ಬಾಗಲಕೋಟೆ: ದೆಹಲಿಯ ನಿಜಾಮುದ್ದೀನ್ ಮರ್ಕಜ್ ನಲ್ಲಿಯ ಜಮಾತ್ ನಲ್ಲಿ ಭಾಗಿಯಾದ ತಬ್ಲೀಘಿಗಳಿಂದ ವೇಗವಾಗಿ ಕೊರೊನಾ ಹಬ್ಬುತ್ತಿದೆ. ಈ ಹಿನ್ನೆಲೆ ಮೂವರು ಮುಸ್ಲಿಂ ವ್ಯಕ್ತಿಗಳ ಮೇಲೆ ಬಾಗಲಕೋಟೆಯಲ್ಲಿ ಹಲ್ಲೆ ನಡೆಸಲಾಗಿದೆ.
ಜಿಲ್ಲೆಯ ಮುಧೋಳ ತಾಲೂಕಿನ ಬಿದರಿ ಗ್ರಾಮದಲ್ಲಿ ಘಟನೆ ನಡೆದಿದ್ದು, ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಗ್ರಾಮದ ಮುಸ್ಲಿಂ ವ್ಯಕ್ತಿಗಳನ್ನು ಮಾರ್ಗಮಧ್ಯೆ ನಿಲ್ಲಿಸಿ ಒದ್ದು, ಕೋಲಿನಿಂದ ಹೊಡೆದು ಹಲ್ಲೆ ಮಾಡಲಾಗಿದೆ. ನಿಮ್ಮಿಂದಲೇ ಕೊರೊನಾ ಹಬ್ಬುತ್ತಿದೆ. ನಮ್ಮ ಗ್ರಾಮದ ಕಡೆ ಯಾಕೆ ಬರುತ್ತಿದ್ದೀರಿ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಲಾಗಿದೆ.
Advertisement
Advertisement
ನಿಮ್ಮ ಗ್ರಾಮದ ಕಡೆ ಬರುವುದಿಲ್ಲ ಬಿಟ್ಟು ಬಿಡಿ ಎಂದು ಮುಸ್ಲಿಂ ವ್ಯಕ್ತಿಗಳು ಬೇಡಿಕೊಂಡಿದ್ದಾರೆ. ಗ್ರಾಮದ ಕಡೆ ಎಂದೂ ಕಾಲಿಡಬೇಡಿ ಎಂದು ಎಚ್ಚರಿಕೆ ನೀಡಿ ಗ್ರಾಮಸ್ಥರು ಬಿಟ್ಟು ಕಳುಹಿಸಿದ್ದಾರೆ. ಮುಧೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Advertisement
ಕಳೆದ 24 ಗಂಟೆಯಲ್ಲಿ 27 ಜನ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಈ ಮೂಲಕ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ ನೂರರ ಗಡಿ ದಾಟಿದೆ. ಭಾನುವಾರ ಸುಮಾರು 12 ಜನರನ್ನು ಕೊರೊನಾ ಬಲಿ ತೆಗೆದುಕೊಂಡಿದೆ ಎಂದು ವರದಿಯಾಗಿದೆ. ಇನ್ನು ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 4 ಸಾವಿರದ ಗಡಿ ದಾಟಿದೆ.
Advertisement
ಭಾನುವಾರ ಒಂದೇ ದಿನ ಸುಮಾರು 500ಕ್ಕೂ ಅಧಿಕ ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಕಳೆದ ನಾಲ್ಕು ದಿನಗಳಿಂದ ಸೋಂಕಿಂತರ ಸಂಖ್ಯೆ ದ್ವಿಗುಣವಾಗಿ ಏರಿಕೆಯಾಗ್ತಿರೋದು ಆತಂಕಕ್ಕೆ ಕಾರಣವಾಗಿದೆ. ಏಪ್ರಿಲ್ 1ರಂದು ದೇಶದಲ್ಲಿ ಅಂದಾಜು 2 ಸಾವಿರ ಸೋಂಕಿತರಿದ್ದರು. ಕೇವಲ ನಾಲ್ಕೈದು ದಿನಗಳಲ್ಲಿ ಈ ಸಂಖ್ಯೆ ಡಬಲ್ ಆಗಿದೆ.
ದೆಹಲಿಯ ನಿಜಾಮುದ್ದೀನ್ ಮರ್ಕಜ್ ನಲ್ಲಿಯ ಜಮಾತ್ ನಲ್ಲಿ ಭಾಗಿಯಾದ ತಬ್ಲೀಘಿಗಳಿಂದ ವೇಗವಾಗಿ ಕೊರೊನಾ ಹಬ್ಬುತ್ತಿದೆ. ಶೇ.30ರಷ್ಟು ಕೊರೊನಾ ಸೋಂಕಿತ ಪ್ರಕರಣಗಳು ದೆಹಲಿ ಜಮಾತ್ ಲಿಂಕ್ ಹೊಂದಿವೆ. ಇದೇ ರೀತಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾದಲ್ಲಿ ಈ ಮುಂದಿನ ಏಳು ದಿನಗಳಲ್ಲಿ ದ್ವಿಗುಣವಾಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ.