ಚೆನ್ನೈ: ಮಹಾಮಾರಿ ಕೊರೊನಾ ವೈರಸ್‍ಗೆ ನರೆಯ ರಾಜ್ಯ ತಮಿಳುನಾಡಿನಲ್ಲಿ ಮೊದಲ ಬಲಿಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾಗೆ ಬಲಿಯಾದವರು ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ತಮಿಳುನಾಡು ರಾಜ್ಯದ ಮಧುರೈನ ರಾಜಾಜಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ 54 ವರ್ಷದ ಕೊರೊನಾ ಸೋಂಕಿತ ರೋಗಿ ನಿಧನರಾಗಿದ್ದಾರೆ. ಅವರು ಶ್ವಾಸಕೋಶ ಸಂಬಂಧಿ ಕಾಯಿಲೆ, ಅಧಿಕ ರಕ್ತದೊತ್ತಡ, ಮಧುಮೇಹದಿಂದಾಗಿ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ತಮಿಳುನಾಡಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವ ಡಾ. ಸಿ.ವಿಜಯಬಾಸ್ಕರ್ ತಿಳಿಸಿದ್ದಾರೆ.
Advertisement
A #COVID19 positive patient who was admitted at Rajaji Hospital in Madurai, Tamil Nadu has passed away.He had medical history of prolonged illness with steroid-dependent COPD, uncontrolled diabetes with hypertension: Dr C Vijayabaskar, State Minister for Health and Family Welfare pic.twitter.com/K14MPLRNs1
— ANI (@ANI) March 24, 2020
Advertisement
ಸಚಿವ ಡಾ. ಸಿ.ವಿಜಯಬಾಸ್ಕರ್ ಅವರು ಮಂಗಳವಾರ ಟ್ವೀಟ್ ಮಾಡಿ, ಚೆನ್ನೈನಲ್ಲಿ ಮೂರು ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ನ್ಯೂಜಿಲೆಂಡ್‍ನಿಂದ ಮರಳಿದ 65 ವರ್ಷದ ಓರ್ವ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಿಲ್ಪಾಕ್ ವೈದ್ಯಕೀಯ ಕಾಲೇಜಿನಲ್ಲಿ ದಾಖಲಾದ 55 ವರ್ಷದ ಮಹಿಳೆ ಹಾಗೂ ಲಂಡನ್‍ನಿಂದ ಹಿಂದಿರುಗಿದ 25 ವರ್ಷದ ವ್ಯಕ್ತಿಯನ್ನು ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದರು.
Advertisement
ಮಂಗಳವಾರ ದೇಶಾದ್ಯಂತ 50ಕ್ಕೂ ಹೆಚ್ಚು ಹೊಸ ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿದ್ದು, ಭಾರತದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 560ಕ್ಕೆ ತಲುಪಿದೆ. ಇಂದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದರಿಂದ ಭಾರತದಲ್ಲಿ ಸಾವಿನ ಸಂಖ್ಯೆ ಈಗ 11 ಕ್ಕೆ ಏರಿದೆ.
Advertisement
#coronaupdate: 3 new cases for #covid19 in Chennai. 65Y M return from New Zealand at Pvt.Hosp, 55Y F Saidapet at #KMC. 25Y M return from London at #RGGH. Patients are in isolation & under treatment.@MoHFW_INDIA @CMOTamilNadu #Vijayabaskar
— Dr C Vijayabaskar (@Vijayabaskarofl) March 24, 2020