ಬೆಂಗಳೂರು: ಕೊರೊನಾ ವೈರಸ್ ಬಗ್ಗೆ ಸರ್ಕಾರ, ನಟ, ನಟಿಯರು, ಕ್ರೀಡಾಪಟುಗಳು ಸೇರಿದಂತೆ ಅನೇಕ ಜಾಗೃತಿ ಮೂಡಿಸುತ್ತಿದ್ದಾರೆ. ಇದೀಗ ಬೆಂಗಳೂರಿನ ಬಾಲಕನೊಬ್ಬ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲು ನೂತನ ಪ್ರಯತ್ನ ಮಾಡಿದ್ದಾನೆ.
ಬಾಲಕನ ನೂತನ ಪ್ರಯತ್ನಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾರಕ್ ಕೂಡ ಸಾಥ್ ನೀಡಿದ್ದಾರೆ. ಬಾಲಕನೊಬ್ಬ “ನನ್ನ ಅಮ್ಮ ವೈದ್ಯೆ. ಅವಳು ನಿಮಗೆ ಸಹಾಯ ಮಾಡಲು ನನ್ನಿಂದ ದೂರವಿದ್ದಾಳೆ. ದಯವಿಟ್ಟು ನೀವು ಮನೆಯಲ್ಲಿದ್ದು, ಅವಳಿಗೆ ಸಹಾಯ ಮಾಡುತ್ತೀರಾ?” ಎಂದು ಬರೆದುಕೊಂಡು ಮನವಿ ಮಾಡಿಕೊಂಡಿದ್ದಾನೆ.
Advertisement
Can we not do atleast this for our own selves? pic.twitter.com/6qA1m9BTs7
— Dr Sudhakar K (@mla_sudhakar) March 25, 2020
Advertisement
ಸುಧಾಕರ್ ಅವರು ಬಾಲಕನ ಫೋಟೋವನ್ನು ಟ್ವಿಟ್ಟರಿನಲ್ಲಿ ಪೋಸ್ಟ್ ಮಾಡಿ, “ಕನಿಷ್ಠ ಪಕ್ಷ ನಮಗೋಸ್ಕರ ಇದನ್ನೂ ಮಾಡಲು ಸಾಧ್ಯವಿಲ್ಲವೇ?” ಎಂದು ಪ್ರಶ್ನೆ ಮಾಡಿದ್ದಾರೆ. ಬಾಲಕನ ಜಾಗೃತಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
Advertisement
ಕೊರೊನಾ ವೈರಸ್ ಹರಡದಂತೆ ಪ್ರಧಾನಿ ಮೋದಿ ಅವರು 21 ದಿನ ದೇಶವನ್ನೇ ಲಾಕ್‍ಡೌನ್ ಮಾಡಿದ್ದಾರೆ. ಆದರೂ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈಗಾಗಲೇ ಕರ್ನಾಟಕದಲ್ಲಿ ಕೊರೊನಾ ವೈರಸ್‍ಗೆ ಇಬ್ಬರು ಸಾವನ್ನಪ್ಪಿದ್ದಾರೆ.