ಬೆಂಗಳೂರು: ಕೊರೊನಾ ಎಫೆಕ್ಟ್, ಕುಡುಕರಿಗೂ ತಟ್ಟಿದ್ದು, ಮದ್ಯಪಾನ ಮಾಡಿ ವಾಹನ ಓಡಿಸುವವರು ಟ್ರಾಫಿಕ್ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದಾರೆ. ಸರ್.. ನಮ್ಮನ್ನ ಬಿಟ್ಬಿಡಿ. ಡ್ರಿಂಕ್ ಆಂಡ್ ಡ್ರೈವ್ ಮಷೀನ್‍ಗೆ ಊದಿದ್ರೆ ನಮ್ಗೂ ಕೊರೊನಾ ವೈರಸ್ ಬರುವ ಸಾಧ್ಯತೆ ಇದೆ. ನಾವು ಊದಲ್ಲ ಅಂದ್ರೆ ಊದಲ್ಲ ಎಂದು ಪಟ್ಟು ಹಿಡಿದಿದ್ದಾರೆ.
Advertisement
ಬೆಂಗಳೂರಿನ ಹಲಸೂರು ರಸ್ತೆಯಲ್ಲಿ ಟ್ರಾಫಿಕ್ ಪೊಲೀಸರು ಡ್ರಿಂಕ್ ಆ್ಯಂಡ್ ಡ್ರೈವ್ ಪ್ರಕರಣಗಳ ಕುರಿತು ತಪಾಸಣೆ ಮಾಡುತ್ತಿದ್ದ ವೇಳೆ ಕೆಲವರು ಈ ರೀತಿ ಹೇಳುತ್ತಿದ್ದರು. ಕೆಲವರು ಮಷೀನ್‍ಗೆ ಊದಿ ಪೊಲೀಸರಿಗೆ ಸಹಕರಿಸಿದರೆ, ಇನ್ನೂ ಕೆಲವರು ಬಿಟ್ಬಿಡಿ ಸರ್.. ಊದಿದರೆ ನಮಗೂ ಕೊರೊನಾ ಬರುವ ಸಾಧ್ಯತೆ ಇದೆ ಎನ್ನುತ್ತಿದ್ದರು.
Advertisement
Advertisement
ಉಸಿರಾಟ ಹಾಗೂ ಸ್ಪರ್ಶದಿಂದ ವೈರಸ್ ಹರಡಬಹುದು ಎಂಬ ಆತಂಕದಿಂದ ತಪಾಸಣಾ ಮಷೀನ್ ಗೆ ಊದಲು ಹಿಂದೇಟು ಹಾಕುತ್ತಿದ್ದಾರೆ. ಕೆಲ ದಿನಗಳಿಂದ ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆಯನ್ನು ಸಂಚಾರಿ ಪೊಲೀಸರು ತಾತ್ಕಾಲಿಕವಾಗಿ ನಿಲ್ಲಿಸಿದ್ದರು. ಹೀಗಾಗಿ ಕೆಲ ಕುಡುಕರು ಫುಲ್ ಬಿಂದಾಸ್ ಆಗಿದ್ದರು. ಆದರೆ ಸಂಚಾರಿ ಪೊಲೀಸರು ಇದೀಗ ಮತ್ತೆ ಫೀಲ್ಡ್ ಗೆ ಇಳಿದಿದ್ದು, ವಾಹನ ಸವಾರರು ಸಂಚಾರಿ ಪೊಲೀಸರಿಗೆ ಸಹಕರಿಸುತ್ತಿಲ್ಲ. ಹೀಗಾಗಿ ರಾತ್ರಿ ಕುಡುಕರನ್ನು ಮನವೋಲಿಸಿ ಊದಿಸೋದೇ ಸಂಚಾರಿ ಪೊಲೀಸರಿಗೆ ದೊಡ್ಡ ಕೆಲಸವಾಗಿದೆ.