ಹಾವೇರಿ: ಕೊರೊನಾ ಕುರಿತು ಸಾಕಷ್ಟು ಜನ ಜಾಗೃತಿ ಗೀತೆಗಳನ್ನು ಹಾಡಿದ್ದು, ಇದೀಗ ಕನ್ನಡ ಕೋಗಿಲೆ ಖ್ಯಾತಿಯ ಖಾಸೀಂ ಅಲಿ ಸಹ ತಮ್ಮದೇ ಶೈಲಿಯಲ್ಲಿ ಹಾಡು ಹೇಳುವ ಮೂಲಕ ಜಾಗೃತಿ ಮೂಡಿಸಿದ್ದಾರೆ. ಅಲ್ಲದೆ ಪ್ರಧಾನಿ ಮೋದಿ ಕರೆ ನೀಡಿರುವ ದೀಪದ ಅಭಿಯಾನ ಬೆಂಬಲಿಸುವಂತೆ ಕರೆ ನೀಡಿದ್ದಾರೆ.’
Advertisement
ಕೊರೊನಾ ವೈರಸ್‍ನ್ನು ಒಟ್ಟಾಗಿ ಎದುರಿಸುವ ಸಂದೇಶ ಸಾರಲು ಪ್ರಧಾನಿ ನರೇಂದ್ರ ಮೋದಿ ದೀಪ ಬೆಳಗಿಸಲು ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ದೀಪ ಬೆಳಗಿಸುವ ಕುರಿತು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹರಳಕೊಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕರೊಬ್ಬರು ಹಾಡು ಬರೆದಿದ್ದಾರೆ. ಶಿಕ್ಷಕ ನಿಂಗಪ್ಪ ಸಾಳಂಕಿ ಅವರು ಬರೆದಿರುವ ಹಾಡಿಗೆ ಕನ್ನಡ ಕೋಗಿಲೆ ಖ್ಯಾತಿಯ ಖಾಸೀಂ ಅಲಿ ಹಾಡಿದ್ದಾರೆ.
Advertisement
Advertisement
ಬೆಳಗಲಿ, ಬೆಳಗಲಿ ಕೈಲಿ ದೀಪವು ತೊಲಗಲಿ, ತೊಲಗಲಿ ಕೆಟ್ಟ ರೋಗವು ಎಂದು ಖಾಸೀಂ ಹಾಡಿರುವ ಹಾಡು ಸಖತ್ ಸದ್ದು ಮಾಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕೊರೊನಾ ತೊಲಗಿಸಲು ದೀಪ ಬೆಳಗೋಣ ಎನ್ನುವ ಸಂದೇಶ ಸಾರುವ ಹಾಡನ್ನು ಶಿಕ್ಷಕ ನಿಂಗಪ್ಪ ಬರೆದಿದ್ದು, ಖಾಸೀಂ ಅಲಿ ತಮ್ಮದೇ ಧ್ವನಿಯಲ್ಲಿ ಹಾಡಿ ಜಾಗೃತಿ ಮೂಡಿಸಿದ್ದಾರೆ. ಅಲ್ಲದೆ ಪ್ರಧಾನಿ ಮೋದಿ ಕರೆ ನೀಡಿರುವ ದೀಪದ ಅಭಿಯಾನದಲ್ಲಿ ಭಾಗವಹಿಸುವಂತೆ ತಿಳಿಸಿದ್ದಾರೆ. ಈ ಹಾಡು ಫೇಸ್ಬುಕ್, ವಾಟ್ಸಪ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.