ಬೀದರ್: ಕೋವಿಡ್-19 ಸಮಯದಲ್ಲಿ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ್ದ ಕೊರೊನಾ ವಾರಿಯರ್ಸ್ ಗೆ ನಾಲ್ಕು ತಿಂಗಳಿನಿಂದ ಸರ್ಕಾರ ಸಂಬಳ ನೀಡುತ್ತಿಲ್ಲ. ಜೊತೆಗೆ ಕೋವಿಡ್ ಭತ್ಯೆಯನ್ನು ನೀಡದ ಕಾರಣ ಬ್ರೀಮ್ಸ್ ನಲ್ಲಿ ಕೆಲಸ ಮಾಡುವ 200ಕ್ಕೂ ಹೆಚ್ಚು ಡಿ ಗ್ರೂಪ್ ನೌಕರರು ಜೀವನ ನಿರ್ವಹಣೆ ಮಾಡಲಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.
Advertisement
ಮನೆ ಹಾಗೂ ಕುಟುಂಬವನ್ನು ಬಿಟ್ಟು ಕೊರೊನಾ ಸೋಂಕು ಅಂಟಿದರೂ ಭಯ ಬೀಳದೇ ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡಿದ್ರು. ಇಂಥಾ ಕೊರೊನಾ ವಾರಿಯರ್ಸ್ ಗೆ ಇಂದು ನಾಲ್ಕು ತಿಂಗಳಿನಿಂದ ಸರ್ಕಾರ ಸಂಬಳ ನೀಡದೇ ಜೊತೆ ಕೋವಿಡ್ ಭತ್ಯೆ ನೀಡದೇ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಇದನ್ನೂ ಓದಿ: ನಮ್ಮ ಭೂಮಿ ಹೋದರೂ ಪರವಾಗಿಲ್ಲ, ಮೇಕೆದಾಟು ಯೋಜನೆ ಬೇಗ ಆರಂಭವಾಗಬೇಕು: ಡಿಕೆಶಿ
Advertisement
Advertisement
ಈ ಕುರಿತು ಮಾತನಾಡಿದ ಕೊರೊನಾ ವಾರಿಯರ್ಸ್, ಮನೆ, ಮಕ್ಕಳು ಬಿಟ್ಟು ಜೀವದ ಹಂಗು ತೊರೆದು ನಾವು ಕೋವಿಡ್ ಸಮಯದಲ್ಲಿ ಕೆಲಸ ಮಾಡಿದ್ದೇವೆ. ಹೀಗಿದ್ದರೂ ನಮಗೆ ಸರ್ಕಾರ ನಾಲ್ಕು ತಿಂಗಳಿನಿಂದ ಸಂಬಳ ಜೊತೆಗೆ ಕೋವಿಡ್ ಭತ್ಯೆ ಕೂಡಾ ನೀಡಿಲ್ಲ. ಮನೆ ಬಾಡಿಗೆ ನೀಡದ ಕಾರಣ ಮನೆ ಖಾಲಿ ಮಾಡುವಂತೆ ಮಾಲೀಕರು ಹೇಳುತ್ತಿದ್ದಾರೆ. ಜೊತೆಗೆ ಮಕ್ಕಳ ಶುಲ್ಕ ಕಟ್ಟಲಾಗದೆ ನೊಂದು ಹೋಗಿದ್ದೇವೆ ಎಂದು ಸರ್ಕಾರ ಮತ್ತು ಆರೋಗ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.