ಬೆಂಗಳೂರು: ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿರೋ ಕೊರೊನಾ ವೈರೆಸ್ ನಿಂದ ಸಾವಿರಾರು ಜನ ಸಾವನ್ನಪ್ಪಿದ್ದಾರೆ. ಸಾವಿರಾರು ಜನರು ಸಾವಿನ ಸನಿಹದಲ್ಲಿದ್ದಾರೆ. ಸಾವಿರಾರು ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಇಡೀ ವಿಶ್ವವೇ ಕರೋನಾ ತಡೆಗೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುತ್ತಿದೆ. ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆ ಕೂಡಾ ಕೊರೊನಾ ವೈರಸ್ ತಡೆಗೆ ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
Advertisement
ಸಾರ್ವಜನಿಕ ಶಿಕ್ಷಣ ಇಲಾಖೆ ರಾಜ್ಯದ ಶಾಲೆಗಳಲ್ಲಿ ಯಾವುದೇ ಮಕ್ಕಳಿಗೆ ಜ್ವರದ ಲಕ್ಷಣ ಕಂಡು ಬಂದ್ರೆ ಆ ಮಕ್ಕಳಿಗೆ ಕಡ್ಡಾಯವಾಗಿ ರಜೆ ನೀಡಬೇಕು ಅಂತ ಎಲ್ಲಾ ಶಾಲೆಗಳಿಗೆ ಸೂಚನೆ ನೀಡಿದೆ. ಮಗುವಿಗೆ ಜ್ವರ ಕಡಿಮೆ ಆಗೋವರೆಗೂ ಕಡ್ಡಾಯ ರಜೆ ನೀಡಬೇಕು. ಅ ಮಗು ಸೂಕ್ತ ಚಿಕಿತ್ಸೆ ಪಡೆದು ಜ್ವರ ವಾಸಿಯಾದ ನಂತರವೇ ಮತ್ತೆ ಶಾಲೆಗೆ ಬರ ಮಾಡಿಕೊಳ್ಳಬೇಕು ಅಂತ ತಿಳಿಸಿದೆ. ಕೊರೊನಾ ಭೀತಿಯಿಂದ ಉಳಿದ ಮಕ್ಕಳಿಗೆ, ಪೋಷಕರಿಗೆ ಆತಂಕ ನಿವಾರಣೆ ಮಾಡೋ ನಿಟ್ಟಿನಲ್ಲಿ ಈ ಮಹತ್ವದ ಕ್ರಮವನ್ನ ಶಿಕ್ಷಣ ಇಲಾಖೆ ತೆಗೆದುಕೊಂಡಿದೆ. ಇದನ್ನೂ ಓದಿ: ಕೊರೊನಾ ವೈರಸ್ ಎಫೆಕ್ಟ್ – ಮುಕೇಶ್ ಅಂಬಾನಿಗೆ 5.09 ಶತಕೋಟಿ ಡಾಲರ್ ನಷ್ಟ
Advertisement
Advertisement
ಕೇವಲ ಮಕ್ಕಳು ಮಾತ್ರವಲ್ಲ, ಶಾಲೆಯಲ್ಲಿ ಶಿಕ್ಷಕರು, ಶಾಲಾ ಸಿಬ್ಬಂದಿ ಸೇರಿದಂತೆ ಯಾರಿಗೆ ಜ್ವರ ಕಂಡು ಬಂದರು ಅವರಿಗೆ ಕೂಡಲೇ ರಜೆ ಕೊಡಬೇಕು. ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಬೇಕು ಅಂತ ಎಲ್ಲಾ ಆಡಳಿತ ಮಂಡಳಿಗಳಿಗೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಸಂಪೂರ್ಣವಾಗಿ ಗುಣಮುಖವಾಗೋವರೆಗೆ ಎಲ್ಲರಿಗೂ ರಜೆ ಕೊಡಲು ಸೂಚನೆ ನೀಡಿದೆ. ಇಷ್ಟೇ ಅಲ್ಲ ಹಾಸ್ಟೆಲ್ ಗಳಲ್ಲಿ ಕೂಡಾ ವಿದ್ಯಾರ್ಥಿಗಳಿಗೆ ಜ್ವರ ಕಂಡು ಬಂದರೆ ಅವರನ್ನ ಪ್ರತ್ಯೇಕ ವಿಭಾಗದಲ್ಲಿ ಇರಿಸಬೇಕು. ಜ್ವರದಿಂದ ಬಳಲುತ್ತಿರೋ ಮಕ್ಕಳಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆ ಕೊಡಿಸಬೇಕು. ಅ ವಿದ್ಯಾರ್ಥಿಗಳು ಸಂಪೂರ್ಣವಾಗಿ ಗುಣಮುಖರಾದ ನಂತರವೇ ಎಲ್ಲರ ಜೊತೆ ತೊಡಗಿಸಿಕೊಳ್ಳಲು ಅವಕಾಶ ನೀಡಬೇಕು ಅಂತ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಇದನ್ನೂ ಓದಿ: ಸೂರ್ಯನಿಗೆ ಟಾರ್ಚ್ ಬಿಟ್ಟ ನಂತ್ರ ಕೊರೊನಾಗೆ ಔಷಧಿ ಕಂಡು ಹಿಡಿದ ನಿತ್ಯಾನಂದ