ಬೆಂಗಳೂರು: ಕೊರೊನಾಗೆ ಮತ್ತೊಂದು ಬಲಿಯಾಗಿದ್ದು ವಿಜಯಪುರದ ವ್ಯಕ್ತಿ ಮೃತಪಟ್ಟಿದ್ದಾರೆ. ಈ ಮೂಲಕ 2 ದಿನದ ಅಂತರದಲ್ಲಿ ಮೂರು ಮಂದಿ ಪ್ರಾಣ ತೆತ್ತಿದ್ದಾರೆ. ಇಂದು 11 ಕೊರೊನಾ ಪಾಸಿಟಿವ್ ಪ್ರಕರಣ ಬಂದಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 247ಕ್ಕೆ ಏರಿಕೆಯಾಗಿದೆ.
ವಿಜಯಪುರದ 69 ವರ್ಷದ ವ್ಯಕ್ತಿ ಭಾನುವಾರ ಮೃತಪಟ್ಟಿದ್ದರು. ಪತ್ನಿಗೆ ಕೊರೊನಾ ಬಂದಿದ್ದ ಹಿನ್ನೆಲೆಯಲ್ಲಿ ಕ್ವಾರಂಟೈನ್‍ನಲ್ಲಿ ಇಡಲಾಗಿತ್ತು. ಈಗ ಪರೀಕ್ಷಾ ವರದಿ ಪ್ರಕಟವಾಗಿದ್ದು ಕೊರೊನಾದಿಂದ ಮೃತಪಟ್ಟಿರುವುದು ದೃಢವಾಗಿದೆ. ಇದನ್ನೂ ಓದಿ: ವಿಜಯಪುರದಲ್ಲಿ ಮೃತಪಟ್ಟ ವೃದ್ಧ ಕೊರೊನಾಗೆ ಬಲಿ – ಅಧಿಕೃತ ಪ್ರಕಟ
Advertisement
Advertisement
ಬಾಗಲಕೋಟೆ, ಕಲಬುರಗಿಯ ಮೂವರು, ಬೆಂಗಳೂರಿನ ಇಬ್ಬರು, ಚಿಕ್ಕಬಳ್ಳಾಪುರ, ಬಾಗಲಕೋಟೆ, ವಿಜಯಪುರದ, ಬೆಳಗಾವಿ ತಲಾ ಒಬ್ಬರಿಗೆ ಸೋಂಕು ಬಂದಿದೆ. ಕಲಬುರಗಿಯ ತರಕಾರಿ ಮಾರಾಟ ಮಾಡಿದ್ದ ವೃದ್ಧ, ಬೆಂಗಳೂರಿನ 65 ವರ್ಷದ ವೃದ್ಧ ಸೇರಿ ಒಟ್ಟು ಕರ್ನಾಟಕದಲ್ಲಿ 9 ಮಂದಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ತಬ್ಲಿಘಿಗೆ ಹೋಗಿದ್ದ ಸ್ನೇಹಿತನಿಂದ ಸೋಂಕು, ವೃದ್ಧ ಬಲಿ – ಕಲಬುರಗಿಯ ನಿದ್ದೆಗೆಡಿಸಿದೆ ಮೂರು ಸಾವು
Advertisement
Advertisement
ಇಲ್ಲಿಯವರೆಗೆ ಒಟ್ಟು 65 ಮಂದಿಯನ್ನು ಡಿಸ್ಚಾರ್ಜ್ ಮಾಡಲಾಗಿದ್ದು, ಒಟ್ಟು 184 ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಬೆಳಗಿನ ವರದಿಯಾಗಿದ್ದು ಸಂಜೆ ಸರ್ಕಾರ ಎಂದಿನಂತೆ ಮತ್ತೊಂದು ವರದಿ ಬಿಡುಗಡೆ ಮಾಡುತ್ತದೆ. ಇದನ್ನೂ ಓದಿ: ಮೂರು ಆಸ್ಪತ್ರೆಗೆ ಅಲೆದಾಡಿ ಬೆಂಗ್ಳೂರಿನ ವೃದ್ಧ ಸಾವು – ಕೊನೆಗೆ ಕೊರೊನಾ ಪರೀಕ್ಷೆ
ರೋಗಿಗಳ ವಿವರ:
ರೋಗಿ 248 – 43 ವರ್ಷದ ಬಾಗಲಕೋಟೆಯ ವ್ಯಕ್ತಿ, ರೋಗಿ 186 ಮತ್ತು ರೋಗಿ 165 ಸಂಪರ್ಕ.
ರೋಗಿ 249 – 32 ವರ್ಷದ ಬಾಗಲಕೋಟೆಯ ಮಹಿಳೆ ರೋಗಿ 186 ಮತ್ತು 165ರ ಸಂಪರ್ಕ
ರೋಗಿ 250 – 65 ವರ್ಷದ ಚಿಕ್ಕಬಳ್ಳಾಪುರದ ವ್ಯಕ್ತಿ ಉಸಿರಾಟದ ಸಮಸ್ಯೆ
ರೋಗಿ 251 – 39 ವರ್ಷದ ಬಾಗಲಕೋಟೆಯ ಮಹಿಳೆ, ರೋಗಿ 125ರ ಸಂಪರ್ಕ
ರೋಗಿ 252 – 65 ವರ್ಷದ ಬೆಂಗಳೂರಿನ ವ್ಯಕ್ತಿ ಉಸಿರಾಟದ ಸಮಸ್ಯೆಯಿಂದ ದಾಖಲಾಗಿದ್ದರು. ಸೋಮವಾರ ಮೃತಪಟ್ಟಿದ್ದಾರೆ.
ರೋಗಿ 253 – 26 ವರ್ಷದ ಬಿಬಿಎಂಪಿ ವ್ಯಾಪ್ತಿಯ ವ್ಯಕ್ತಿ ಏ.7 ರಂದು ಹಿಂದೂಪುರದಿಂದ ಬೆಂಗಳೂರಿಗೆ ಪ್ರಯಾಣ
ರೋಗಿ 254 – 10 ವರ್ಷದ ಕಲಬರುಗಿಯ ಬಾಲಕಿ, ರೋಗಿ 177ರ ಸಂಪರ್ಕ
ರೋಗಿ 255 – 51 ವರ್ಷದ ಕಲಬುರಗಿಯ ಪುರುಷ, ರೋಗಿ ಸಹೋದರ(ರೋಗಿ 205) ಸಂಪರ್ಕ
ರೋಗಿ 256 – 35 ವರ್ಷದ ಕಲಬುರಗಿಯ ಮಹಿಳೆ, ರೋಗಿ 177ರ ಸಂಪರ್ಕ
ರೋಗಿ 257 – 69 ವರ್ಷದ ವಿಜಯಪುರದ ವ್ಯಕ್ತಿ ಭಾನುವಾರ ಮೃತಪಟ್ಟಿದ್ದು, ಈಗ ಕೊರೊನಾದಿಂದ ಎನ್ನುವುದು ದೃಢಪಟ್ಟಿದೆ. ಈ ವ್ಯಕ್ತಿಯ ಪತ್ನಿ(ರೋಗಿ 177) ವೆಂಟಿಲೇಟರ್ ನಲ್ಲಿದ್ದಾರೆ.
ರೋಗಿ 258 – 33 ವರ್ಷದ ಬೆಳಗಾವಿ ಮೂಲದ ವ್ಯಕ್ತಿ ದೆಹಲಿ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ.