ರಾಜಕಾರಣಿಗಳ ಕಾರ್ಯಕ್ರಮಕ್ಕೆ ಬಾರದ ಕೊರೊನಾ, ಹಬ್ಬಕ್ಕೆ ಬರುತ್ತಾ – ಜನರ ಪ್ರಶ್ನೆ

Public TV
1 Min Read
MND TEMPLE 3

ಮಂಡ್ಯ: ಇಂದು ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆ ಸಾವಿರಾರು ಜನರು ಲಕ್ಷ್ಮೀ ದೇವಸ್ಥಾನಗಳಿಗೆ ಬರುತ್ತಾರೆ ಎಂಬ ಕಾರಣಕ್ಕೆ ಮಂಡ್ಯ ಜಿಲ್ಲೆಯಾದ್ಯಂತ ಇರುವ ಲಕ್ಷ್ಮೀ ದೇವಸ್ಥಾನಗಳನ್ನು ಬಂದ್ ಮಾಡಲಾಗಿದೆ.

MND TEMPLE 1

ವರಮಹಾಲಕ್ಷ್ಮೀ ಹಬ್ಬ ಹಿನ್ನೆಲೆ ಸಾಮಾನ್ಯವಾಗಿ ಜನರು ಲಕ್ಷ್ಮೀ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸುತ್ತಾರೆ. ಆದರೆ ಈ ಬಾರಿ ಕೊರೊನಾ ಇರುವ ಹಿನ್ನೆಲೆ ಜನರನ್ನು ನಿಯಂತ್ರಿಸುವ ಸಲುವಾಗಿ ಮಂಡ್ಯ ಜಿಲ್ಲೆಯ ಎಲ್ಲಾ ಲಕ್ಷ್ಮೀ ದೇವಸ್ಥಾನಗಳನ್ನು ಬಂದ್ ಮಾಡಲಾಗಿದೆ. ದೇವಸ್ಥಾನಗಳಿಗೆ ಇಂದು ಸಾವಿರಾರು ಜನರು ಬಂದರೆ ಸಾಮಾಜಿಕ ಅಂತರ ಪಾಲಿಸದೇ ಹಾಗೂ ಮಾಸ್ಕ್ ಧರಿಸದೇ ಪೂಜೆ ಮಾಡುತ್ತಾರೆ. ಇದರಿಂದ ಕೊರೊನಾ ಹರಡುವ ಸಾಧ್ಯತೆ ಇರುತ್ತದೆ ಎಂಬ ಕಾರಣಕ್ಕೆ ಲಕ್ಷ್ಮೀ ದೇವಸ್ಥಾನಗಳಲ್ಲಿ ಬೆಳಗ್ಗೆ ಪೂಜೆ ಮಾಡಿ, ದೇವಸ್ಥಾನಗಳಿಗೆ ಬೀಗ ಹಾಕಲಾಗಿದೆ. ಇದನ್ನೂ ಓದಿ:ಗಡಿಕೇಶ್ವಾರದಲ್ಲಿ ಕಂಪಿಸಿದ ಭೂಮಿ

MND TEMPLE 2

ದೇವಸ್ಥಾನಗಳನ್ನು ಬಂದ್ ಮಾಡಿರುವ ಕಾರಣ ಭಕ್ತರು ದೇವಸ್ಥಾನದ ಹೊರ ಭಾಗದಲ್ಲಿಯೇ ಪೂಜೆ ಮಾಡಿಕೊಂಡು ಮನೆಗೆ ತೆರಳುತ್ತಿರುವ ದೃಶ್ಯಗಳು ಮಂಡ್ಯ ಜಿಲ್ಲೆಯ ಲಕ್ಷ್ಮಿ ದೇವಸ್ಥಾನಗಳಲ್ಲಿ ಕಂಡು ಬಂತು. ರಾಜಕಾರಣಿಗಳು ಮಾಡುವ ಕಾರ್ಯಕ್ರಮದಲ್ಲಿ ಅಪಾರ ಜನರು ಸೇರಿದರೆ ಕೊರೊನಾ ಬರುವುದಿಲ್ಲ, ಜನರು ಮಾಡುವ ಧಾರ್ಮಿಕ ಆಚರಣೆ ಮಾಡಿದರೆ ಕೊರೊನಾ ಬರುತ್ತದೆ. ಈ ಸರ್ಕಾರದವರು ಅವರಿಗೆ ಬೇಕಾದ ರೀತಿಯಲ್ಲಿ ರೂಲ್ಸ್‌ ಗಳನ್ನು ಬದಲಾವಣೆ ಮಾಡಿಕೊಂಡು, ಆ ರೂಲ್ಸ್ ಗಳನ್ನು ಜನರ ಮೇಲೆ ಹೇರುವುದು ಸರಿಯಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ:ಚಾಮುಂಡಿ ಬೆಟ್ಟದಲ್ಲಿ ಜನಸ್ತೋಮ – ಇಂದು ಸೇರಿದಂತೆ 3 ದಿನ ಭಕ್ತರ ಪ್ರವೇಶಕ್ಕೆ ನಿರ್ಬಂಧ

Share This Article
Leave a Comment

Leave a Reply

Your email address will not be published. Required fields are marked *