ರಾಯಚೂರು: ಕೊರೊನಾ ಲಾಕ್ ಡೌನ್ ಹಿನ್ನೆಲೆ ಕೊಳ್ಳುವವರೇ ಇಲ್ಲದಂತಗಿದ್ದು, ಲಕ್ಷಾಂತರ ರೂಪಾಯಿ ಅಂಜೂರ ಬೆಳೆ ಕೊಳೆತು ಹೋಗುತ್ತಿದೆ.
ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ಕಾತರಕಿ ಗ್ರಾಮದಲ್ಲಿ ಲಕ್ಷಾಂತರ ರೂಪಾಯಿ ಅಂಜೂರ ಬೆಳೆ ಹೊಲದಲ್ಲಿಯೇ ಕೊಳೆಯುತ್ತಿದೆ. ಕಾತರಕಿ ಗ್ರಾಮದ ರೈತ ಚನ್ನಬಸನಗೌಡ ಸುಮಾರು 20 ಲಕ್ಷ ರೂಪಾಯಿ ನಷ್ಟ ಅನುಭವಿಸುತ್ತಿದ್ದಾರೆ.
Advertisement
Advertisement
ತುಂಗಭದ್ರಾ ಎಡದಂಡೆ ನಾಲೆಯ ಕೊನೆಯ ಭಾಗದ ರೈತ ಚನ್ನಬಸನಗೌಡ 20 ಎಕರೆ ಪ್ರದೇಶದಲ್ಲಿ ಅಂಜೂರ ಬೆಳೆಯುತ್ತಿದ್ದಾರೆ, ಅವರ ಹೊಲದಲ್ಲಿ ನಿತ್ಯ 4 ಕ್ವಿಂಟಾಲಿಗೂ ಅಧಿಕ ಅಂಜೂರ ಹಣ್ಣು ಬರುತ್ತಿದೆ. ಆದರೆ ಲಾಕ್‍ಡೌನ್ ಆದ ನಂತರ ಹಣ್ಣು ಹರಿಯಲು ಕೂಲಿಯಾಳುಗಳು ಬರುತ್ತಿಲ್ಲ. ಇನ್ನೊಂದು ಕಡೆ ಹಣ್ಣುಗಳನ್ನು ಕೊಳ್ಳುವವರೇ ಇಲ್ಲದಂತಾಗಿದ್ದು, ಬೆಂಗಳೂರು ಸೇರಿದಂತೆ ಇತರೆ ಕಡೆ ಕಳುಹಿಸಲು ಸಾಗಿಸಲು ಆಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
Advertisement
Advertisement
ಇದರಿಂದಾಗಿ ಅಪಾರ ಪ್ರಮಾಣದ ಅಂಜೂರ ಹೊಲದಲ್ಲಿಯೇ ಕೊಳೆಯುತ್ತಿದೆ. ಲಕ್ಷಾಂತರ ರೂಪಾಯಿ ಹಾನಿ ಸಂಭವಿಸುತ್ತಿದೆ. ಅಂಜೂರ ಹಣ್ಣನ್ನು ಸರ್ಕಾರವೇ ಖರೀದಿಸಿ, ನೆರವಿಗೆ ಬರಬೇಕು ಎಂದು ರೈತ ಚನ್ನಬಸನಗೌಡ ಆಗ್ರಹಿಸಿದ್ದಾರೆ.