ಓಮಿಕ್ರಾನ್ ಆತಂಕ, ಶಾಲಾ ಬಂದ್‍ಗೆ ಆಗ್ರಹ ವಾಟಾಳ್ ನಾಗರಾಜ್ ಪ್ರತಿಭಟನೆ

Advertisements

ಚಾಮರಾಜನಗರ: ಕೊರೊನಾ ಹೆಚ್ಚಾಗುತ್ತಿರುವುದರಿಂದ ಶಾಲಾ ಕಾಲೇಜುಗಳಿಗೆ ರಜೆ ನೀಡುವಂತೆ ಆಗ್ರಹಿಸಿ ಚಾಮರಾಜನಗರದಲ್ಲಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು.

Advertisements

ಚಾಮರಾಜನಗರದ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಿ ಅವರು, ರಾಜ್ಯದಲ್ಲಿ ಶಾಲಾ ಮಕ್ಕಳಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಶಾಲಾ ಮಕ್ಕಳಿಗೆ ಇನ್ನೂ ಲಸಿಕೆ ನೀಡಿಲ್ಲ. ಲಸಿಕೆ ಹಾಕದೇ ಶಾಲೆ ಪ್ರಾರಂಭ ಮಾಡಿದ್ದು ಸರಿಯಲ್ಲ. ಮುಂಜಾಗ್ರತಾ ಕ್ರಮವಾಗಿ ಶಾಲಾ ಕಾಲೇಜುಗಳನ್ನು ಬಂದ್ ಮಾಡಬೇಕು ವಿದ್ಯಾರ್ಥಿಗಳಿಗೆ ಆನ್ ಲೈನ್ ಶಿಕ್ಷಣ ನೀಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: 154 ದಿನಗಳ ನಂತರ ಡಿಸ್ಚಾರ್ಜ್ – ಸಾವನ್ನು ಗೆದ್ದ ಕೊಪ್ಪಳದ ಮಹಿಳೆ

Advertisements

ಇದೇ ವೇಳೆ ವಿಧಾನಪರಿಷತ್ ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು ವಿಧಾನಪರಿಷತ್‍ಗೆ ತನ್ನದೇ ಆದ ಗೌರವ, ಗಾಂಭೀರ್ಯ ಇದೆ. ಆದರೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಅಭ್ಯರ್ಥಿಗಳ ಹಿನ್ನೆಲೆ ನೋಡದೇ ಹಣ ಇರುವವರಿಗೆ ಟಿಕೆಟ್ ನೀಡಿವೆ. ವಿಧಾನ ಪರಿಷತ್ ಕ್ಲಬ್ ಅಲ್ಲ. ಅದನ್ನು ಕ್ಲಬ್ ಮಟ್ಟಕ್ಕೆ ಇಳಿಸಬಾರದು ಎಂದರು. ವಿಧಾನ ಪರಿಷತ್‍ಗೆ ಆಯ್ಕೆ ಆಗುವವರು ಪ್ರಾಮಾಣಿಕರಾಗಿರಬೇಕು ದಂಧೆ ಮಾಡುವವರು, ರಿಯಲ್ ಎಸ್ಟೇಟ್ ಮಾಡುವವರು, ಮರಳುದಂಧೆ ಮಾಡುವವರು ಬರಬಾರದು ಎಂದ ಹರಿಹಾಯ್ದರು. ಇದನ್ನೂ ಓದಿ:  ಸಮವಸ್ತ್ರದಲ್ಲೇ ಫೋಟೋಶೂಟ್ ಮಾಡಿಸಿಕೊಂಡು ಮಹಿಳಾ ಸಬ್ ಇನ್ಸ್‌ಪೆಕ್ಟರ್ ಎಡವಟ್ಟು!

Advertisements

ಚುನಾವಣಾ ಆಯೋಗ ಕಣ್ಮುಚ್ಚಿ ಕುಳಿತಿದೆ, ಕೆಲವೆಡೆ ಒಂದು ಓಟಿಗೆ ಒಂದು ಲಕ್ಷ ರೂಪಾಯಿ ರೈಟ್ ನಡೀತಾ ಇದೆ. ಇಂತಹವರು ಆಯ್ಕೆಯಾದರೆ ಪರಿಷತ್ತಿನ ಗೌರವ ಏನಾಗಬೇಕು. ಚುನಾವಣಾ ಆಯೋಗ ಇದಕ್ಕೆಲ್ಲ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ನೀವು ಬದಲಾಗದಿದ್ದರೆ ಮುಂದೆ ಎಲ್ಲವೂ ಬದಲಾಗುತ್ತೆ: ಸಂಸದರಿಗೆ ಮೋದಿ ಎಚ್ಚರಿಕೆ

ನಾನು ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಿದ್ದೇನೆ, ಕಾಂಗ್ರೆಸ್‍ನವರಿಗೆ ನನ್ನ ಮೇಲೆ ಪ್ರೀತಿ ಇದೆ. ಚುನಾವಣೆಯಲ್ಲಿ ಅದನ್ನು ಯಾವ ರೀತಿ ವ್ಯಕ್ತಪಡಿಸುತ್ತಾರೋ, ಗೊತ್ತಿಲ್ಲ. ಉಳಿದ ಪಕ್ಷದವರು ನನ್ನ ದ್ವೇಷಿಗಳಲ್ಲ. ಎಲ್ಲ ಪಕ್ಷದವರು ತಮ್ಮ ಅಭ್ಯರ್ಥಿಯ ನಂತರ ಒಂದು ಓಟನ್ನು ನನಗೆ ನೀಡುವ ವಿಶ್ವಾಸ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisements
Exit mobile version