-ಡಿಸಿ, ಎಸಿ, ತಹಶೀಲ್ದಾರ್ ಬಂದರೂ ನಾನು ವ್ಯಾಕ್ಸಿನ್ ಹಾಕಿಸಿಕೊಳ್ಳಲ್ಲ
ಯಾದಗಿರಿ: ಜನರಲ್ಲಿ ಕೋವಿಡ್ ವ್ಯಾಕ್ಸಿನ್ ಬಗ್ಗೆ ಮೌಢ್ಯತೆ ಮತ್ತೆ ಮುಂದುವರಿದಿದ್ದು, ಲಸಿಕೆ ನೀಡಲು ಮನೆಗೆ ತೆರಳಿದ್ದ ಅಧಿಕಾರಿಗಳ ಕೈಯಲ್ಲಿದ್ದ ಲಸಿಕೆ ಕಸಿದು, ಅವರನ್ನು ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಲಾಗಿದೆ.
Advertisement
ಯಾದಗಿರಿ ತಾಲೂಕಿನ ವಿಶ್ವಾಸಪುರ ತಾಂಡದಲ್ಲಿ ಈ ಘಟನೆ ನಡೆದಿದ್ದು, ತಾಂಡ ನಿವಾಸಿ ಸೋಮಲಾಲ್ ಈ ಕೃತ್ಯ ಎಸಗಿದ ವ್ಯಕ್ತಿಯಾಗಿದ್ದಾರೆ. ಆರೋಗ್ಯ ಇಲಾಖೆ ಕಂದಾಯ ಇಲಾಖೆ ಸಿಬ್ಬಂದಿಗೆ ನಿಂದಿಸಿದ ಸೋಮ್ ಲಾಲ್, ಕೆಟ್ಟ, ಕೆಟ್ಟ ಪದಗಳನ್ನು ಬಳಸಿ ಬಾಯಿಗೆ ಬಂದ ಹಾಗೆ ಬೈದಿದ್ದಾನೆ. ನನ್ನ ಮೇಲೆ ಕೇಸ್ ಹಾಕಿ, ನಾನು ಕೋರ್ಟ್‍ಗೆ ಬಂದು ಮಾತನಾಡುತ್ತೇನೆ. ಯಾವುದೇ ಕಾರಣಕ್ಕೂ ವ್ಯಾಕ್ಸಿನ್ ಹಾಕಿಸಿಕೊಳ್ಳಲ್ಲ. ಡಿಸಿ, ಎಸಿ, ತಹಶೀಲ್ದಾರ್ ಬಂದರೂ ನಾನು ವ್ಯಾಕ್ಸಿನ್ ಹಾಕಿಸಿಕೊಳ್ಳಲ್ಲ ಎಂದಿದ್ದಾರೆ. ಇದನ್ನೂ ಓದಿ: ಮಗನ ಆರೋಗ್ಯ ವಿಚಾರಿಸುತ್ತಾ ರಾತ್ರಿಯಿಡೀ ನಿದ್ದೆಗೆಟ್ಟ ಶಾರೂಖ್ ದಂಪತಿ!
Advertisement
Advertisement
ನೀವು ಯಾದಗಿರಿಯಿಂದಾನೂ ಬನ್ನಿ ದಿಲ್ಲಿಯಿಂದಾದರೂ ಬನ್ನಿ ನಾ ಹಾಕಿಸಿಕೊಳ್ಳಲ್ಲ ಎಂದು ಸೋಮ್ ಲಾಲ್ ಅಸಭ್ಯ ವರ್ತನೆ ತೋರಿದ್ದಾನೆ. ಸೋಮ್ ಲಾಲ್ ವರ್ತನೆಯಿಂದ ಬೇಸರಗೊಂಡ ಅಧಿಕಾರಿಗಳು ಲಸಿಕೆ ನೀಡದೇ ವಾಪಸಾಗಿದ್ದಾರೆ. ಇದನ್ನೂ ಓದಿ: ಮಾಜಿ ಶಾಸಕ ಕಟ್ಟಾ ಸುಬ್ರಮಣ್ಯ ನಾಯ್ಡು ವಿರುದ್ಧ ಎಫ್‍ಐಆರ್
Advertisement