ಬೆಂಗಳೂರು: ಕೊರೊನಾ ವೈರಸ್ ಕುರಿತು ದೇಶದೆಲ್ಲೆಡೆ ಮುಂಜಾಗೃತಾ ಕ್ರಮ ಕೈಗೊಳ್ಳಲಾಗುತ್ತಿದ್ದು, ಸಾರ್ವಜನಿಕರೂ ಸಹ ಅಷ್ಟೇ ಎಚ್ಚರದಿಂದ ಇರಬೇಕು ಎಂದು ಸೂಚಿಸಲಾಗುತ್ತಿದೆ. ಮಾಸ್ಕ್ ಧರಿಸುವುದು ಉತ್ತಮ ಎಂದು ಸೂಚಿಸಿದ ಬೆನಲ್ಲೇ ದರ ದಿಢೀರ್ ಏರಿಕೆಯಾಗಿದೆ.
Advertisement
ಸಿಲಿಕಾನ್ ಸಿಟಿಯಲ್ಲಿ ಮಾಸ್ಕ್‍ಗೆ ಬರ ಎಂಬಂತಾಗಿದ್ದು, ಕೊರತೆ ಕಾಡುತ್ತಿದೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡಿರುವ ವ್ಯಾಪಾರಿಗಳು ದುಪ್ಪಟ್ಟು ದರ ನಿಗದಿ ಮಾಡುತ್ತಿದ್ದಾರೆ. ಹೀಗಾಗಿ ಮಾಸ್ಕ್ ಕೊಳ್ಳಲು ಹೋದ ಜನ ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಂತಾಗಿದೆ. ಸಿಲಿಕಾನ್ ಸಿಟಿಯ ಬಹುತೇಕ ಮೆಡಿಕಲ್‍ಗಳಲ್ಲಿ ಮಾಸ್ಕ್ ಲಭ್ಯವಿಲ್ಲ. ಕೆಲವೇ ಮೆಡಿಕಲ್ ಶಾಪ್‍ಗಳಲ್ಲಿ ಸ್ಟಾಕ್ ಲಭ್ಯವಿದ್ದು, ಆದರೆ ದರ ದುಪ್ಪಟ್ಟು ಹೇಳುತ್ತಿದ್ದಾರೆ.
Advertisement
ಕರೊನಾ ವೈರೆಸ್ ಎಫೆಕ್ಟ್ ಹಿನ್ನೆಲೆಯಲ್ಲಿ 3 ರೂ. ಇದ್ದ ಮಾಸ್ಕ್ ದರ 10 ರೂ. ಆಗಿದೆ. 10 ರೂ. ಇದ್ದ ಮಾಸ್ಕ್ ಬೆಲೆ ಈಗ 38 ರೂ. ಆಗಿದೆ. ಸಾಮಾನ್ಯವಾಗಿ ಮಾಸ್ಕ್ ಯಾರೂ ಹೆಚ್ಚಾಗಿ ಬಳಸದ ಸ್ಟಾಕ್ ಇರಲಿಲ್ಲ. ಇದೀಗ ಸರಬಾರಜು ಕೂಡ ಬರುತ್ತಿಲ್ಲ. ಆದರೆ ಇದ್ದಕ್ಕಿದ್ದಂತೆ ಬೇಡಿಕೆ ಹೆಚ್ಚಾಗಿದೆ. ಇದನ್ನು ಸರಿದೂಗಿಸಲು ಆಗುತ್ತಿಲ್ಲ. ಹೀಗಾಗಿ ದರ ಹೆಚ್ಚು ಮಾಡಿ ಮಾರಾಟ ಮಾಡಲಾಗುತ್ತಿದೆ.
Advertisement
Advertisement
ದುಬಾರಿ ಬೆಲೆಯ ಮಾಸ್ಕ್ ತಯಾರಿಗೆ 2 ರೂ. ಸಹ ಬೀಳಲ್ಲ. ಆದರೂ ಮಾಸ್ಕ್ ದರ ಮಾತ್ರ ಸಿಕ್ಕಪಟ್ಟೆ ಹೆಚ್ಚಾಗಿದೆ ಎಂದು ಮೆಡಿಕಲ್ ಶಾಪ್ ಬಳಿ ಗ್ರಾಹಕರು ಅಳಲು ತೋಡಿಕೊಳ್ಳುತ್ತಿದ್ದಾರೆ.