ನವದೆಹಲಿ: ಹಲವು ಅನುಮಾನಗಳ ನಡುವೆ ಭಾರತದ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗೆ ಕೊರೊನಾದ ತವರು ಚೀನಾದ ಸಂಶೋಧನಾ ವರದಿಯಿಂದ ಬಲ ಬಂದಿದೆ.
ಹೆಚ್‍ಸಿಕ್ಯೂ ಔಷಧಿಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ನೀಡಿರುವ ಚೀನಾ, ಕೊರೊನಾ ಸಾವಿನ ಪ್ರಮಾಣ ನಿಯಂತ್ರಿಸುವಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ಮಹತ್ವದ ಪಾತ್ರ ವಹಿಸುತ್ತಿದೆ ಎಂದಿದೆ.
Advertisement
Advertisement
ಚೀನಾ ಸರ್ಕಾರ, ನೇಚರ್ ಸೈನ್ಸ್ ಫೌಂಡೇಶನ್ ಮತ್ತು ಮಾ ಯುನ್ ಫೌಂಡೇಶನ್ ನೆರವಿನೊಂದಿಗೆ ‘ಸೈನ್ಸ್ ಚೀನಾ ಲೈಫ್ ಸೈನ್ಸಸ್ ಜರ್ನಲ್’ ನಡೆಸಿದ ಕ್ಲಿನಿಕಲ್ ಟ್ರಯಲ್‍ನಿಂದ ಈ ಮಾಹಿತಿ ಲಭ್ಯವಾಗಿದ್ದು, ಅಂತಿಮ ವರದಿ ಬಳಿಕ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ಬಗ್ಗೆ ಇರುವ ಹಲವು ಅನುಮಾನಗಳಿಗೆ ತೆರೆ ಬೀಳಲಿದೆ.
Advertisement
ವುಹಾನ್‍ನ ಟೋಂಗ್ಜಿ ಆಸ್ಪತ್ರೆಯಲ್ಲಿ 568 ಕೊರೊನಾ ರೋಗಿಗಳ ಮೇಲೆ ಫೆಬ್ರವರಿ 1 ಮತ್ತು ಏಪ್ರಿಲ್ 8ರ ಅವಧಿಯಲ್ಲಿ ನಡೆದ ಕ್ಲಿನಿಕಲ್ ಟ್ರಯಲ್ ಬಳಿಕ ಪ್ರೀ ಪ್ರಿಂಟ್‍ನಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಹೀಗಾಗಿ ಪುನರ್ ವಿಮರ್ಶೆ ಬಳಿಕ ಚೀನಾ ಸರ್ಕಾರದಿಂದ ಈ ಬಗ್ಗೆ ಅಧಿಕೃತ ಘೋಷಣೆಯಾಗುವ ಸಾಧ್ಯತೆ ಇದೆ.
Advertisement
‘ದಿ ಫೆಡರೇಶನ್ ಆಫ್ ಅಮೆರಿಕನ್ ಸೊಸೈಟೀಸ್ ಫಾರ್ ಎಕ್ಸ್‌ಪರಿಮೆಂಟಲ್ ಬಯಾಲಜಿ’ ಕಳೆದ ಸಂಚಿಕೆಯಲ್ಲಿ ಅಮೆರಿಕದ ಕೆಲವು ತಜ್ಞರು ಕೊರೊನಾ ವಿರುದ್ಧ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ಪರಿಣಾಮಕಾರಿಯಾಗಿಲ್ಲ, ಕೊರೊನಾ ನಿಯಂತ್ರಿಸುವಲ್ಲಿ ವಿಫಲವಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದರು. ಹಲವು ಭಿನ್ನಾಭಿಪ್ರಾಯಗಳ ನಡುವೆ ಬ್ರೆಜಿಲ್, ಇಸ್ರೇಲ್, ಆಸ್ಟ್ರೇಲಿಯಾ, ಕೆನಡಾ ಸೇರಿದಂತೆ ಹಲವಾರು ದೇಶಗಳು ಕೊರೊನಾ ಪ್ರಕರಣಗಳಿಗೆ ಎಚ್‍ಸಿಕ್ಯು ಬಳಕೆ ಮಾಡುತ್ತಿದ್ದು ಚೀನಾ ನೀಡುವ ವರದಿ ಪ್ರಾಮುಖ್ಯತೆ ಪಡೆದುಕೊಳ್ಳಲಿದೆ.