-ಸೋಂಕಿತರ ಸಂಖ್ಯೆ 260ಕ್ಕೆ ಏರಿಕೆ
-ರಾಜ್ಯದಲ್ಲಿ ಕೊರೊನಾ ಸಾವು 10ಕ್ಕೆ ಏರಿಕೆ
ಬೆಂಗಳೂರು: ಇವತ್ತು ಮತ್ತಿಬ್ಬರಿಗೆ ಕೊರೊನಾ ಸೋಂಕು ತಗಲಿರೋದು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 260ಕ್ಕೆ ತಲುಪಿದೆ. ಇಂದು ಬೆಳಗ್ಗೆ 11 ಮಂದಿಗೆ ಸೋಂಕು ತಗುಲಿರೋದು ವರದಿಯಲ್ಲಿ ದೃಢಪಟ್ಟಿತ್ತು. 260 ಜನರ ಪೈಕಿ 71 ಮಂದಿ ಸಂಪೂರ್ಣವಾಗಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ರೋಗಿ ನಂಬರ್ 259: 35 ವರ್ಷದ ಮಹಿಳೆ ಬೆಂಗಳೂರಿನ ನಿವಾಸಿ. ಮಹಿಳೆ ರೋಗಿ ನಂಬರ್ 199ರ ಸಂಂಪರ್ಕದಲ್ಲಿದ್ದರು.
ರೋಗಿ ನಂಬರ್ 260: 36 ವರ್ಷದ ಪುರುಷನಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಿವಾಸಿ. ರೋಗಿ ನಂಬರ್ 176ರ ಪತಿ.
Advertisement
ಇಂದು ಸಂಜೆ 5 ಗಂಟೆಯ ವರದಿಯಂತೆ, ಕರ್ನಾಟಕದಲ್ಲಿ ಒಟ್ಟಾರೆಯಾಗಿ 260 #COVID19 ಪ್ರಕರಣಗಳು ಖಚಿತವಾಗಿರುತ್ತದೆ. ಅವರ ಪೈಕಿ 71 ಜನರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುತ್ತಾರೆ. #IndiaFightsCorona #ಮನೆಯಲ್ಲೇಇರಿ
— B Sriramulu (@sriramulubjp) April 14, 2020
Advertisement
ಬೆಂಗಳೂರಿನ ರೋಗಿ ನಂಬರ್ 219 ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಒಟ್ಟು 10 ಮಂದಿ ಕೊರೊನಾಗೆ ಸಾವನ್ನಪ್ಪಿದ್ದಾರೆ. ಇಂದು ಬೆಳಗ್ಗೆ 11 ಸೇರಿದಂತೆ ಒಟ್ಟು 13 ಪ್ರಕರಣಗಳ ಇವತ್ತು ಬೆಳಕಿಗೆ ಬಂದಿದೆ.