ಬೆಂಗಳೂರು: ಲಾಕ್‍ಡೌನ್ ಹೊರತಾಗಿಯೂ ಕರ್ನಾಟಕದಲ್ಲಿ ಕೊರೊನಾ ಮಹಾಮಾರಿ ಅಬ್ಬರ ತೀವ್ರಗೊಂಡಿದೆ. ಇವತ್ತು ಕೊರೊನಾಗೆ ಮತ್ತೊಬ್ಬರು ಬಲಿ ಆಗಿದ್ದು, ಮೃತರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಮತ್ತಷ್ಟು ಆತಂಕ ಮೂಡಿಸುವ ಅಂಶ ಅಂದ್ರೆ ಒಂದೇ ದಿನ ಅತೀ ಹೆಚ್ಚು 36 ಹೊಸ ಕೊರೊನಾ ಪ್ರಕರಣಗಳು ವರದಿ ಆಗಿವೆ.
Advertisement
ಈ ಪೈಕಿ 17 ಪ್ರಕರಣಗಳು ಬೆಳಗಾವಿಗೆ ಸಂಬಂಧಿಸಿದ್ದಾಗಿದೆ. ವಿಜಯಪುರದಲ್ಲಿ 7 ಮಂದಿ, ಕಲಬುರಗಿ, ಮೈಸೂರಿನಲ್ಲಿ ತಲಾ ಮೂವರು, ಬೆಂಗಳೂರಿನ ಐವರು, ಗದಗದ ಒಬ್ಬರಲ್ಲಿ ಸೋಂಕು ಕಂಡು ಬಂದಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 315 ಆಗಿದೆ. ಇದನ್ನು ಗಮನಿಸಿದರೆ ರಾಜ್ಯದಲ್ಲಿ ಕೊರೋನಾ ಸೋಂಕು ಸಮುದಾಯಕ್ಕೆ ಹರಡಲು ಶುರು ಮಾಡಿದ್ಯಾ ಎಂಬ ಪ್ರಶ್ನೆ ಏಳುತ್ತೆ. ಆದರೆ ಕರ್ನಾಟಕದಲ್ಲಿ ಸಮುದಾಯಕ್ಕೆ ಸೋಂಕು ಹಬ್ಬಿಲ್ಲ ಎಂದು ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
Advertisement
Advertisement
ಬೆಂಗಳೂರು, ವಿಜಯಪುರ, ಮೈಸೂರು, ಬೆಳಗಾವಿ, ಕಲಬುರಗಿಯಲ್ಲಿ ಸೋಂಕು ತೀವ್ರ ಸ್ವರೂಪದಲ್ಲಿ ಹರಡುತ್ತಿದ್ದು, ಇದು ಹೀಗೆ ಮುಂದುವರೆದ್ರೆ ಕಷ್ಟ ಆಗಬಹುದು. ಮೇ 3 ಅಲ್ಲ- ಜುಲೈವರೆಗೂ ಲಾಕ್‍ಡೌನ್ ಮುಂದುವರೆಸೋ ಸ್ಥಿತಿ ಎದುರಾಗಬಹುದು ಎಂದು ಕೊರೊನಾ ಟಾಸ್ಕ್ ಫೋರ್ಸ್, ಸರ್ಕಾರಕ್ಕೆ ವರದಿ ನೀಡಿದೆ. ರಾಜ್ಯದಲ್ಲಿ ಒಟ್ಟು 46,751 ಜನರಿಗೆ ಕೊರೊನಾ ಟೆಸ್ಟ್ ಮಾಡಲಾಗಿದ್ದು, 13,413 ಮಂದಿ ಮೇಲೆ ನಿಗಾ ಇಡಲಾಗಿದೆ.
Advertisement
ರಾಜ್ಯದಲ್ಲಿ ಕೊರೊನಾ ಆರ್ಭಟ ಹೆಚ್ಚಾಗಿದೆ. ತೀವ್ರ ಗತಿಯಲ್ಲಿ ಸೋಂಕು ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಮತ್ತು ಕೊರೊನಾ ಸಾವುಗಳ ಹೇಗೆ ಏರಿಕೆ ಕಂಡಿತು ಎಂಬುದರ ಮಾಹಿತಿ ಇಲ್ಲಿದೆ.
ಕೊರೊನಾ ಸೋಂಕಿತರ ಸಂಖ್ಯೆ ಏರಿಕೆ ಪ್ರಮಾಣ:
ಮಾರ್ಚ್ 3ರಂದು ರಾಜ್ಯದಲ್ಲಿ ಮೊದಲ ಕೊರೊನಾ ರೋಗಿ ಕಂಡು ಬಂದಿದ್ದನು. 28 ದಿನಗಳ ನಂತರ ಅಂದ್ರೆ ಮಾರ್ಚ್ 31 ಕೊರೊನಾ ಸೋಂಕಿತರ ಸಂಖ್ಯೆ ನೂರರ ಗಡಿ ದಾಟಿ 101ಕ್ಕೆ ತಲುಪಿತ್ತು. 10 ದಿನಗಳ ಅಂತರದಲ್ಲಿ ಏಪ್ರಿಲ್ 10ರಂದು ರಾಜ್ಯದಲ್ಲಿ 207 ಕೊರೊನಾ ಸೋಂಕಿತರು ಪತ್ತೆಯಾದರು. ಏಪ್ರಿಲ್ 10ರಿಂದ ಕೇವಲ ಆರು ದಿನಗಳ ಅಂತರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 315ಕ್ಕೆ ಏರಿಕೆಯಾಗಿದೆ.
ಕೊರೊನಾ ಸಾವು:
ಮಾರ್ಚ್ 10ರಂದು ಕಲಬುರಗಿಯ ವೃದ್ಧ ಸಾವನ್ನಪ್ಪಿದರು. ಇದು ದೇಶದಲ್ಲಿಯೇ ಮೊದಲ ಸಾವು ಆಗಿತ್ತು. 32 ದಿನಗಳ ಅಂತರ(ಏಪ್ರಿಲ್ 12)ದಲ್ಲಿ ಅಂದ್ರೆ ಒಂದು ತಿಂಗಳ ಅವಧಿಯೊಳಗೆ ಒಟ್ಟು ಆರು ಜನರು ಕೊರೊನಾದಿಂದಾಗಿ ಸಾವನ್ನಪ್ಪಿದರು. ಏಪ್ರಿಲ್ 12ರಿಂದ ಆರು ದಿನಗಳ ನಡುವೆ ಕೊರೊನಾಗೆ ಬಲಿಯಾದವರ ಸಂಖ್ಯೆ ಡಬಲ್ ಆಗಿದೆ. ಇದುವರೆಗೂ ರಾಜ್ಯದಲ್ಲಿ 13 ಜನರು ಸಾವನ್ನಪ್ಪಿದ್ದಾರೆ.