ಬೆಂಗಳೂರು: ಈಗ ಎಲ್ಲಿ ಹೋದರೂ ಕೊರೊನಾ ವೈರಸ್ ನದ್ದೇ ಮಾತು. ಸಿಲಿಕಾನ್ ಸಿಟಿಯ ಮಾಲ್‍ಗಳು, ಪಬ್‍ಗಳು, ದೇವಸ್ಥಾನಗಳು, ಮಾರ್ಕೆಟ್‍ಗಳು ಜನರಿಲ್ಲದೇ ಖಾಲಿ ಹೊಡೆಯುತ್ತಿವೆ. ಈ ವೈರಸ್‍ನ ಎಫೆಕ್ಟ್ ಈಗ ಲವರ್ಸ್‍ಗಳಿಗೂ ತಟ್ಟಿದೆ.
ದಿನಬೆಳಗಾದ್ರೆ ಸಾಕು, ಮಾಲ್‍ಗಳು, ಸಿನಿಮಾ ಥಿಯೇಟರ್ ಗಳಿಂದ ತುಂಬಿರುತ್ತಿದ್ದ ಪ್ರೇಮಿಗಳು, ಫ್ಯಾಮಿಲಿಗಳು ಈಗ ಮಾಲ್‍ಗಳ ಕಡೆ ಮುಖ ಮಾಡ್ತಿಲ್ಲ. ಜನ ಸೇರೋ ಜಾಗದಲ್ಲಿ ವೈರಸ್ ಹಬ್ಬುವ ಭೀತಿಯಲ್ಲಿದ್ದು, ಹೀಗಾಗಿ ಜನ ಕಡಿಮೆ ಇರೋ ಜಾಗಗಳ ಕಡೆಗೆ ಹೋಗುತ್ತಿದ್ದಾರೆ.
Advertisement
Advertisement
ನಗರದ ಕಬ್ಬನ್ ಪಾರ್ಕ್, ಲಾಲ್ ಬಾಗ್ ಸೇರಿದಂತೆ ಬಹುತೇಕ ಪಾರ್ಕ್‍ಗಳಿಗೆ ಪ್ರೇಮಿಗಳು ಹೋಗೋದು ಹೆಚ್ಚಾಗಿದ್ದು, ಇದಕ್ಕೆ ಸಾಥ್ ಎಂಬಂತೆ ಫ್ಯಾಮಿಲಿಗಳು ಕೂಡ ಪಾರ್ಕ್‍ಗಳ ಕಡೆಗೆ ಹೆಚ್ಚು ಮನಸ್ಸು ಮಾಡ್ತಿದ್ದಾರೆ.
Advertisement
ಮಾಲ್‍ಗಳು, ಸಿನಿಮಾ ಥಿಯೇಟರ್‍ಗಳಿಗೆ ಹೋದ್ರೆ ದುಡ್ಡು ಖರ್ಚಾಗೋದರ ಜೊತೆಗೆ ಕೊರೊನಾ ವೈರಸ್ ಹಬ್ಬಿವ ಭೀತಿ ಇದೆ. ಪಾರ್ಕ್‍ಗಳಿಗೆ ಬಂದ್ರೆ ಆರೋಗ್ಯದ ಜೊತೆಗೆ ದುಡ್ಡು ಕೂಡ ಉಳಿಯುತ್ತೆ ಅನ್ನೋದು ಕೆಲವರ ಮಾತು. ಈ ಪ್ರೇಮಿಗಳ ವಲಸೆಗೆ ಬೇಸಿಗೆ ಬಿಸಿಲು ಕೂಡ ಕಾರಣವಿರಬಹುದು. ಆದರೆ ಕೊರೊನಾ ವೈರಸ್ ಭೀತಿಯಂತೂ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ದಿನೇ ದಿನೇ ಹೆಚ್ಚಾಗ್ತಿದೆ.