ಬೆಂಗಳೂರು: ಕೊರೋನಾ ಬಂದ್‍ಗೆ ಕರ್ನಾಟಕದಲ್ಲಿ 2ನೇ ದಿನ ಕರ್ನಾಟಕದ ಬೊಕ್ಕಸಕ್ಕೆ ಕೋಟಿ ಕೋಟಿ ನಷ್ಟವಾಗಿದೆ. 2ನೇ ದಿನ ಅಂದಾಜು 7 ಸಾವಿರ ಕೋಟಿ ನಷ್ಟವಾಗಿದೆ. ಹೊಸದಾಗಿ 31 ಜನರಲ್ಲಿ ಸೋಂಕು ಶಂಕೆ ವ್ಯಕ್ತವಾಗಿದೆ.
ಕೊರೋನಾ ವೈರೆಸ್ ಎಫೆಕ್ಟ್ ನಿಂದಾಗಿ ಆರ್ಥಿಕ ವ್ಯವಸ್ಥೆ ಕುಸಿದಿದೆ. ರಾಜ್ಯ ಸರ್ಕಾರ ಬಂದ್ ನಿರ್ಧಾರ ಕೈಗೊಂಡ ಬೆನ್ನಲ್ಲೆ ಉದ್ಯಮಗಳು ಕೋಟಿ ಕೋಟಿ ನಷ್ಟ ಅನುಭವಿಸುತ್ತಿವೆ. ವಾರದ ಮಟ್ಟಿಗೆ ಲಾಕ್‍ಡೌನ್ ಆಗಿರೋ ರಾಜ್ಯದಲ್ಲಿ 2ನೇ ದಿನವೇ ಭರ್ತಿ 6.67 ಸಾವಿರ ಕೋಟಿ ನಷ್ಟವಾಗಿದೆ. ಹೋಟೆಲ್, ಮಾಲ್-ಥಿಯೇಟರ್, ಶೈಕ್ಷಣಿಕ ಸಂಸ್ಥೆಗಳು, ಮೆಟ್ರೋ, ಸಾರಿಗೆ ವ್ಯವಸ್ಥೆ, ಬೀದಿಬದಿ ವ್ಯಾಪಾರಿಗಳು ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ.
Advertisement
Advertisement
ಆರ್ಥಿಕತೆ ಮೇಲೆ ಕೊರೊನಾ ಸವಾರಿ
ಹೋಟೆಲ್ – 1,900 ಕೋಟಿ
ಕುಕ್ಕುಟೋದ್ಯಮಕ್ಕೆ – 1,500 ಕೋಟಿ
ಶೈಕ್ಷಣಿಕ ಸಂಸ್ಥೆಗಳು – 1,500 ಕೋಟಿ
ಟ್ರಾವೆಲ್ಸ್ – 250 ಕೋಟಿ
ಮೆಟ್ರೋ ಟ್ರೈನ್ – 1 ಕೋಟಿ
ಕೆಎಸ್‍ಆರ್‍ಟಿಸಿ – 52 ಲಕ್ಷ
ಬಿಎಂಟಿಸಿ – 45 ಲಕ್ಷ
ಬೆಂಗಳೂರಿನಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ- 50 ಲಕ್ಷ ನಷ್ಟವಾಗಿದೆ
Advertisement
ಎರಡೇ ದಿನಕ್ಕೆ ಆರ್ಥಿಕ ಇಲಾಖೆ ತತ್ತರಿಸಿ ಹೋಗಿದೆ. ಮುಂದಿನ 5 ದಿನ ಕಳೆಯೊದೊರಳಗೆ ಇಡೀ ಮಾರುಕಟ್ಟೆ ಹಣಕಾಸು ವ್ಯವಸ್ಥೆ ಕುಸಿಯಲಿದೆ ಅನ್ನೊದು ತಜ್ಞರ ಅಭಿಪ್ರಾಯ. ಈ ಪ್ರಕಾರ ಕೊರೋನಾ ನಷ್ಟ ತುಂಬಲು ವರ್ಷಗಳೇ ಬೇಕಾಗಬಹುದು ಎನ್ನಲಾಗುತ್ತಿದೆ.