– ಸ್ಯಾನಿಟೈಸರ್ ಸಿಂಪಡಣೆಗೆ ಹೊಸ ಐಡಿಯಾ
ಮೈಸೂರು: ಜಿಲ್ಲೆಯ ಎಂಜಿ ರಸ್ತೆಯ ತರಕಾರಿ ಮಾರುಕಟ್ಟೆಗೆ ಇವತ್ತಿನಿಂದ 10 ವರ್ಷದ ಒಳಗಿನ ಮಕ್ಕಳು ಹಾಗೂ 60 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ಪ್ರವೇಶವಿಲ್ಲ.
ಕೊರೊನಾ ವೈರಸ್‍ನ ಈ ವಯಸ್ಸಿನವರಿಗೆ ಬಹು ಬೇಗ ಉಂಟಾಗುವ ಕಾರಣ ಈ ರೀತಿಯ ನಿರ್ಬಂಧ ಹೇರಲಾಗಿದೆ. ಈ ನಿಬಂಧನೆ ಗ್ರಾಹಕರು ಮತ್ತು ವ್ಯಾಪಾರಸ್ಥರು ಇಬ್ಬರಿಗೂ ಅನ್ವಯವಾಗಿತ್ತದೆ. ಮೈಸೂರಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚಾದ ನಂತರ ಜನರಲ್ಲಿ ಜಾಗೃತಿ ಹೆಚ್ಚಾಗಿದೆ. ಪರಿಣಾಮ ಇಡೀ ಸಂತೆಯಲ್ಲಿ ಆದಷ್ಟು ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಹಾಕಿಕೊಂಡು ವ್ಯಾಪಾರ ಮಾಡಲಾಗುತ್ತಿದೆ.
Advertisement
Advertisement
ಎಂಜಿ ರಸ್ತೆಯ ತರಕಾರಿ ಮಾರುಕಟ್ಟೆಯಲ್ಲಿ ಇವತ್ತಿನಿಂದ ಸ್ಯಾನಿಟೈಸರ್ ಎಂಟ್ರಿ ಪಾಥ್ ಮಾಡಲಾಗಿದೆ. ಅಂದರೆ ಜನರಿಗೆ ಪ್ರತ್ಯೇಕವಾಗಿ ಸ್ಯಾನಿಟೈಸರ್ ನೀಡಲು ಸಾಧ್ಯವಿಲ್ಲ. ಹೀಗಾಗಿ ತರಕಾರಿ ಮಾರುಕಟ್ಟೆಗೆ ಎಂಟ್ರಿ ಕೊಡುವ ಗ್ರಾಹಕರು, ವ್ಯಾಪಾರಸ್ಥರು ಇಡೀ ದೇಹದ ಮೇಲೆ 6 ಸೆಕೆಂಡ್ ಸ್ಯಾನಿಟೈಸರ್ ಮಾಡಲಾಗುತ್ತದೆ. ಇದು ಒಂದು ವಿಭಿನ್ನ ಪ್ರಯೋಗ. ಸೋಡಿಯಂ ಹೈಪೋ ಕ್ಲೋರೈಡ್ ಔಷಧಿ ಮಿಶ್ರಿತ ಸ್ಯಾನಿಟೈಸರ್ ಇದ್ದಾಗಿದ್ದು, ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಣೆ ಮಾಡಲಾಗುತ್ತಿದೆ.
Advertisement
ಮೈಸೂರು ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಎಂಜಿನಿಯರ್ ಸಹಾಯದಿಂದ ಈ ಮಾದರಿ ಸಿದ್ಧವಾಗಿದೆ. ಎಲ್ಲರಿಗೂ ಸ್ಯಾನಿಟೈಸರ್ ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಹೊಸ ಐಡಿಯಾ ಬಳಕೆಯಾಗಿದೆ.