇಂತಹ ಪರಿಸ್ಥಿತಿಯಿಂದಾಗಿ ಜೋಡಿಯೊಂದು ಈ ಮೊದಲೇ ನಿಗದಿಯಾದ ದಿನಾಂಕದಂದೇ ವಿಡಿಯೋ ಕಾನ್ಫರೆನ್ಸ್ ಮೂಲಕ ಮದುವೆಯಾಗಿದ್ದಾರೆ.
ಮದುಮಗ ಉತ್ತರ ಪ್ರದೇಶದ ಸಾಹಿಬಾಬಾದ್‍ನಲ್ಲಿದ್ದರೆ, ಮದುಮಗಳು ಬಿಹಾರದ ಪಾಟ್ನಾದಲ್ಲಿದ್ದರು. ಹೀಗಾಗಿ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಖಾಜಿ ಮೊದಲು ಯುವಕನನ್ನು ಮದುವೆಯಾಗಲು ಹುಡುಗಿಯಿಂದ ಅನುಮತಿ ಪಡೆದರು. ನಂತರ ಮದುವೆಯನ್ನು ನೆರವೇರಿಸಿದರು. ಇದನ್ನೂ ಓದಿ: ಹೆಣ್ಣು ಶಿಶುವಿಗೆ ಕೊರೊನಾ ಎಂದ ಹೆಸರಿಟ್ಟ ಚಿಕ್ಕಪ್ಪ
#WATCH Bihar: 'Nikah' of a couple was performed through video conferencing in Patna yesterday, amid lockdown in the state due to #COVID19. pic.twitter.com/WtQaiZCuyH
— ANI (@ANI) March 24, 2020
ಈ ವಿವಾಹದ 30 ಸೆಕೆಂಡ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಇದರಲ್ಲಿ ವಧುವಿನ ಕುಟುಂಬಸ್ಥರು ಟಿವಿ ಮುಂದೆ ಒಟ್ಟುಗೂಡಿ ನಿಂತಿರುತ್ತಾರೆ. ಖಾಜಿ ಕೇಳಿದಾಗ ಯುವಕ ಹಾಗೂ ಯುವತಿ ಇಬ್ಬರೂ ಮದುವೆಯನ್ನು ಒಪ್ಪಿಕೊಂಡರು. ಹೀಗಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕವೇ ಮದುವೆ ಮಾಡಿಸಿದರು. ಇದನ್ನೂ ಓದಿ: ಕೊರೊನಾಗೆ ತಮಿಳುನಾಡಿನಲ್ಲಿ ಮೊದಲ ಬಲಿ, ದೇಶದಲ್ಲಿ ಸಾವಿನ ಸಂಖ್ಯೆ 11ಕ್ಕೆ ಏರಿಕೆ
ಏಪ್ರಿಲ್ 14ರವರೆಗೆ ಸಂಪೂರ್ಣ ಲಾಕ್‍ಡೌನ್:
ಮಹಾಮಾರಿ ಕೊರೊನಾ ವೈರಸ್‍ನಿಂದಾಗ ಇಡೀ ದೇಶವನ್ನು ಏಪ್ರಿಲ್ 14ರವರೆಗೆ ಲಾಕ್‍ಡೌನ್ ಮಾಡಲಾಗಿದೆ. ಹೀಗಾಗಿ ಮದುವೆ, ಸಭೆ ಸಮಾರಂಭ ಸೇರಿದಂತೆ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳಿಗೆ ಜನರನ್ನು ಸೇರಿಸುವುದರ ಮೇಲೆ ನಿಷೇಧ ಹೇರಲಾಗಿದೆ. ನವ ಜೋಡಿಯ ದಂಪತಿಯ ಕುಟುಂಬಗಳು ಡಿಜಿಟಲ್ ಇಂಡಿಯಾವನ್ನು ಆಯ್ಕೆಮಾಡಿಕೊಂಡು ಕೊರೊನಾ ವಿರುದ್ಧ ಹೋರಾಡುವ ಹೊಸ ಮಾರ್ಗವನ್ನು ಸೂಚಿಸಿವೆ. ಅಷ್ಟೇ ಅಲ್ಲದೆ ಡಿಜಿಟಲ್ ಪ್ಲಾಟ್‍ಫಾರ್ಮ್ ಮೂಲಕ ಸಮಯಕ್ಕೆ ಸರಿಯಾಗಿ ಕೆಲಸವನ್ನು ಮಾಡಬಹುದು ಎಂದು ತಿಳಿಸಿಕೊಟ್ಟಿದೆ ಎಂಬ ಅಭಿಪ್ರಾಯ ನೆಟ್ಟಿಗರಿಂದ ವ್ಯಕ್ತವಾಗಿದೆ.